ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಗುಮ್ಮಟೆಗದ್ದೆ ಒಕ್ಕೂಟದಲ್ಲಿ ಯೋಜನೆಯ ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾದ ಸಂಪೂರ್ಣ ಸುರಕ್ಷಾ ಯೋಜನೆಯ ನೋಂದಾವಣೆ ಮತ್ತು ಹಿಡುವಳಿ ಯೋಜನೆ ಕಾರ್ಯಕ್ರಮವನ್ನು ಚೆಲ್ಯಡ್ಕ ಚಂದ್ರಶೇಖರರವರ ಮನೆಯಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹನ್.ಜಿ, ಗುಮ್ಮಟೆಗದ್ದೆ ಒಕ್ಕೂಟದ ಕೋಶಾಧಿಕಾರಿ ಪುರಂದರ ಗೌಡ, ಒಕ್ಕೂಟದ ಜೊತೆ ಕಾರ್ಯದರ್ಶಿ ನವೀನ್ , ಗಜಾನನ ಮತ್ತು ಸಿಂದೂರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ ಸ್ವಾಗತಿಸಿ ವಂದಿಸಿದರು.