ಪುತ್ತೂರು: ಮುಂಚೂಣಿಯಲ್ಲಿರುವ ವಿಮಾನಯಾನ ಕ್ಷೇತ್ರ ಈಗ ನಗರಗಳಿಗೆ ಮೀಸಲಾಗಿಲ್ಲ, ಆಗಸದಲ್ಲಿ ಹಕ್ಕಿಯಂತೆ ಹಾರಬೇಕು ಎಂಬ ಮಾನವನ ಆಸೆಯ ಪ್ರತೀಕವಾಗಿ ಹುಟ್ಟಿದ್ದು ವಿಮಾನ. ಮೋಡಗಳ ಮರೆಯಲ್ಲಿ ತೇಲುವ ರೋಮಾಂಚನ, ಸಮಯದ ಉಳಿತಾಯ, ವಿಮಾನಯಾನದ ಜನಪ್ರಿಯತೆಗೆ ಕಾರಣ. ಇದರಿಂದಾಗಿ ವಿಮಾನಯಾನ ಉದ್ಯಮವು ಬಹುವಿಸ್ತಾರವಾಗಿ ಬೆಳೆದಿದೆ.ಜತೆಗೆ ಹಲವಾರು ಉದ್ಯೋಗಾವಕಾಶಗಳನ್ನು ತೆರೆದಿಟ್ಟಿದೆ ಎಂದು ಪುತ್ತೂರಿಗೆ ಭೇಟಿ ನೀಡಿದ ಬೆಂಗಳೂರು ಸ್ಕೈಬರ್ಡ್ ಏವಿಯೇಷನ್ ಇದರ ಪ್ರಾಂಶುಪಾಲ ಕೆಂಪರಾಜು ಸುದ್ದಿ ಮಾಧ್ಯಮ ಪ್ರತಿನಿದಿಯೊಂದಿಗೆ ಮಾತುಕತೆ ವೇಳೆ ತಿಳಿಸಿದ್ದಾರೆ.
2015ರಲ್ಲಿ ಆರಂಭಗೊಂಡ ಮುಂಬೈ ಮೂಲದ ಆಪ್ಟೆಕ್ ಮತ್ತು ಸಿದ್ಧಾರ್ಥ ಗ್ರೂಪ್ ನ ಸಹಭಾಗಿತ್ವದಲ್ಲಿ, ಪುತ್ತೂರಿನಲ್ಲಿ ಮೊದಲ ಬಾರಿಗೆ ವಿಮಾನಯಾನ ವೃತ್ತಿ ಮಾರ್ಗದರ್ಶನ ಕೋರ್ಸ್ ಅನ್ನು ಪರಿಚಯಿಸಿತು. ಈ ಸಮಯದಲ್ಲಿ, ಕರ್ನಾಟಕದಲ್ಲಿ ಯಾವುದೇ ವಿಮಾನಯಾನ ಕೋರ್ಸು ಲಭ್ಯವಿರಲಿಲ್ಲ. ಈ ಪ್ರಾರಂಭವು ಪುತ್ತೂರಿನಲ್ಲಿ ವಿಮಾನಯಾನ ಶಿಕ್ಷಣದಲ್ಲಿ ಪರಿವರ್ತನೆಯ ಪ್ರಯಾಣವನ್ನು ಪ್ರಾರಂಭಿಸಿತು ಮತ್ತು ಅನೇಕ ಆಸಕ್ತ ವಿದ್ಯಾರ್ಥಿಗಳಿಗೆ ಅವರ ಕನಸುಗಳನ್ನು ಸಾಧಿಸಲು ಮಾರ್ಗದರ್ಶಿಯಾಯಿತು. 2015 ರಿಂದ ಪ್ರಗತಿ ಸ್ಟಡಿ ಸೆಂಟರ್ ಮೂಲಕ ವಿದ್ಯಾರ್ಥಿಗಳನ್ನು ವಿಮಾನಯಾನ ಕ್ಷೇತ್ರಕ್ಕೆ ಪುತ್ತೂರಿನಿಂದ ಕಳುಹಿಸುತ್ತಿದ್ದು, ಕರ್ನಾಟಕದಲ್ಲಿ ಅಧಿಕೃತ ವಿಮಾನಯಾನ ಕೋರ್ಸುಗಳನ್ನು ಪರಿಚಯಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ಇಂಡಿಗೋ, ಎಮಿರೇಟ್ಸ್ ಮತ್ತು ಕತಾರ್ ಏರ್ ವೇಸ್ ಮುಂತಾದ ಪ್ರಮುಖ ಏರ್‌ಲೈನ್ಸ್ ಗಳಲ್ಲಿ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳು ಇಂದು ನಮ್ಮ ಸಂಸ್ಥೆಯ ಹೆಮ್ಮೆ.

