ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಶ್ರೀರಾಡಿ ದೈವಸ್ಥಾನದಲ್ಲಿ ಫೆ 11 ಮತ್ತು 12 ರಂದು ಮುಂಡಾಳಗುತ್ತು ಯಜಮಾನ ನಿವೃತ್ತ ಡಿವೈಎಸ್ ಪಿ ಶಾಂತಾರಾಮ ರೈ ಮುಂಡಾಳಗುತ್ತು ಮತ್ತು ಹದಿನೆಂಟು ವರ್ಗ ಹಾಗೂ ಊರವರ ರವರ ನೇತ್ರತ್ವದಲ್ಲಿ ಜರಗಿದ ಗ್ರಾಮ ದೈವ ಶಿರಾಡಿ ದೈವದ ನೇಮೋತ್ಸವದ ಕೃತಜ್ಞತಾ ಸಭೆಯು ದೈವಸ್ಥಾನದ ವಠಾರದಲ್ಲಿ ಜರಗಿತು.
ಮುಂಡಾಳ ಗುತ್ತು ಸುಧಾಕರ ರೈ, ಸೀತರಾಮ ಗೌಡ ಇದ್ಯಪ್ಪೆ, ಮುಂಡಾಳ ಗುತ್ತು ಮನೋಹರ ರೈ ಪಟ್ಟೆ , ರಾಘವ ಗೌಡ ಕೆರೆಮೂಲೆ, ಕರುಣಾಕರ ರೈ ಕೊರಂಗ, ಚಂದ್ರ ನಲಿಕೆ ಇದ್ಪಾಡಿ, ಮುಂಡಾಳಗುತ್ತು ಮೋಹನ ಆಳ್ವ, ಮುಂಡಾಳಗುತ್ತು, ಪ್ರಭಾಕರ ರೈ , ಸುರೇಶ್ ರೈ ಮಾಣಿಪ್ಪಾಡಿ, ಯುವರಂಗ ಕೆದಂಬಾಡಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸ್ವ ಸಹಾಯ ಸಂಘ ಕೆದಂಬಾಡಿ ಇದರ ಸರ್ವ ಸದಸ್ಯರು ಹಾಗೂ ಸಂಜೀವಿನಿ ಸ್ವ ಸಹಾಯ ಸಂಘ ಇದ್ಪಾಡಿ ಇದರ ಸರ್ವ ಸದಸ್ಯರು, ಶಿರಾಡಿ ಭಕ್ತ ವೃಂದದವರು ಉಪಸ್ಥಿತರಿದ್ದರು.