ಬಡಗನ್ನೂರು :ಬಡಗನ್ನೂರು ಗ್ರಾ.ಪಂ. 2024-25 ನೇ ಸಾಲಿನ ವಿಶೇಷ ಚೇತನರ ವಿಶೇಷ ಗ್ರಾಮ ಸಭೆಯು ಫೆ.18 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ತಾಲೂಕು ವಿಶೇಷ ಚೇತನರ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಶೇಷ ಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಲ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ವಿಶೇಷ ಚೇತನರ ಕುಟುಂಬ ಸದಸ್ಯರನ್ನು ಸಾಮಾನ್ಯ ಜನರನ್ನಾಗಿ ನೋಡುವ ದೃಷ್ಟಿಯಿಂದ ಮತ್ತು ಅವರು ಸರ್ಕಾರಿ ಸಂಸ್ಥೆಗಳಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಭೆಯನ್ನು ನಡೆಸಲಾಗುತ್ತದೆ. ಭಾರತ ಚುನಾವಣಾ ಆಯೋಗ ವಿಶೇಷ ಚೇತನರಿಗೆ ಮನೆಯಲ್ಲಿ ಚುನಾವಣೆ ನಡೆಸಲು ಅವಕಾಶ ಕಲ್ಪಿಸಿದೆ ಯು ಐ ಡಿ ಚೀಟಿ ಪಡೆದುಕೊಳ್ಳಬೇಕು. ಯುಡಿ.ಐಡಿ ಚೀಟಿ ಮಾಡದಿದ್ದಲ್ಲಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಯಾವುದೇ ಸೌಲಭ್ಯ ಪಡೆಯಲು 40 ಶೇಕಡಾ ಚೇತನತೆ ಹೊಂದಿರಬೇಕು.ಅಂತಹ ವ್ಯಕ್ತಿಗಳು ಯುಡಿ ಐಡಿ ಚೀಟಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅರ್ಥಿಕ ಸಾಕ್ಷರತೆ ಕೇಂದ್ರ ನೊಡೆಲ್ ಅದಿಕಾರಿ ಗೀತಾ ಮಾತನಾಡಿ, ಆಧಾರ್ ಚೀಟಿಯಲ್ಲಿ ನಮೂದಿಸಿದ ರೀತಿಯಲ್ಲಿ ಇತರ ಯಾವುದೇ ದಾಖಲೆಗಳಲ್ಲಿ ನಮೋದಿಸಬೇಕು. ಆಧಾರ ಚೀಟಿಯಲ್ಲಿ ಯಾವುದೇ ಬದಲಾವಣೆ ಮಾಡಿದಲ್ಲಿ ಸಂಬಂಧ ಪಟ್ಟ ಬ್ಯಾಂಕ್ ಗೆ ಭೇಟಿ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಬೇಕು. ಮೂರು ತಿಂಗಳಿಗೊಮ್ಮೆ ಬ್ಯಾಂಕ್ ಹಣ ಹಾಕುವ ಮತ್ತು ತೆಗೆಯುವ ಪ್ರಕ್ರಿಯೆ ನಡೆಯಬೇಕು ಎಂದ ಅವರು ಪ್ರಧಾನ ಮಂತ್ರಿ ಜೀವನ ಸುರಕ್ಷ ಆರೋಗ್ಯ ವಿಮೆ ನೊಂದಣಿ ಮಾಡಿದವರು ಮಾರ್ಚ್ ತಿಂಗಳೊಳಗೆ ನವೀಕರಣ ಮಾಡಿಕೊಳ್ಳಬೇಕು. 18 ರಿಂದ 70 ವರ್ಷದ ವರೆಗೆ ಅವಕಾಶ ಇದೆ. ವರ್ಷಕ್ಕೆ 436 ರೂ ಬರುತ್ತದೆ ಪ್ರತಿಯೊಬ್ಬರೂ ಈ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಮತೆ ತಿಳಿಸಿದರು. ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ಕಾರ್ಯಕರ್ತೆ ಲಕ್ಷ್ಮೀ ಅರೋಗ್ಯ ಮಾಹಿತಿ ನೀಡಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಸಿ ಸುಬ್ಬಯ್ಯ ಮಾತನಾಡಿ, ಯುಡಿಐಡಿ ಚೀಟಿ ಪಂಚಾಯತಿನಿಂದ ವಿಕಲಚೇತನರ ಮನೆಗೆ ಹೋಗಿ ಮಾಡಿಕೊಡುವ ಬಗ್ಗೆ ಸರಕಾರ ಆದೇಶ ಇದೆ ಅದರಿಂದ ಯುಡಿಐಡಿ ಚೀಟಿ ಇಲ್ಲದವರು ಮಾಹಿತಿ ನೀಡಿ ಮನೆಗೆ ಬಂದು ಚೀಟಿ ಮಾಡಿಕೊಡಲಾಗುವುದು ಎಂದು ಹೇಳಿದರು.
ಸಂಜೀವ ಒಕ್ಕೂಟದ ಮೇಲ್ವಿಚಾರಕಿ ನಮಿತಾ ಸಂಜೀವಿನಿ ಸ್ವ ಸಹಾಯ ಸಂಘದ ಸೌಲಭ್ಯಗಳ ಮಾಹಿತಿ ನೀಡಿದರು. ಬಡಗನ್ನೂರು ಪಶು ಸಖಿ ಪ್ರೇಮ ಹೈನುಗಾರಿಕೆ ಯೋಜನೆ ಮಾಹಿತಿ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲಚೇತನ ಕುಟುಂಬದ ಸದಸ್ಯರಿಗೆ ಶೇಕಡಾ 5 ರ ಕ್ರಿಯಾಯೋಜನೆ ಈಗಾಗಲೇ ತಯಾರಿಸಲಾಗಿದೆ. ಯಾವುದೇ ಸಮಸ್ಯೆ ಬಂದಲ್ಲಿ ಯಾವುದೇ ಸಂದರ್ಭದಲ್ಲಿ ಕರೆ ಮಾಡಬಹುದು ನಾವು ಸದಾ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸದಸ್ಯರಾದ ಸಂತೋಷ್ ಆಳ್ವ ಗಿರಿಮನೆ, ವೆಂಕಟೇಶ್ ಗೌಡ ಕನ್ನಡ್ಕ, ಶ್ರೀಮತಿ ಕನ್ನಡ್ಕ, ಉಪಸ್ಥಿತರಿದ್ದರು.
ಸಭೆಯಲ್ಲಿ ವಿಶೇಷ ವಿಕಲಚೇತನರು, ಮತ್ತು ಪೋಷಕರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು,ಸಂಜೀವಿನಿ ಒಕ್ಕೂಟದ ಎಂ ಬಿ.ಕೆ ಸೌಮ್ಯ , ಗ್ರಾ.ಪಂ ವಿ.ಆರ್ ಡಬ್ಲೂ ಹೇಮಾವತಿ ಮತ್ತು ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಭೆಯ ಬಳಿಕ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಬಿ.ಪಿ ಹಾಗೂ ಶುಗರ್ ತಪಾಷಣೆ ನಡೆಯಿತು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಸಿ ಸುಬ್ಬಯ್ಯ ಸ್ವಾಗತಿಸಿ, ವಂದಿಸಿದರು. ಪಂ ಸಿಬ್ಬಂದಿಗಳು ಸಹಕರಿಸಿದರು.