ಅಂತರಾಷ್ಟ್ರೀಯ ಮತ್ತು ದೇಶೀಯವಾಗಿ ವಿಮಾನಯಾನ ಹೆಚ್ಚಿದಂತೆ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಯುವಕ-ಯುವತಿಯರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಬೇಡಿಕೆಗೆ ತಕ್ಕಂತೆ ಸ್ಕೈಬರ್ಡ್ ಏವಿಯೇಷನ್ ಪುತ್ತೂರಿನಲ್ಲಿ ಪ್ರಗತಿ ಸ್ಟಡಿ ಸೆಂಟರ್ ಸಹಯೋಗದಲ್ಲಿ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್ ಕಾಲೇಜು ಆರಂಭಿಸಿದ್ದು, ವಿಮಾನಯಾನಕ್ಕೆ ಸಂಬಂಧಿಸಿದಂತೆ ವಿವಿಧ ಕೋರ್ಸುಗಳನ್ನು ಪರಿಚಯಿಸಿದ್ದು,ಆಡಳಿತ, ಲೆಕ್ಕಪತ್ರ, ಮಾನವ ಸಂಪನ್ಮೂಲ ನಿರ್ವಹಣೆ, ಅತಿಥಿ ಸತ್ಕಾರ,ಸರಕು ಸಾಗಾಟ ಮತ್ತಿತ್ತರ ವಿಷಯಗಳೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯನ್ನು ನೀಡಿ ವಿಮಾನಯಾನ ಕ್ಷೇತ್ರದ ಪರಿಣಿತರಾಗುವಂತೆ ಮಾಡುವಲ್ಲಿ ಮುಂದುವರೆದಿದೆ ಎಂದು ಸ್ಕೈಬರ್ಡ್ ಏವಿಯೇಷನ್ ಬೆಂಗಳೂರು ಇದರ ಪ್ರಾಂಶುಪಾಲರಾದ ಕೆಂಪರಾಜು ತಿಳಿಸಿದ್ದಾರೆ.
ಪ್ರಸ್ತುತ ಪುತ್ತೂರಿನಲ್ಲಿ ಪಿಯುಸಿ ಹಾಗೂ ಪದವಿಯಾದವರಿಗೆ International Diploma in Aviation, Hospitality & Travel Mngmt (1 Year), International Diploma in Airport Ground Handling (6 Months),Air cargo Management, Airport Ramp Operations, Load planning and DGR , Air fare and Ticketing, Airline customer service ಮಾತ್ರವಲ್ಲದೇ ವಿವಿಧ ಸರ್ಟಿಫಿಕೇಟ್ ಕೋರ್ಸುಗಳನ್ನು ನೀಡಲಾಗುತ್ತಿದೆ. BBA in Aviation Mngmt.(3 Years), MBA in Airline Airport Mngmt. (2 Years), International Diploma in Airline & Airport Operations (1 Year), International Diploma in Air hostess / Cabin Crew Training (8 Months) ಕೋರ್ಸ್ ಗಳು ಲಭ್ಯವಿದೆ.
ಸಂಸ್ಥೆಯಲ್ಲಿ ಕೋರ್ಸು ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಇಂಡಿಗೋ, ಏರ್ ಇಂಡಿಯಾ, ಸ್ಟಾರ್ ಏರ್, ಸ್ಪೈಸ್ ಜೆಟ್, ಅಕಾಸ, ಏರ್ ಇಂಡಿಯಾ ಸ್ಯಾಟ್ಸ್, ಗ್ಲೋಬ್ ಗ್ರೌಂಡ್ ಇಂಡಿಯಾ, ಸೆಲಿಬಿ,BIAL, BCD Travel,VFS Global Menzies Babba Aviation UW, Omulance/ GMR, Alorica-Amazon, DHL, Blue Dart ಮುಂತಾದ ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ.
