ಪುತ್ತೂರು: ಎಸ್.ಕೆ.ಎಸ್.ಎಸ್.ಎಫ್ ಕಟ್ಟತ್ತಾರು ಶಾಖೆ ವತಿಯಿಂದ ಎಸ್.ಕೆ.ಎಸ್.ಎಸ್.ಎಫ್ ಸ್ಥಾಪಕ ದಿನಾಚರಣೆ ಕಟ್ಟತ್ತಾರು ಜಂಕ್ಷನ್ನಲ್ಲಿ ನಡೆಯಿತು. ಸಮಸ್ತ 100ನೇ ಅಂತರಾಷ್ಟ್ರೀಯ ಮಹಾ ಸಮ್ಮೇಳನ ಯಶಸ್ಸುಗೊಳಿಸಲು ಇದೇ ಸಂದರ್ಭದಲ್ಲಿ ಕರೆ ನೀಡಲಾಯಿತು.
ಶಾಖಾಧ್ಯಕ್ಷ ಅಶ್ರಫ್ ಕೆ ಪಿ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಪುತ್ತೂರು ತಾಲೂಕು ಕೋಶಾಧಿಕಾರಿ ಉಮರ್ ಉಸ್ತಾದ್ ನಂಜೆ ಧ್ವಜಾರೋಹಣ ಹಾಗೂ ದುವಾಗೆ ನೇತೃತ್ವ ನೀಡಿದರು. ಎಸ್.ಕೆ.ಎಸ್.ಎಸ್.ಎಫ್ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ ಮಾತನಾಡಿ, ಎಸ್.ಕೆ.ಎಸ್.ಎಸ್.ಎಫ್ ಕಾರ್ಯಕರ್ತರು ಕೊನೆಯವರೆಗೂ ಸಮಸ್ತ ಹಾದಿಯಲ್ಲಿ ದೃಢವಾಗಿ ನಿಲ್ಲಬೇಕು ಮತ್ತು ಸಮಸ್ತ 100ನೇ ವಾರ್ಷಿಕ ಸಮ್ಮೇಳನ ಯಶಸ್ಸುಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಖಾ ಕೋಶಾಧಿಕಾರಿ ಅಬೂಬಕರ್ ಕಟ್ಟತ್ತಾರು, ಬಿ.ಎಂ ಉಮರ್ ಹಾಜಿ ಕಟ್ಟತ್ತಾರು, ಪುತ್ತು ಹಾಜಿ ಕಟ್ಟತ್ತಾರು, ಯೂಸುಫ್ ಹಾಜಿ ಅಂಗಡಿ ಕಟ್ಟತ್ತಾರು. ಬಿ.ಎಂ ಇಬ್ರಾಹಿಂ ಕಟ್ಟತ್ತಾರು, ಮುಹಮ್ಮದ್ ಕೋಟ್ರಾಸ್, ಖಾಲಿದ್ ಸಂಟ್ಯಾರ್, ಸಿ.ಬಿ ಬಶೀರ್ ಕಟ್ಟತ್ತಾರು, ಶಾಪಿ ನಿಡ್ಯಾಣ, ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಫಾರೂಖ್ ಕಟ್ಟತ್ತಾರು, ತಮೀಮ್ ಕಟ್ಟತ್ತಾರು ಮತ್ತಿತರರು ಉಪಸ್ಥಿತರಿದ್ದರು.
ಶಾಖಾ ಕಾರ್ಯದರ್ಶಿ ಸ್ವಾದಿಕ್ ಮುಸ್ಲಿಯಾರ್ ಕಟ್ಟತ್ತಾರು ಸ್ವಾಗತಿಸಿ ವಂದಿಸಿದರು.