ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆ

0

ಅಧ್ಯಕ್ಷರಾಗಿ ಎ.ಕೆ ಜಯರಾಮ ರೈ ಕೆಯ್ಯೂರು ಆಯ್ಕೆ

ಕೆಯ್ಯೂರು : ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಇದರ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎ.ಕೆ ಜಯರಾಮ ರೈ ಕೆಯ್ಯೂರು ಆಯ್ಕೆ ಮಾಡಲಾಯಿತು. ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಿದರು.


ದೇವಾಲಯದ ಸಭಾಭವನದಲ್ಲಿ ಫೆ.19ರಂದು ದೇವಾಲಯದ ಆಡಳಿತ ಅಧಿಕಾರಿ ನಮಿತಾ ಎ.ಕೆ ಅಧ್ಯಕ್ಷತೆಯಲ್ಲಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಶಿವನಾಥ ರೈ ಮೇಗಿನಗುತ್ತು 9 ಮಂದಿ ನೂತನ ಸದಸ್ಯರ ಸಮಿತಿಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ರಚಿಸಲಾಗಿದೆ.


ನೂತನ ಸದಸ್ಯರಾದ ಕ್ಷೇತ್ರದ ಅರ್ಚಕ ಶ್ರೀನಿವಾಸ ರಾವ್, ಜಲಜಾಕ್ಷಿ ಎ ರೈ ಸಾಗು, ಸುಜಯ ಕೆಯ್ಯೂರು ,ಉಮಾಕಾಂತ ಬೈಲಾಡಿ, ಜಲಜಾಕ್ಷಿ ಎ ರೈ ಸಾಗು.ಸುಜಯ ಕೆಯ್ಯೂರು, ಅಶೋಕ್ ರೈ ದೇರ್ಲ, ಕೆ.ಎಸ್ ಚಂದ್ರಶೇಖರ ಪೂಜಾರಿ ಕಣಿಯಾರು, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ಇ. ಇಳಂತಾಜೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ,ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು . ದೇವಾಲಯದ ನೌಕರ ಚಂದ್ರಶೇಖರ ರೈ ಕಜೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here