ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 12ನೇ ವರ್ಷದ ಪಟ್ಟಾಭಿಷೇಕದ ಸಂಭ್ರಮ.
ದೇಶ ಕಂಡ ಏಕೈಕ ಸಂತವಿಜ್ಞಾನಿ ಶಿಕ್ಷಣ ಸಂತ ಅನ್ನ ದಾಸೋಹಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಧರ್ಮಕಾರ್ಯ ಜಗದಗಲ. ತಪೋಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಸುಮಾರು 2000 ವರ್ಷಗಳ ಇತಿಹಾಸವನ್ನ ಹೊಂದಿದೆ. ಸ್ವಾತಂತ್ರ್ಯದ ನಂತರದಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿದ್ದ ಯುಗಯೋಗಿ, ಪರಮಪೂಜ್ಯ ಜಗದ್ಗುರು, ಶತಮಾನದ ಸಂತ, ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ತಮ್ಮ ಆಡಳಿತದಲ್ಲಿ ದಾಸೋಹ ಮತ್ತು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಮಠವನ್ನು ಉನ್ನತ ಸ್ಥಾನದಲ್ಲಿ ಕೊಂಡಯಲು ಶ್ರಮಿಸಿದರು. ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಬಳಿಕ 500ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ಅಂಧ ಮಕ್ಕಳ ಶಾಲೆ ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಹತ್ತು ಹಲವು ಸಂಸ್ಥೆಗಳನ್ನು, ದೇವಾಲಯಗಳನ್ನು ಕ್ಷೇತ್ರದ ಆಸ್ತಿಪಾಸ್ತಿಗಳನ್ನು ,ಭಕ್ತಾದಿಗಳನ್ನು ನೋಡಿಕೊಳ್ಳುವ ಮಹೋನ್ನತ ಜವಾಬ್ದಾರಿಯನ್ನು ಮುಂದಾಲೋಚನೆ ಮಾಡಿ ನಿರ್ಮಲಾನಂದನಾಥ ಮಹಾಸ್ವಾಮಿಗಳಿಗೆ ಒಪ್ಪಿಸಬೇಕೆಂದು ಬಯಸಿದ್ದರು. ಆ ಅವರ ನಿರ್ಧಾರ ನಾಡಿಗೆ ಅತ್ಯುನ್ನತ ಫಲವನ್ನು ನೀಡಿದೆ.
ಜಗದ್ಗುರುಗಳ ಬಾಲ್ಯ ಜೀವನ :
Success is the Journey of Determination, Result of Hardwork , Learning from Failure. Loyalty and Persistence ಎನ್ನುವಂತೆ ಶ್ರೀಗಳು ಬಾಲ್ಯದಲ್ಲಿ ಅನುಭವಿಸಿದ ನೋವು ಸಂಕಷ್ಟಗಳು ಹೇಳುತ್ತಿರದು ಛಲ ಬಿಡದ ವಿಕ್ರಮನಂತೆ ಮೇಲೆದ್ದು ಸರ್ವಕಾಲಕ್ಕೂ ಮಾದರಿ.
1969 ಜುಲೈ 20ರಂದು ಜನಿಸಿದ ಜನಿಸಿದ ರ್ಮಲಾನಂದನಾಥ ಸ್ವಾಮಿಗಳು ಅವರ ಪೂರ್ವದ ಹೆಸರು ನಾಗರಾಜ ಇವರು ಜನಿಸಿದ್ದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ,ಚಿಕ್ಕನಹಳ್ಳಿ ಯಲ್ಲಿ ನರಸೇಗೌಡ ಮತ್ತು ನಂಜಮ್ಮನವರು ಶ್ರೀಗಳ ಮಾತಾ ಪಿತೃಗಳು .ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಪಡೆದರು, ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪಡೆದರು. ಮದ್ರಾಸಿನ ಪ್ರತಿಷ್ಠಿತ IITಯಲ್ಲಿMtech ಪದವಿಯನ್ನು ಪಡೆದರು.
