ಜೋಗಿಬೆಟ್ಟು:ಬೃಹತ್ ಉಚಿತ ಆರೋಗ್ಯ ಶಿಬಿರ

0

ಉಪ್ಪಿನಂಗಡಿ: ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು, ಖುವ್ವತುಲ್ ಇಸ್ಲಾಂ ಯಂಗ್ ಮೆನ್ಸ್ ಎಸೋಸಿಯೇಶನ್ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಉಪ್ಪಿನಂಗಡಿ ಸಮೀಪದ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿಯ ವಠಾರದಲ್ಲಿ ಮೆಗಾ ಮೆಡಿಕಲ್ ಕ್ಯಾಂಪಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಫೆ.16ರಂದು ನಡೆಯಿತು.

ಬೃಹತ್ ಆರೋಗ್ಯ ಶಿಬಿರದಲ್ಲಿ ದೇರಳಕಟ್ಟೆ ಯೇನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡ ತಪಾಸಣೆ ನಡೆಸಿದರು. ಬಿಸಿರೋಡ್ ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಹಾಗೂ ಪರ್ಲ್ ಸಿಟಿ ಲ್ಯಾಬೊರೇಟರಿ ಸಹಭಾಗಿತ್ವ ನೀಡಿದ ಕಾರ್ಯಕ್ರಮದಲ್ಲಿ 552 ಫಲಾನುಭವಿಗಳ ತಪಾಸಣೆ ಹಾಗೂ ಸೂಕ್ತವಾದ ಸಲಹೆ, ಔಷಧಿ ವಿತರಣೆ ನಡೆಯಿತು. 101 ಮಂದಿಗೆ ಉಚಿತ ಕನ್ನಡಕ ವಿತರಿಸಿದರು.

ಶಿಬಿರವನ್ನು ಎಂ.ಫ್ರೆಂಡ್ಸ್ ಕಾರ್ಯಾಧ್ಯಕ್ಷ ಸುಜಾಹ್ ಮಹಮ್ಮದ್ ಉದ್ಘಾಟಿಸಿದರು.ಮಸೀದಿ ಅಧ್ಯಕ್ಷ ಅಬೂಬಕರ್ ಪುತ್ತು ಅಧ್ಯಕ್ಷತೆ ವಹಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ರೈತಬಂಧು ಮಾಲಕ ಶಿವಶಂಕರ ನಾಯಕ್, ಫ್ರೆಂಡ್ಸ್ ಫಾರ್ ಪೂವರ್ ಮುಖ್ಯಸ್ಥ ಮಹಮ್ಮದ್ ಕಳವಾರ್, ಡಾ.ವಿನೀತಾ ಯೇನಪೋಯ, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ಮಾಜಿ ಅಧ್ಯಕ್ಷೆ ಅನುರಾಧಾ ಶೆಟ್ಟಿ, ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗುಣಕರ ಅಗ್ನಾಡಿ, ಎಂ.ಫ್ರೆಂಡ್ಸ್ ಪ್ರದಾನ ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಕೋಶಾಧಿಕಾರಿ ಝುಬೈರ್ ಬುಳೇರಿಕಟ್ಟೆ, ಉಪಾಧ್ಯಕ್ಷ ಡಾ. ಮುಬಶ್ಶಿರ್, ಇಳಂತಿಲ ಪಂಚಾಯತ್ ಸದಸ್ಯ ಯೂಸುಫ್ ಪೆದಮಳೆ, ರೋಯಲ್ ಗ್ರೂಪಿನ ಕೆಎಸ್ ರಾಝಿಕ್, ಖುವ್ವತುಲ್ ಇಸ್ಲಾಂ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಂ.ಜಿ. ಅಶ್ರಫ್, ನೇತ್ರಾವತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಫಾರೂಕ್ ಝಿಂದಗಿ, ಬನ್ನೆಂಗಳ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಮ್ಮದ್ ಕುಂಞಿ, ಮಸೀದಿ ಕಾರ್ಯದರ್ಶಿ ಜಾಫರ್, ಉಪಾಧ್ಯಕ್ಷ ಯಾಕೂಬ್ ಹುಸೈನ್ ಅಗ್ನಾಡಿ, ಬ್ಯಾರಿ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಅಬ್ಬಾಸ್ ಹಾಜಿ ಜೋಗಿಬೆಟ್ಟು, ಪರ್ಲ್ ಸಿಟಿ ಲ್ಯಾಬ್ ನ ಸಲೀಮ್, ಇಬ್ರಾಹಿಂ ಅಗ್ನಾಡಿ ಮೊದಲಾದವರು ಉಪಸ್ಥಿತರಿದ್ದರು.

ಡಾ. ಆಶಿಕಾ ಆಯಿಷಾ ಫರ್ಹಾನಾ ಮಠ ಮಹಿಳೆಯರಿಗೆ ಆರೋಗ್ಯ ಮಾಹಿತಿ ನೀಡಿದರು. ಎಂ.ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿದರು.ಮಸೀದಿ ಖತೀಬ್ ಖಲಂದರ್ ಮದನಿ ಪ್ರಾರ್ಥಿಸಿದರು. ಯೇನಪೋಯ ಸಂಪರ್ಕಧಿಕಾರಿ ಅಬ್ದುಲ್ ರಝಾಕ್ ಶಿಬಿರದ ಮಾಹಿತಿ ನೀಡಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಉಪ್ಪಿನಂಗಡಿ, ನೇತ್ರಾವತಿ ಆಟೋ ಚಾಲಕ ಮಾಲಕರ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಬನ್ನೆಂಗಳ, ಎಸ್.ಡಿ.ಎಂ.ಸಿ. ಸರಕಾರಿ ಶಾಲೆ ಬನ್ನೆಂಗಳ, ಜಿಸಿಸಿ ಜೋಗಿಬೆಟ್ಟು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here