ಪುತ್ತೂರು : ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ ರಿ. ಇದರ ನೇತೃತ್ವದಲ್ಲಿ ಬಡ ಮಕ್ಕಳ ಜ್ಞಾನಾರ್ಜನೆಗಾಗಿ ವಿದ್ಯಾನಿಧಿ ,ಅದೇ ರೀತಿ ಆರೋಗ್ಯ ಸಂರಕ್ಷಣೆಗಾಗಿ ಆರೋಗ್ಯ ನಿಧಿ ಸ್ಥಾಪನೆಯ ಉದ್ದೇಶದಿಂದ ತುಳು ನಾಟಕ ಆಯೋಜನೆ ಮೂಲಕ ನಿಧಿ ಸಂಗ್ರಹ ಕಾರ್ಯ ನಡೆಯಿತು.
ಫೆ.19 ರಂದು ಇಲ್ಲಿನ ಪುರಭವನದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅಭಿನಯದ ತುಳು ಹಾಸ್ಯಮಯ ನಾಟಕ “ಏರ್ಲ ಗ್ಯಾರಂಟಿ ಅತ್ತ್ ” ಪ್ರದರ್ಶನ ಮೂಲಕ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ದೊರಕಿತು.
ತೀಯಾ ಸಮಾಜ ಸೇವಾ ಸಮಿತಿ ಇದರ ಗೌರವ ಸಲಹೆಗಾರ ಪಿ.ಕೆ. ನಾರಾಯಣ ಸಾಲ್ಮರ, ಅಧ್ಯಕ್ಷ ಕೆ.ಪಿ ಸಂತೋಷ್ ಕುಮಾರ್, ರವರ ಉಪಸ್ಥಿತಿಯಲ್ಲಿ ಉದ್ಯಮಿ ಜಯಂತ್ ನಡುಬೈಲು ಇವರು ದೇವದಾಸ್ ಕಾಪಿಕಾಡ್ ರವರನ್ನು ಗೌರವಿಸಿದರು. ಉಪಾಧ್ಯಕ್ಷರುಗಳಾದ, ಯು ಪಿ ರಾಜೇಶ್ ಹಿಮ, ಶಶಿಧರ್ ಬೆಳ್ಳಾರೆ ಪುರುಷೋತ್ತಮ್ ಕೇಪುಳು, ಪುರುಷೋತ್ತಮ್ ಕೊಯ್ಲ ರಾಜೇಶ್, ಸತೀಶ್, ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ, ಸಂತೋಷ್ ಮುಕ್ರಂಪಾಡಿ ಜೊತೆ ಕಾರ್ಯದರ್ಶಿ ದೀಪ ಕುಮಾರ್ ಸಂಘಟನಾ ಕಾರ್ಯದರ್ಶಿಗಳಾದ ಟಿ.ರಾಜೀವ್ ಬೊಳುವಾರು, ರವೀಂದ್ರ, ದಯಾನಂದ ಮರ, ಆಶ್ಲೇಷ್, ರಾಘವ ಖಜಾಂಜಿ ಬಿ ಎಂ ಶ್ರೀಧರ್, ಹಾಗೆಯೇ ಮಹಿಳಾ ಘಟಕದ ಅಧ್ಯಕ್ಷೆ ವಿ. ಪ್ರಭಾವತಿ, ಕಾರ್ಯದರ್ಶಿ ಅಶ್ವಿನಿ ರಾಜೇಶ್,ಉಪಾಧ್ಯಕ್ಷರುಗಳಾದ ಶಶಿಕಲಾ ತೆಂಕಿಲ, ವತ್ಸಲಾ ಶ್ರೀಧರ್, ಅನಿತಾ ಪುರುಷೋತ್ತಮ, ಸಾಂಸ್ಕೃತಿಕ ಕಾರ್ಯದರ್ಶಿ ಮಲ್ಲಿಕಾ ಗೋಪಾಲ್, ಸುವರ್ಣ ಚಂದ್ರಿಕಾ ಹಾಜರಿದ್ದರು.
ಸಮಿತಿ ಕೈಗೆತ್ತಿಕೊಂಡಿರುವ ಸದ್ದುದ್ದೇಶದ ಸೇವಾ ಕಾರ್ಯಕ್ಕೆ ಊರ ಪರವೂರ ಎಲ್ಲಾ ಸಮಾಜ ಬಾಂಧವರು ಕೈಜೋಡಿಸಿರುವುದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿದ್ದು , ಎಲ್ಲರಿಗೂ ಪುತ್ತೂರು ತಿಯ ಸಮಾಜ ಸೇವಾ ಸಮಿತಿಯ ಪರವಾಗಿ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಕಾರ್ಯಕ್ರಮದ ಆಯೋಜಕರು ಈ ಸಂದರ್ಭ ಸಲ್ಲಿಸಿ ,ವಂದಿಸಿದರು.