ಲೋಕಕಲ್ಯಾಣಕ್ಕಾಗಿ ಸಂತರಾದ ವಿಜ್ಞಾನಿ :
ಶ್ರೀಗಳಿಗೆ ಪುಣೆಯ ಕೇಂದ್ರ ಜಲ ಶಕ್ತಿ ಸಂಶೋಧನೆಯಲ್ಲಿ ವಿಜ್ಞಾನಿಯಾಗಿ ಉದ್ಯೋಗ ಲಭಿಸಿತು. ಆದರೆ ಲಕ್ಷಾಂತರ ಸಂಬಳ ನೀಡುವ ಉದ್ಯೋಗಕ್ಕಿಂತ ಅವರ ಮನಸ್ಸು ಪಾರಮಾರ್ಥಿಕದ ಕಡೆ ವಾಲಿತು ,ಸಮಾಜ ಸೇವೆಗಾಗಿ ಮನಸು ತುಡಿತವಿತ್ತು. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಚುಂಚನಗಿರಿ ಕ್ಷೇತ್ರವನ್ನು ಚಿನ್ನದಾಗಿರಿಯನ್ನಾಗಿಸಿದರೆ, ನಿರ್ಮಲಾನಂದನಾಥ ಮಹಾಸ್ವಾಮಿಗಳು ಆ ಚಿನ್ನದ ಗರಿಗೆ ಸಾತ್ವಿಕ ಮತ್ತು ತಾಂತ್ರಿಕ ಲೇಪ ಮಾಡಿ ಗಟ್ಟಿಗೊಳಿಸುತ್ತಿದ್ದಾರೆ.
ಸನಾತನ ಧರ್ಮ ಪರಿಚಾರಕರು :
ಶ್ರೀಗಳು ತಮಿಳುನಾಡಿನ ರಾಮೇಶ್ವರ ಕಂಬಂ ಉತ್ತರ ಪ್ರದೇಶದ ನೈಮಿಷಾರಣ್ಯ , ಮಧ್ಯಪ್ರದೇಶದ ಚಿತ್ರಕೂಟ, ಅಮೆರಿಕದ ನ್ಯೂಜೆರ್ಸಿ ಹಾಗೂ ತಿರುಪತಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠಗಳ ಶಾಖೆ ತೆರೆದು ಧರ್ಮಸೇವೆಯನ್ನು ಪ್ರಪಂಚದಾದ್ಯಂತ ವಿಸ್ತರಿಸಿ, ಜನರನ್ನು ಸನ್ಮಾರ್ಗದ ಮೂಲಕ ಕರೆದೊಯ್ಯುವ ಕೆಲಸವನ್ನು ಮಾಡುತ್ತಿದ್ದಾರೆ.
ಅನಾಥ ಮಕ್ಕಳ ಆರಾಧ್ಯಧೈವ :
ಬೆಂಗಳೂರಿನ ನೆಗಳೂರಿನಲ್ಲಿ ಬಿಜಿಎಸ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮಹಾಲಕ್ಷ್ಮಿ ಲೇಔಟಲ್ಲಿ ಬಿಜಿಎಸ್ ಕಾಲೇಜ್, ಮೈಸೂರು, ಮಾಲೂರಿನಲ್ಲಿ ಪದವಿ ಕಾಲೇಜು ತೆರೆದು ,ಬಡವರ ಮಕ್ಕಳಿಗೆ ಪುಣ್ಯ ಕಾರ್ಯವನ್ನು ಮಾಡುತ್ತಿದ್ದಾರೆ. ಅಲ್ಲದೆ ಪ್ರತಿಭಾವಂತ ಬಡ ಅನಾಥ ಮಕ್ಕಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ತಿಗಳು SAMVIT ಆದಿಚುಂಚನಗಿರಿ ಪ್ರತಿಭಾವಂತ ಮಕ್ಕಳ ಉಚಿತ ಶಾಲೆ ತೆರೆದು ಸಾವಿರಾರು ಮಕ್ಕಳಿಗೆ ಪ್ರತಿವರ್ಷ ಶಿಕ್ಷಣ ಒದಗಿಸುತ್ತಿದ್ದಾರೆ. ಪ್ರತಿ ವರ್ಷ ಸಾವಿರಾರು ಮಕ್ಕಳಿಗೆ ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಿಜಿಎಸ್ ವಿದ್ಯಾನಿಧಿ ಮೂಲಕ ನೆರವಾಗುತ್ತಿದ್ದಾರೆ .
