ಪುತ್ತೂರು: ಕರ್ನಾಟಕ ಇಸ್ಲಾಮಿಕ್ ಸೆಂಟರ್(ಕೆಐಸಿ) ಓಮನ್ ರಾಷ್ಟ್ರೀಯ ಸಮಿತಿ ವತಿಯಿಂದ ಇಶ್ಕೆ ರಸೂಲ್ ಮಿಲಾದ್ ಕಾರ್ಯಕ್ರಮ ಸಬ್ಲತ್ ಮತ್ರ ಸಭಾಂಗಣದಲ್ಲಿ ನಡೆಯಿತು. ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್, ಒಮಾನ್‌ನ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳಿಂದ ಕಲಾ ಸ್ಪರ್ಧೆಗಳು, ವಯಸ್ಕರಿಗೆ ರಸಪ್ರಶ್ನೆ ಸ್ಪರ್ಧೆಗಳು, ಮಹಿಳೆಯರಿಗೆ ಅಡುಗೆ ಸ್ಪರ್ಧೆಗಳು, ಯಾಸಿರ್ ಹಾಜಿ ಕಲ್ಲಡ್ಕ ಅವರಿಂದ ಜಿಸಿಸಿ ಕರೆನ್ಸಿಗಳ ಪ್ರದರ್ಶನ, ಇತ್ಯಾದಿ ಕಾರ್ಯಕ್ರಮ ನಡೆಯಿತು.

ಝುಬೈರ್ ಹಾಜಿ ನಂಜೆ ಅಧ್ಯಕ್ಷತೆ ವಹಿಸಿದ್ದರು. ಶುಕೂರ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಶೇಖ್ ಅಬ್ದುಲ್ ರಹಮಾನ್ ಮುಸ್ಲಿಯಾರ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಮುಹಮ್ಮದ್ ಹನೀಫ್ ನಿಝಾಮಿ ಮುಖ್ಯ ಪ್ರಭಾಷಣ ನಡೆಸಿದರು. ಉಸ್ತಾದ್ ಮುಹಮ್ಮದ್ ಬಯಾನಿ ಮೌಲಿದ್ ಪಾರಾಯಣಕ್ಕೆ ನೇತೃತ್ವ ನೀಡಿದರು. ಉಸ್ತಾದ್ ಮೊಯಿನ್ ಫೈಝಿ ಬುರ್ದಾ ಆಲಾಪನೆಗೆ ನೇತೃತ್ವ ನೀಡಿದರು.
ಅಶ್ರಫ್ ಶಾ ಮಾಂತೂರು ಯುಎಇ, ಲತೀಫ್ ಮರಕ್ಕನಿ ಸೌದಿ, ನಿಜಾಮ್ ಬೆಳ್ಳಾರೆ ಸೌದಿ, ಮೊನಬ್ಬ ಡಿಕೆಎಸ್‌ಸಿ ಮಸ್ಕತ್, ಅಲ್ತಾಫ್ ಡಿಕೆಎಸ್‌ಸಿ ಮಸ್ಕತ್ ಮತ್ತಿತರರು ಅಥಿತಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಅಧ್ಯಕ್ಷ ಹನೀಫ್ ಕಲ್ಲಡ್ಕ, ಕಾರ್ಯದರ್ಶಿಗಳಾದ ಝಕರಿಯಾ ಬಪ್ಪಳಿಗೆ, ಇಮ್ತಿಯಾಝ್ ಹಾಜಿ ಬಪ್ಪಳಿಗೆ, ಅಬ್ಬಾಸ್ ನುಜೂಮ್, ಹಾಶಿರ್ ಹಾಜಿ ನಂಜೆ, ಕಲಂದರ್ ನವಾಝ್, ತಮೀಮ್ ನೀರ್ಕಜೆ, ಫಯಾಸ್ ಬೈತಡ್ಕ, ಬಶೀರ್ ನಂಜೆ, ಇರ್ಷಾದ್ ಕೂರ್ನಡ್ಕ, ಹಾರಿಸ್ ಪುಣಚ ಮೊದಲಾದವರು ಸಹಕರಿಸಿದರು. ಕಾರ್ಯಕ್ರಮದಲ್ಲಿ 5೦೦ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಅಶ್ರಫ್ ಪರ್ಲಡ್ಕ ಸ್ವಾಗತಿಸಿದರು. ಸಿನಾನ್ ಪರ್ಲಡ್ಕ ವಂದಿಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಬಹುಮಾನ ನೀಡಿ ಗೌರವಿಸಲಾಯಿತು.