ಪುತ್ತೂರು: ಶ್ರೀ ಲಕ್ಷ್ಮಿ ಹೋಟೆಲ್ ನಲ್ಲಿ ಗುರುದೇವ ಸೇವಾ ಬಳಗದ ಮಾಸಿಕ ಸಭೆ ಸುಧೀರ್ ನೋಂಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಒಡಿಯೂರು ತುಳುನಾಡ ಜಾತ್ರೆ ಮತ್ತು ತುಳುನಾಡ ರಥೋತ್ಸವದ ಪ್ರಯುಕ್ತ ಫೆಬ್ರವರಿ ನಾಲ್ಕರಂದು ಮಹಾಲಿಂಗೇಶ್ವರ ರಥ ಬೀದಿಯಿಂದ ಹೊರಟ ಹೊರೆ ಕಾಣಿಕೆಯ ಸಮರ್ಪಣೆ ಶ್ರೀ ಒಡಿಯೂರು ಕ್ಷೇತ್ರಕ್ಕೆ ಸಮರ್ಪಿಸುವಲ್ಲಿ ಸಹಕರಿಸಿದವರಿಗೂ ಅಭಿನಂದನೆಯನ್ನು ಸಲ್ಲಿಸಲಾಯಿತು.
ಸಭೆಯಲ್ಲಿ ಒಡಿಯೂರು ತುಳುನಾಡ ಜಾತ್ರೆ ಮತ್ತು ತುಳುನಾಡ ರಥೋತ್ಸವದ ಕಾರ್ಯಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಗ್ರಾಮವಿಕಾಸ ಯೋಜನಾ ಯೋಜನಾಧಿಕಾರಿ ಮಾಂತೇಶ್ ಭಂಡಾರಿ, ಒಡಿಯೂರು ಹೊರೆ ಕಾಣಿಕೆ ಜಿಲ್ಲಾ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶ್ರದ್ಧೆ ಭಕ್ತಿಯಿಂದ ನಮ್ಮನ್ನು ನಾವು ಗುರು ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಸಂತೋಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಸುಧೀರ್ ನೋಂಡ ಅವರು ಸ್ವಾಗತಿಸಿ, ಅನಿಸಿಕೆಯನ್ನು ವ್ಯಕ್ತಪಡಿಸಿ ಕಾರ್ಯಾಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಹಾಗೂ ವಿಶ್ವನಾಥ ಶೆಟ್ಟಿ ಸಾಗು ರನ್ನು ಶಾಲು ಹಾಕಿ ಗೌರವಿಸಿದರು. ಸಭೆಯಲ್ಲಿ ಜಯಪ್ರಕಾಶ್ ರೈ, ಭವಾನಿ ಶಂಕರ್ ಶೆಟ್ಟಿ, ಅಮ್ಮಣ್ಣ ರೈ ಉಪಸ್ಥಿತರಿದ್ದು, ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಾರತೀ ರೈ ಪ್ರಾರ್ಥಿಸಿದರು. ಶಶಿ ಡಿ, ನವ್ಯ ಎಸ್, ಸುಜಾತ, ಸುನಂದ ರೈ ಉಪಸ್ಥಿತರಿದ್ದರು.