ಪುತ್ತೂರು: ಹೆಸರಾಂತ ಕಂಪನಿಯ ಐಸ್ ಕ್ರೀಮ್ ಜೊತೆಗೆ ಹಲವಾರು ಬಗೆಯ ಸಿಹಿ ತಿನಿಸು ಮಳಿಗೆ, ವಿಕ್ರಂ ಕಲ್ಲೇಗ ಮಾಲೀಕತ್ವದ “ವಿಕ್ಕೀಸ್ ಬೇಕ್ ಆ್ಯಂಡ್ ಟ್ರೀಟ್ಸ್ “ಫೆ.21ರಂದು ಇಲ್ಲಿನ ನೆಹರುನಗರ ಕೃಷ್ಣ ಕಮಲ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

ಕಲ್ಲೇಗ ರೂರಲ್ ಡೆವಲಪ್ಮೆಂಟ್ ಇದರ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ದೀಪ ಪ್ರಜ್ವಲನೆ ಮೂಲಕ ನೂತನ ಮಳಿಗೆ ಇದರ ಉದ್ಘಾಟನೆ ನೆರವೇರಿಸಿ, ಮಳಿಗೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು.
ಮಾಜಿ ನಗರಸಭಾಧ್ಯಕ್ಷ ಜೀವಂಧರ್ ಜೈನ್, ಮುರ ಶಿವ ಸದನದ ಜಗನ್ನಾಥ ಸ್ವಾಮೀಜಿ ಇವರುಗಳು ಕೂಡ ನೂತನ ಮಳಿಗೆಯ ಏಳಿಗೆಗೆ ಶುಭಕೋರಿದರು.
ಪುತ್ತೂರು ಟೌನ್ ಕೋಅಪರೇಟಿವ್ ಬ್ಯಾಂಕ್ ನಿರ್ದೇಶಕ ಶ್ರೀಧರ್ ಪಟ್ಲ, ನ್ಯಾಯವಾದಿ ಬಾಬು ಗೌಡ ಎ, ಜೀವನ್ ಜ್ಯೋತಿ ಎಲೆಕ್ಟ್ರಿಕಲ್ಸ್ ಮಾಲೀಕ ತಿಮ್ಮಪ್ಪ ಗೌಡ, ಜಯಂತ ನಗರ, ಡಾ.ರವಿನಾರಾಯಣ, ಜಯರಾಮ್ ಸ್ಟೋರ್ ಮಾಲೀಕ ಜಯರಾಮ್ ಹೆಗ್ಡೆ, ಕುಶಾಲಪ್ಪಗೌಡ ನೆಲಪ್ಪಾಲು, ಮಾಲೀಕ ವಿಕ್ರಂ ಕಲ್ಲೇಗರವರ ತಂದೆ, ವಿವೇಕಾನಂದ ಕಾಲೇಜಿನ ನಿವೃತ್ತ ಉದ್ಯೋಗಿ ಕುಂಞಣ್ಣ ಗೌಡ, ಸಹೋದರ ವಿಜೇತ್, ಪ್ರಣೀತಾ ವಿಜೇತ್, ಸಮನ್ವಿ ಮತ್ತು ಇಶಾನ್ವಿ, ಸಹೋದರಿ ವಿದ್ಯಾಕೃಷ್ಣಪ್ಪ ಮತ್ತು ನ್ಯಾಯವಾದಿ ಕೃಷ್ಣಪ್ಪ ಗೌಡ ಹಾಗೂ ಮಿಥಾಲಿ ಮತ್ತು ಪ್ರಾಂಜಲಿ, ಹೇಮಂತ್ ವಿಟ್ಲ ಸಹಿತ ಹಲವರು ಹಾಜರಿದ್ದರು.
ಕುಂಞಣ್ಣ ಗೌಡ ಸ್ವಾಗತಿಸಿ, ವಂದಿಸಿದರು. ಮಾಲಕ ವಿಕ್ರಂ ಕಲ್ಲೇಗ ಮಾತನಾಡಿ, ಹಲವಾರು ರೀತಿಯ ಶುಭ-ಸಮಾರಂಭಗಳಿಗೆ ಹಾಗೂ ಇನ್ನಿತರ ಕಾರ್ಯಗಳಿಗೆ ಸ್ವಾದಿಷ್ಟಭರಿತ ಬಗೆ-ಬಗೆಯ ಸಿಹಿ ತಿನಿಸುಗಳೆಲ್ಲಾವೂ ಅತ್ಯುತ್ತಮ ದರದಲ್ಲಿ ಇಲ್ಲಿ ಲಭ್ಯವಿದೆಯೆಂದು ಹೇಳಿ,ಸಹಕಾರ ಕೋರಿದರು.