ಪುತ್ತೂರು: ಡಾ|ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಅನಹತ ಯುನೈಟೆಡ್ ಎಫರ್ಟ್ ಫೌಂಡೇಶನ್ ಇವರ ವತಿಯಿಂದ ನಡೆಯುತ್ತಿರುವ “ನನ್ನ ಭವಿಷ್ಯ ನನ್ನ ಆಯ್ಕೆ” ಎಂಬ ವಿಷಯದ ಕುರಿತು ವಸತಿ ಶಾಲೆಯಲ್ಲಿ ಕೆರಿಯರ್ ಮೇಳ 2024-25 ಕಾರ್ಯಕ್ರಮ ನಡೆಯಿತು.
ಪುತ್ತೂರು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ತಿಳಿಸಿ ದುಶ್ಚಟಗಳು ಹಾಗೂ ಸಾಮಾಜಿಕ ಅಪರಾಧಗಳನ್ನು ಮಾಡದಂತೆ ಮಾರ್ಗದರ್ಶನ ನೀಡಿದರು. ವಸತಿ ಶಾಲೆಯ ಹಿಂದಿ ಶಿಕ್ಷಕ ಜಯಪ್ರಕಾಶ ಪಿ. ಪ್ರಾಸ್ತವಿಕವಾಗಿ ವೃತ್ತಿ ಮಾರ್ಗದರ್ಶನದ ಬಗ್ಗೆ ಮಾತನಾಡಿದರು. ಪ್ರಾಂಶುಪಾಲ ಸತೀಶ್ ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕ ಸಂಜಯ್ ಭಡಕರ್, ವಸಂತ ಎಂ. ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿಗಳು,ವಿದ್ಯಾರ್ಥಿಗಳು ಹಾಜರಿದ್ದರು. ಪೂರ್ವಿ ಕಾರ್ಯಕ್ರಮ ನಿರೂಪಿಸಿ ಕುಮಾರ ಕಾರ್ತಿಕ್ ವಂದಿಸಿದರು.