ಪುತ್ತೂರು:ಪುತ್ತೂರು ತಾಲೂಕು ಕೊರಿಂಗಿಲ ಜಮಾಅತಿಗೊಳಪಟ್ಟು ಯುಎಇ ಯಲ್ಲಿ ಕಾರ್ಯ ಪ್ರವೃತ್ತರಾಗಿರುವ ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ಸ್ ಅಸೋಸಿಯೇಷನ್ MISA (R) ಕೊರಿಂಗಿಲ UAE ಯೂನಿಟ್ ಇದರ ವತಿಯಿಂದ ಭಾರತ ಸೇವಾ ರತ್ನ ಪ್ರಶಸ್ತಿ ವಿಜೇತ, ಗಡಿನಾಡ ಧ್ವನಿ ಪತ್ರಿಕೆ ಸಂಸ್ಥಾಪಕ, ಆರ್ಲಪದವು ಬದ್ರಿಯ ಜುಮಾ ಮಸ್ಜಿದ್ ಪುನರ್ ನಿರ್ಮಾಣ ಸಮಿತಿ ಚೇರ್ಮನ್ ಡಾ ಹಾಜಿ ಎಸ್ ಅಬೂಬಕರ್ ಅರ್ಲಪದವು ಅವರಿಗೆ ಸನ್ಮಾನ ಕಾರ್ಯಕ್ರಮ ಯುಎಇ ಯ ದುಬೈ ದೇರ ಮಾಲಿಕ್ ರೆಸ್ಟೋರೆಂಟಿನಲ್ಲಿ ನಡೆಯಿತು.

DKSC ಯುಎಇ ನ್ಯಾಷನಲ್ ಕಮಿಟಿ ಇದರ ಪ್ರದಾನ ಕಾರ್ಯದರ್ಶಿ ಮತ್ತು ಆರ್ಲಪದವು ಬದ್ರಿಯ ಜುಮಾ ಮಸ್ಜಿದ್ ಗಲ್ಫ್ ಸಮಿತಿ ಅಧ್ಯಕ್ಷ ಎಸ್ ಯೂಸುಫ್ ಆರ್ಲಪದವು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಡಾ ಹಾಜಿ ಯಸ್ ಅಬೂಬಕ್ಕರ್ ಆರ್ಲಪದವು ಮಾತನಾಡಿ , ಸಂಘಟನೆಗಳು ಶಿಕ್ಷಣಕ್ಕೆ ಒತ್ತು ಕೊಡುತ್ತಾ ಸಮುದಾಯವನ್ನು ಬಲಪಡಿಸಬೇಕು ಹೊಸದಾಗಿ ವಿದೇಶಗಳಿಗೆ ಬರುವವರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕೆಂದು, ಮಿಶ್ಬಾಹುಲ್ ಇಸ್ಲಾಂ ಸ್ಟೂಡೆಂಟ್ ಎಸೋಶಿಯೇಶನ್ ನಡೆಸುತ್ತಿರುವ ಕಾರ್ಯವೈಖರಿಯನ್ನು ಶ್ಲಾಘಿಸಿದರು. M.I.S.A ಯುಎಇ ಘಟಕದ ಅಧ್ಯಕ್ಷರಾದಂತಹ ಶಾಹುಲ್ ಹಮೀದ್ ಪೊರ್ದಳ್ ರವರು ಅಧ್ಯಕ್ಷತೆಯನ್ನು ವಹಿಸಿದರು. ದುವಾ ಆಶೀರ್ವಚನವನ್ನು ಫೈಝಿ ಕಳತ್ತೂರು ಕಟ್ಟತಡ್ಕ ಇವರು ನೆರವೇರಿಸಿದರು.
ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ಸ್ ಅಸೋಸಿಯೇಷನ್ (M.I.S.A) ಕೊರಿಂಗಿಲ ವತಿಯಿಂದ ನಡೆದ ಸಾಮಾಜಿಕ ಸೇವೆಯನ್ನು ಯುಎಇ ಘಟಕದ ಸಂಘಟನಾ ಕಾರ್ಯದರ್ಶಿ ಜುನೈದ್ ಕೀಲಂಪಾಡಿ ಮತ್ತು M.I.S.A ಯುಎಇ ಘಟಕದ ಕೋಶಾದಿಕಾರಿ ಜಾಬಿರ್ ಬೆಟ್ಟಂಪಾಡಿ ಗುಂಡ್ಯಡ್ಕ ಪ್ರಾಸ್ತಾವಿಕವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ M.I.S.A ಯುಎಇ ಘಟಕದ ಗೌರವ ಸಲಹೆಗಾರರಾದ ಬಿ ಎ ಹಾರೀಸ್ ಅಚ್ಚು ಬೆಂಗತಡ್ಕ ,ಮಜೀದ್ ಪೊರ್ದಳ್ ,ಮತ್ತು ಯು ಎಂ ಸಿರಾಜ್ ಬೆಳ್ಳಾರೆ,ಯಾಸಿರ್ ಕಳತ್ತೂರು ಕಟ್ಟತಡ್ಕ , ನೌಫಲ್ ಕಿನ್ನಿಂಗಾರ್,ರಾಶಿದ್ ತ್ರಿಶೂರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
M.I.S.A ಯುಎಇ ಘಟಕದ ಪ್ರದಾನ ಕಾರ್ಯದರ್ಶಿ ಅಸ್ಕರ್ ಅಲಿ ಕೊರಿಂಗಿಲ ರವರು ಸ್ವಾಗತಿಸಿದರು. M.I.S.A ಕೋಶಾದಿಕಾರಿ ಜಾಬಿರ್ ಬೆಟ್ಟಂಪಾಡಿ ನಿರೂಪಸಿದರು.
M.I.S.A ಯುಎಇ ಜೊತೆ ಕಾರ್ಯದರ್ಶಿ ಎಸ್ ಇರ್ಷಾದ್ ಕೊರಿಂಗಿಲ ಅಜ್ಮಾನ್ ವಂದಿಸಿದರು.