ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ಕೊೖಲತ್ತಡ್ಕದಲ್ಲಿರುವ ಶಿವಕೃಪಾ ಆಡಿಟೋರಿಯಂನ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ನಾಗ ರಕ್ತೇಶ್ವರಿ ಮತ್ತು ಗುಳಿಗ ಸನ್ನಿಧಾನದಲ್ಲಿ ಶ್ರೀ ನಾಗ ದೇವರ ಶಿಲಾ ಪ್ರತಿಷ್ಠೆ ಮತ್ತು ರಕ್ತೇಶ್ವರಿ, ಗುಳಿಗ ದೈವಗಳ ಬಿಂಬ ಪ್ರತಿಷ್ಠೆ ಫೆ.21 ರಂದು ಬೆಳಿಗ್ಗೆ ನಡೆಯಲಿದೆ.
ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 8.12 ರ ಮೀನಾ ಲಗ್ನದ ಸುಮುಹೂರ್ತದಲ್ಲಿ ಶ್ರೀ ನಾಗದೇವರ ಕಟ್ಟೆಯಲ್ಲಿ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಹಾಗೂ ರಕ್ತೇಶ್ವರಿ, ಗುಳಿಗ ದೈವಗಳ ಬಿಂಬ ಪ್ರತಿಷ್ಠೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಫೆ.20 ರಂದು ಸಂಜೆ ದೇವತಾ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ,ಪ್ರಾಕಾರ ಬಲಿ ಇತ್ಯಾದಿ ವೈಧಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ.21 ರಂದು ಬೆಳಿಗ್ಗೆ 6 ರಿಂದ ಮಹಾಗಣಪತಿ ಹೋಮ, ನಾಗಪ್ರತಿಷ್ಠಾ ಹೋಮ, ಸರ್ವ ಪ್ರಾಯಶ್ಚಿತ್ತ ಆಶ್ಲೇಷಾ ಬಲಿ ಇತ್ಯಾದಿ ವೈಧಿಕ ಕಾರ್ಯಕ್ರಮಗಳು ನಡೆದು 8.22 ರ ಮೀನಾ ಲಗ್ನದಲ್ಲಿ ಪ್ರತಿಷ್ಠೆ ನಡೆದು ಕಲಶಾಭಿಷೇಕ, ತಂಬಿಲ ಸೇವೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಊರಿನ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.

ಸಂಜೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಫೆ.21 ರಂದು ಸಂಜೆ ಶಿವಕೃಪಾ ಆಡಿಟೋರಿಯಂ ಮುಂಭಾಗದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿಯ ಬಯಲಾಟವಾಗಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 3.30 ರಿಂದ ರಾಮಜಾಲು ಕೋಟಿ ಚೆನ್ನಯ ಗರಡಿ ಬಳಿಯಿಂದ ಶ್ರೀ ದೇವಿಯ ಮೆರವಣಿಗೆ ಪರ್ಪುಂಜ ತನಕ ಬಂದು ಅಲ್ಲಿಂದ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಶಿವಕೃಪಾ ಆಡಿಟೋರಿಯಂಗೆ ಬಂದು ಅಲ್ಲಿ ಶ್ರೀದೇವಿಯ ಚೌಕಿ ಪೂಜೆ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಯಕ್ಷಗಾನಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹರಿಹರ ಕೋಡಿಬೈಲು ಮತ್ತು ಗಣೇಶ್ ಕೋಡಿಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.