ಕೆಂಪೇಗೌಡರ ಜಯಂತಿ ಆಚರಿಸಲು ಇವರು ಕಾರುಣಿಭೂತರು ಹೌದು. ಬೆಂಗಳೂರು ವಿವಿಯಲ್ಲಿ ನಾಡಪ್ರಭು ಕೆಂಪೇಗೌಡರ ಅಧ್ಯಯನಪೀಠ ರಚಿಸಲು ಹಾಗೂ ಮುಂದಿನ ತಲೆಮಾರಿಗೆ ಅವರ ಸಾಧನೆಗಳು ಚಿರಸ್ಥಾಯಿಗೊಳಿಸಲು ಶ್ರಮಿಸಿದ್ದಾರೆ . ವಿಶ್ವ ಪ್ರಸಿದ್ಧ 108 ಅಡಿಯ Statue of Prosperity ಸ್ಥಾಪನೆಯ ಹಿಂದಿನ ದೈತ್ಯ ಶಕ್ತಿಯವರು .
ಒಕ್ಕಲಿಗ ಜನಾಂಗಕ್ಕೆ ಶೇಕಡ 2ರಿಂದ 4ವರೆಗೆ ಮೀಸಲು ಬರಲು ಶ್ರಮಿಸಿದ್ದಾರೆ. ಅಯೋಧ್ಯ ರಾಮಮಂದಿರ ಸ್ಥಾಪನೆಯ ಮುಖ್ಯಸಲಹೆಗಾರರ ಸಮಿತಿಯ ಸದಸ್ಯರು ಕೂಡ ಹೌದು, ಇಸ್ರೋ ಹಾಗೂ ಇನ್ನಿತರ ಅಂತರಾಷ್ಟ್ರೀಯ ಸಂಸ್ಥೆಗಳ ತಾಂತ್ರಿಕ ಸಲಹೆಗಾರರಾಗಿ, ಗಂಗಾ ನದಿಯ ಸಂರಕ್ಷಣೆಯ ಕೋರ್ ಕಮಿಟಿಯ ಸದಸ್ಯರಾಗಿ, ವಿಶ್ವಸಂಸ್ಥೆಯ ಪರಿಸರ ಸಂರಕ್ಷಣಾ ಸಂಸ್ಥೆಯ ಸದಸ್ಯರಾಗಿ ಶ್ರೀಗಳು ದೇಶಕ್ಕೆ, ಸಮಾಜಕ್ಕೆ, ನಾಡಿಗೆ ಹಾಗೂ ಸಮಾಜದ ಎಲ್ಲ ವರ್ಗದವರಿಗೆ ನೀಡುತ್ತಿರುವ ಸೇವೆ ಅವಿಸ್ಮರಣೀಯವಾಗಿದೆ.
ಶ್ರೀಗಳ ನಿಸ್ವಾರ್ಥ ಸೇವೆಯನ್ನ ಗುರ್ತಿಸಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಾದ ವಿಶೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, Rajiv Gandhi University of Health Sciences, ಮೈಸೂರು ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪದವಿಯನ್ನ ನೀಡಿ ಗೌರವಿಸಿವೆ.

ಸಂಸ್ಥಾಪಕ ಅಧ್ಯಕ್ಷರು – ಒಕ್ಕಲಿಗ ಯುವ ಬ್ರಿಗೇಡ್