ಪುಣಚ: ಪುಣಚ ಗ್ರಾಮದ ಹಿತ್ತಿಲು ಎಂಬಲ್ಲಿ ದೊಡ್ಡಮನೆ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿರುವ ಶ್ರೀ ಸಪರಿವಾರ ನಾಗಬ್ರಹ್ಮ ಸ್ಥಾನದಲ್ಲಿ ಪ್ರತಿಷ್ಠಾವರ್ಧಂತಿ ಉತ್ಸವ ಫೆ.18ರಂದು ನಡೆಯಲಿದೆ.
ಬೆಳಿಗ್ಗೆ ಶಾಂತಿಗೋಡು ಕೃಷ್ಣ ಶಗ್ರಿತ್ತಾಯರವರ ನೇತೃತ್ವದಲ್ಲಿ ಅಭಿಷೇಕ, ನಾಗತಂಬಿಲ ಸೇವೆ, ಪರಿವಾರ ದೈವಗಳಿಗೆ ತಂಬಿಲಸೇವೆ, ಹರಿಕೆ, ಮಹಾಪೂಜೆ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೊಡ್ಡಮನೆ ಕುಟುಂಬಸ್ಥರ ಪ್ರಕಟನೆ ತಿಳಿಸಿದೆ.