ಬಡಗನ್ನೂರು; ದ.ಕ ಹಾಲು ಉತ್ಪಾದಕ ಒಕ್ಕೂಟದ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಜಾನುವಾರುಗಳಿಗೆ ಬರುವ ಜಂತು ಹುಳುಗಳಬಾಧೆ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾತ್ರೆ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಅದರ ಸಲುವಾಗಿ ಬಡಗನ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಫೆ.20 ರಂದು ನಡೆಯಿತು.

ದ.ಕ. ಹಾ. ಉ. ಒಕ್ಕೂಟದ ಪಶುವೈದ್ಯಾಧಿಕಾರಿ ಡಾ. ಅನುದೀಪ್ ಎಸ್. ಆರ್ ಜಾನುವಾರು ಜಂತು ಹುಳುಗಳಿಂದ ಬರುವ ರೋಗಗಳು ಮತ್ತು ಅವುಗಳ ಬೆಳವಣಿಗೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಿ ಮಾತನಾಡಿ, ದ.ಕ.ಮತ್ತು ಉಡುಪಿ ಜಿಲ್ಲೆಯ ಸುಮಾರು 75೦ ಕೇಂದ್ರದಲ್ಲಿ ಏಕಕಾಲದಲ್ಲಿ ಇಂದು ನಡೆಯಲಿದೆ ಹಸುಗಳಿಗೆ.ಸರಿಯಾದ ರೀತಿಯಲ್ಲಿ ಅಜೀರ್ಣ, ಉದ್ದದಲ್ಲಿ ಊತ, ದೇಹದ ಬೆಳವಣಿಗೆ, ಶ್ವಾಸಕೋಶದಲ್ಲಿ ರಕ್ತ ಹೊರಗೆ ಬರುವುದು, ಕರಗಲು ಮಣ್ಣು ತಿನ್ನುವುದು. ರಕ್ತ ಹಿನ್ನತೆ ಸರಿಯಾದ ರೀತಿಯಲ್ಲಿ ಗಬ್ಬಕ್ಕೆ ಬರದೆ ಇರುವುದು ಈ ಎಲ್ಲಾ ಲಕ್ಷಣಗಳು ಹುಳದ ಬಾದೆಯಲ್ಲಿ ಬರುತ್ತದೆ. ಪ್ರತಿ 21 ದಿನಕೊಮ್ಮೆ ಕರುಗಳಿಗೆ ಹಾಗೂ ಪ್ರತಿ 6 ತಿಂಗಳಿಗೊಮ್ಮೆ ಹಸುಗಳಿಗೆ ಜಂತು ಹುಳ ಮಾತ್ರೆ ನೀಡುವುದರಿಂದ ಹಸುಗಳು ದಟ್ಟವಾಗಿ ಬೆಳೆಯುತ್ತದೆ ಮತ್ತು ಶೇಕಡಾ 90 ರಷ್ಟು ರೋಗರುಜಿನಗಳು ಬರುವುದು ಕಡಿಮೆಯಾಗುತ್ತದೆ. ಎಂದು ವಿವರಿಸಿದರು.
ಬಳಿಕ ಹಸುವಿನ ಜಂತು ಹುಳ ಮಾತ್ರೆ ನೀಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿ ಜಂತು ಹುಳ ಮಾತ್ರೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಡಗನ್ನೂರು ಹಾ.ಉ.ಸೇ.ಸ.ಸಂಘ ಅಧ್ಯಕ್ಷ ಸೀತಾರಾಮ ಗೌಡ ಉಳಯ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಿಲು, ಸದರುಗಳಾದ ಸುಬ್ರಾಯ ನಾಯಕ್ ಮೇಗಿನಮನೆ, ಸಂತೋಷ್ ಆಳ್ವ,ಗಿರಿಮನೆ, ಪ್ರಕಾಶ್ ರೈ ಕೈೂಲ, ಚಂದ್ರಶೇಖರ ಭಂಡಾರಿ ಕಂಬಳ, ಶ್ರೀಧರ ಭಟ್, ಸಿ.ಯಚ್ ಸುಬ್ಬಯ್ಯ ರೈ ಹಲಸಿನಡಿ, , ಶಶಿಧರ ಭಟ್ ಕೆ, ಕಿಶೋರ್ ಭಟ್ ಸಿ.ಯಚ್, ರವೀಂದ್ರ ಕೆ.ಪಿ, ಲೀಲಾವತಿ, ಕಟ್ಟಾವು, ರತ್ನಾವತಿಕೆ.ಪಿ , ನಯನ ರೈ ಬಡಕಾಯೂರು, ಕುಂಞಣ್ಣ ರೈ ಮೇಗಿನಮನೆ, ಈಶ್ವರ ಮೂಲ್ಯ ಕೈೂಲ ,ಮಂಜುನಾಥ ರೈ ಬಡಕಾಯೂರು, ಮಹಾಲಿಂಗ ಭಟ್, ಪಡುಮಲೆ, ಪ್ರಣಾಮ್ ರೈ ಕುದ್ಕಾಡಿ, ಹರೀಶ್ ಪೂಜಾರಿ ಕೆ.ಕೆ, ಗಂಗಾಧರ ರೈ ಮೇಗಿನಮನೆ, ವೆಂಕಪ್ಪ ನಾಯ್ಕ ಮೇಗಿನಮನೆ, ವಿದ್ಯಾರತ್ನಾ ಎರುಕೊಟ್ಯ, ಮಹಮ್ಮದ್ ಮೈಂದನಡ್ಕ, ಬಾಲಕೃಷ್ಣ ಗೌಡ, ಮಾಫಲ, ಕಮಲ, ಮೈಂದನಡ್ಕ, ಯಶೋಧ ರೈ ಸೇನರಮಜಲು ಉಪಸ್ಥಿತರಿದ್ದರು. ಬಡಗನ್ನೂರು ಹಾ.ಉ.ಸೇ ಸ.ಸಂಘದ ಕಾರ್ಯದರ್ಶಿ ಮೋಹನ ಪಾಟಾಳಿ ಸ್ವಾಗತಿಸಿ ವಂದಿಸಿದರು ಸಹಾಯಕಿ ಸುಜಾತ ಮೈಂದನಡ್ಕ ಸಹಕರಿಸಿದರು.