ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 124ನೇ ಆವೃತ್ತಿಯಲ್ಲಿ ’ವರ್ಣಿಕ 4’ ಶೀರ್ಷಿಕೆಯಲ್ಲಿ ಸಂಸ್ಥೆಯ ಈರ್ವರು ಹಿರಿಯ ವಿದ್ಯಾರ್ಥಿಗಳಾದ ತೇಜಸ್ವಿ ಅಂಬೆಕಲ್ಲು ಮತ್ತು ವಿದುಷಿ ಹರ್ಷಿತ ಕುಶಾಲಪ್ಪ, ದೆಹಲಿರವರು 2 ಪದವರ್ಣಗಳನ್ನು ಪ್ರಸ್ತುತಪಡಿಸಿದರು.
ಅಭ್ಯಾಗತರಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದ ಸಂಶೋಧಕಿ ಪೂರ್ಣಿಮಾ ರವಿಯವರು ನೃತ್ಯಾಂತರಂಗದ ಕಾರ್ಯಕ್ರಮ ಹಾಗೂ ಮೂಕಾಂಬಿಕ ಸಂಸ್ಥೆಯ ಚಟುವಟಿಕೆಯ ಬಗ್ಗೆ ಶ್ಲಾಘೀಸಿದರು. ಹಿಮ್ಮೇಳದಲ್ಲಿ ಗುರು ವಿದ್ವಾನ್ ದೀಪಕ್ ಕುಮಾರ್, ನಟುವಾಂಗ ಹಾಗೂ ನಿರ್ದೇಶನ, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿ. ಶ್ಯಾಮ ಭಟ್ ಸುಳ್ಯ ಹಾಗೂ ಕೊಳಲಿನಲ್ಲಿ ವಿ. ಕೃಷ್ಣಗೋಪಾಲ್ ಪುಂಜಾಲಕಟ್ಟೆ ಸಹಕರಿಸಿದ್ದರು.