ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್, ಗೈಡ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳು “ಚಿಂತನಾ ದಿನ”ವನ್ನು ಫೆ.22 ರಂದು ಆಚರಿಸಲಾಯಿತು.
ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಕಬ್-ಬುಲ್ ಬುಲ್ ವಿದ್ಯಾರ್ಥಿಗಳಿಗೆ ” ಕಸದಿಂದ ರಸ” ಸ್ಪರ್ಧೆಯನ್ನು ಹಾಗೂ ಸ್ಕೌಟ್- ಗೈಡ್ ವಿದ್ಯಾರ್ಥಿಗಳಿಗೆ “ಬೆಂಕಿ ರಹಿತ ಅಡುಗೆಯ ಸ್ಪರ್ಧೆ”ಯನ್ನು ಏರ್ಪಡಿಸಲಾಗಿತ್ತು. ಶಾಲಾ ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಿಂತನ ದಿನದ ಅಂಗವಾಗಿ ಕಬ್-ಬುಲ್ ಬುಲ್, ಸ್ಕೌಟ್- ಗೈಡ್ ವಿದ್ಯಾರ್ಥಿಗಳಿಗೆ “ಕೃಷಿ ಸಂಬಂಧಿತ ವಿಷಯ”ಗಳನ್ನು ಪರಿಚಯ ಮಾಡಿಸುವ ನಿಟ್ಟಿನಲ್ಲಿ ಹೊರ ಸಂಚಾರವನ್ನು ಏರ್ಪಡಿಸಲಾಗಿತ್ತು.
ಹೊರ ಸಂಚಾರದಲ್ಲಿ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷರಾದ ವಿವೇಕ ಆಳ್ವರ ಮನೆಗೆ ಭೇಟಿ ನೀಡಲಾಯಿತು. ಇಲ್ಲಿ ದೇಶ ವಿದೇಶದ ಹಣ್ಣುಗಳು ಹಾಗೂ ತರಕಾರಿಗಳ ವಿವಿಧ ತಳಿಗಳ ಪರಿಚಯ, ಬೆಳೆಸುವ ರೀತಿ, ನೈಸರ್ಗಿಕ ಗೊಬ್ಬರಗಳನ್ನು ಬಳಸಿ ಉತ್ತಮವಾದ ಫಸಲನ್ನು ಹೇಗೆ ಪಡೆಯಬಹುದು ಇತ್ಯಾದಿ ವಿಷಯಗಳ ಬಗ್ಗೆ ವಿವೇಕ್ ಆಳ್ವಾರವರು ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ನಂತರ ಡ್ರ್ಯಾಗನ್ ಫ್ರೂಟ್, ವಿವಿಧ ತಳಿಗಳ ಅಡಕೆ, ಸುಗಂಧ ದ್ರವ್ಯವನ್ನು ಉತ್ಪಾದಿಸುವ ಮರ, ಜೇನು ಕೃಷಿ, ದೇಶವಿದೇಶ ತಳಿಯ ಹಣ್ಣುಗಳು ಇನ್ನಿತರ ಕ್ಷೇತ್ರಗಳಲ್ಲಿ ನಿಪುಣರಾದ ಅಶ್ರಫ್ ಪಾಪೆಮಜಲು ಇವರ ಮನೆಗೆ ಭೇಟಿ ನೀಡುವುದರ ಮೂಲಕ ವಿದ್ಯಾರ್ಥಿಗಳು ಹೊರಸಂಚಾರದ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡರು.
ಶಾಲಾ ಸ್ಕೌಟ್ ಮಾಸ್ಟರ್ ಸದಾಶಿವ ನಾಯಕ್, ಕ್ಯಾಪ್ಟನ್ ಜಾಸ್ಮಿನ್ ಗೋವಿಯಸ್ ಹಾಗೂ ಸರಿತಾ ಪ್ರಿಯ ಗೊನ್ಸಾಲ್ವಿಸ್, ಕಬ್ ಮಾಸ್ಟರ್ ದೀಪ್ತಿ, ಬುಲ್ ಬುಲ್ ಲೀಡರ್ ಡಯಾನ ನೊರೊನ್ಹಾ ರವರು ಹೊರ ಸಂಚಾರದಲ್ಲಿ ಭಾಗವಹಿಸಿದರು.