ಸ್ಕೈಬರ್ಡ್ ಏವಿಯೇಷನ್ ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡು ಬೆಂಗಳೂರು ನಗರ / JAINX ವಿಶ್ವವಿದ್ಯಾನಿಲಯದಲ್ಲಿ ಸಂಯೋಜನೆಗೊಂಡು AICTE ಇಂದ ಅನುಮೋದನೆಗೊಂಡಿದೆ. ಎರೋಸ್ಪೇಸ್ ಮತ್ತು ಏವಿಯೇಷನ್ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಸ್ಕಿಲ್ ಇಂಡಿಯಾದ ಜೊತೆ ಸಂಯೋಜನೆಗೊಂಡಿದೆ. ಇದಲ್ಲದೇ ಸ್ಕೈಬರ್ಡ್ ಏವಿಯೇಷನ್ ಸಂಸ್ಥೆಯ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ (BCAS South India) ರಿಂದ ಅನುಮೋದನೆಗೊಂಡಿದೆ.
ಸ್ಕೈಬರ್ಡ್ ಏವಿಯೇಷನ್ ಕಾಲೇಜಿಗೆ ಲಭಿಸಿದ ಹಲವು ಪ್ರಶಸ್ತಿಗಳು:
ಸ್ಕೈಬರ್ಡ್ ಏವಿಯೇಷನ್ 2012-13 ರಿಂದ ಇದುವರೆಗೂ ಸತತವಾಗಿ ಉತ್ತಮ ವಿಮಾನಯಾನ ತರಬೇತಿ ಸಂಸ್ಥೆ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಸಂಸ್ಥೆಯೆಂದು ಪ್ರಶಸ್ತಿ ಗಳಿಸಿದೆ. 2014ರಲ್ಲಿ Best placement Award Global Empire Events Women’s Leader with BizNation, TV at crowne plaza Dubai, UAE, 2018ರಲ್ಲಿ Best institution Award, 2019ರಲ್ಲಿ Number one Aviation institute Award, 2023 ರಲ್ಲಿ ಸಂಸ್ಥೆಯ ಅಧ್ಯಕ್ಷೆ ಸುಜಾತ ಬೈರಿ ರವರು ಉತ್ತಮ ಮಹಿಳಾ ಉದ್ಯಮಿ Icon of Asia, Global Empire Events Women’s Leader with BizNation TV at crowne plaza Dubai, 2023 ರಲ್ಲಿ Icon of Asia, Global Empire Events Women’s Leader with BizNation TV at Delhi ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಸ್ಕೈಬರ್ಡ್ ಏವಿಯೇಷನ್ ಕಾಲೇಜಿನ ಶಾಖೆಗಳು:
ಸ್ಕೈಬರ್ಡ್ ಏವಿಯೇಷನ್ ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ ಹೈದರಾಬಾದ್, ತೆಲಂಗಾಣ, ನವಿ ಮುಂಬೈನ ವಾಶಿ, ಮುಂಬೈನ ಘಾಟ್ಕೋಪರ್, ಬಳ್ಳಾರಿ, ದಾವಣಗೆರೆ, ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿದೆ.
2015ರಲ್ಲಿ ಪ್ರಗತಿ ಸ್ಟಡಿ ಸೆಂಟರ್ ಮೂಲಕ ಸ್ಕೈ ಬರ್ಡ್ ಏವಿಯೇಷನ್ ಸಂಸ್ಥೆಯಲ್ಲಿ ತರಬೇತಿ ಪಡೆದ ಪುತ್ತೂರಿನ ಪ್ರಥಮ ವಿದ್ಯಾರ್ಥಿ ಚೇತನ್ ಟಿ ನಾಯ್ಕ್ ಬೆಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸ್ಯಾಟ್ಸ್ ನ ಎಡ್ಮಿನ್ ಸೀನಿಯರ್ ಕೋ-ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್ ಕಾರ್ಯದರ್ಶಿ ಗೋಕುಲ್ ನಾಥ್ ಪಿ.ವಿ ತಿಳಿಸಿದ್ದಾರೆ.