ಕಾಂಚನ: ಕಾಂಚನ ನಡ್ಪ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜಾತ್ರೋತ್ಸವ ಮತ್ತು ನೇಮೋತ್ಸವ ಅಂಗವಾಗಿ ಕಾಂಚನ ಶ್ರೀ ವಿಷ್ಣುಮೂರ್ತಿ ಮಹಿಳಾ ಭಕ್ತಿ ಮಂಡಳಿಯಿಂದ ಶ್ರೀ ವಿಷ್ಣು ಸಹಸ್ರನಾಮದ ಪಾರಾಯಣ ಮತ್ತು ಭಜನೆಯ ಸೇವಾ ಕಾರ್ಯಕ್ರಮವನ್ನು ಟ್ರಸ್ಟಿ ಸುಮನ ಬಡಿಕಿಲ್ಲಾಯರ ನೇತೃತ್ವದಲ್ಲಿ ನಡೆಯಿತು.ಅನುವಂಶಿಕ ಆಡಳಿತ ಮೊಕ್ತೇಸರಾದ ಕಾಂಚನ ರೋಹಿಣಿ ಸುಬ್ಬರತ್ನಂ ಮಾರ್ಗದರ್ಶನದಲ್ಲಿ ಹರಿದಾಸ ಪದಗಳ ಕೀರ್ತನಾ ವೈಭವ ಸಂಗೀತ ಕಾರ್ಯಕ್ರಮ ನಡೆಯಿತು.
ಹಾಡುಗಾರಿಕೆಯಲ್ಲಿ ಪ್ರಣಮ್ಯ ಭಟ್, ವಯಲಿನ್ ಅನುಶ್ರೀ ಮಳಿ ಮತ್ತು ಮೃದಂಗದಲ್ಲಿ ತಮನ್ ಎಕ್ಕಡ್ಕ ಸಹಕರಿಸಿದರು. ಭರತನಾಟ್ಯ ಕಾರ್ಯಕ್ರಮವನ್ನು ಡೆಂಬಳೆ ಹರೀಶ್ ದಂಪತಿಗಳ ಪುತ್ರಿ ಮೌಲ್ಯ ಮತ್ತು ಮಾನ್ವಿ ಡೆಂಬಲೆ ನಡೆಸಿಕೊಟ್ಟರು. ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಸ್ಥಳೀಯ ವಿದ್ಯಾ ಸಂಸ್ಥೆಗಳಾದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹೊಸಗದ್ದೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆ ಅಯೋಧ್ಯೆ ನಗರ ವಿದ್ಯಾರ್ಥಿಗಳಿಂದ ನಡೆಯಿತು.ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಶ್ರೀ ದೇವರ ಪ್ರಸಾದ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಂಚನ ಪ್ರೌಢ ಶಾಲೆ ಎಸ್ ಎಸ್ ಎಲ್ ಪರೀಕ್ಷೆಯಲ್ಲಿ ದಾಖಲೆಯ 601 ಅಂಕ ಪಡೆದ ವಿದ್ಯಾರ್ಥಿ ಶ್ರವಣ್.ಎ.ಕೆ. ಮತ್ತು ಜಂಪ್ ರೋಪ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಚರಣ್.ಎಸ್ , ರಾಮಕುಂಜೇಶ್ವೆರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಪ್ರಣಮ್ಯ ಭಟ್ ಪ್ರತಿಭಾ ಕಾರಂಜಿಯ ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ 4ನೇ ಸ್ಥಾನ ಮತ್ತು ಕಾಂಚನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಅದ್ವಿತ್ ಜಂಪ್ ರೋಪ್ ಸ್ಪರ್ಧೆಯಲ್ಲಿ 3ನೇ ಸ್ಥಾನ ಮತ್ತು ಧನ್ಯಶ್ರೀ 4ನೇ ಸ್ಥಾನದ ಸಾಧನೆಗಳಿಗಾಗಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ,ಟ್ರಸ್ಟ್ ಅಧ್ಯಕ್ಷ ಶ್ರೀಧರ ಗೌಡ ನಡ್ಪ, ಉಪಾಧ್ಯಕ್ಷ ಶಿವರಾಮ್ ಕಾರಂತ್ ಉರಾಬೆ ಮತ್ತು ಟ್ರಸ್ಟ್ ಕಾರ್ಯದರ್ಶಿ ಸುಧಾಕೃಷ್ಣ.ಪಿ.ಎನ್. ಸನ್ಮಾನಿಸಿದರು. ಸುರೇಶ್ ಬಿದಿರಾಡಿ, ಮುಕುಂದ ಬಜತ್ತೂರು, ಯಾದವ ನೆಕ್ಕರೆ, ದಿನೇಶ್ ನಡ್ಪ ಸಹಕರಿಸಿದರು.ಉಪನ್ಯಾಸಕ ಮೋಹನ್ ಚಂದ್ರ ತೋಟದ ಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.