ಕೆಲಂಬೀರಿ ಶ್ರೀ ಬ್ರಹ್ಮಬೈದೆರುಗಳ ಗರಡಿಯಲ್ಲಿ ಸುವರ್ಣ ಮಹೋತ್ಸವದ ನೇಮೋತ್ಸವದ ಆಮಂತ್ರಣ ಅನಾವರಣ

0

ಕಾಣಿಯೂರು: ಕೆಲಂಬೀರಿ ಶ್ರೀ ಬ್ರಹ್ಮಬೈದೆರುಗಳ ಗರಡಿಯ 50ನೇ ವರ್ಷದ ಸುವರ್ಣ ಮಹೋತ್ಸವ ನೇಮೊತ್ಸವವು ಮಾ.14, 15ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗರಡಿಯ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಗೌರವಾಧ್ಯಕ್ಷ ಸುಪ್ರೀತ್ ಕುಮಾರ್ ಜೈನ್, ಅಧ್ಯಕ್ಷ ಉಮೇಶ್ ಕೆ. ಎನ್ ಕಾರ್ಲಾಡಿ, ಅನುವಂಶಿಯ ಮೊಕ್ತೇಸರರಾದ ಬಾಬು ಪೂಜಾರಿ ಕೆಲಂಬೀರಿ, ಆಡಳಿತ ಸಮಿತಿ ಅಧ್ಯಕ್ಷ ಬಿ.ಎ.ವಸಂತ ಪೂಜಾರಿ ಕೆಲಂಬೀರಿ, ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ, ಉಪಾಧ್ಯಕ್ಷರಾದ ಸತೀಶ್ ಮಾರ್ಕಜೆ, ಯತೀಶ್ ಸುವರ್ಣ, ಜತೆ ಕಾರ್ಯದರ್ಶಿ ರಮೇಶ್ ಕೆ ಎನ್ ಕಾರ್ಲಾಡಿ, ಕೋಶಾಧಿಕಾರಿ ಪದ್ಮನಾಭ ಡಿ ಕುದ್ಮಾರು ದೋಳ, ಆಡಳಿತ ಸಮಿತಿ ಕಾರ್ಯದರ್ಶಿ ಸದಾನಂದ ಎಸ್ ಸೌತೆಮಾರು, ಜತೆ ಕಾರ್ಯದರ್ಶಿ ಪುರುಷೋತ್ತಮ್ ಪಿ. ಆರ್ ಬರೆಪ್ಪಾಡಿ, ಕೆಲಂಬೀರಿ ಕೋಟಿ ಚೆನ್ನಯ ಕರ ಸೇವಾ ಸಮಿತಿ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕೆಲಂಬೀರಿ, ಮನೋಜ್ ಕೆಲಂಬೀರಿ, ಜಯಂತ ಸುವರ್ಣ, ಚಂದ್ರಶೇಖರ ಕೆಲಂಬೀರಿ, ಜನಾರ್ದನ ಕೆಲಂಬೀರಿ, ರಾಮಕೃಷ್ಣ ಮರಕ್ಕಡ, ಪ್ರವೀಣ್ ಬರಮೇಲು, ಜಯಾನಂದ ಕೆಡೆಂಜಿ, ಶ್ರೀಶನ್ ಎರ್ಮೆತ್ತಿಮಾರು, ಸಂಭ್ರಮ್ ಕೆ. ಆರ್ ಕಾರ್ಲಾಡಿ, ವೇದವ ಪೂಜಾರಿ ಕೆಲಂಬೀರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here