ಪುತ್ತೂರು: ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕುಲು,ಪಿಲಿಭೂತ,ಕುಕ್ಕಳದ ಪಂಜುರ್ಲಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ ಫೆ.22ರಿಂದ ಆರಂಭಗೊಂಡಿತು. ಫೆ.22ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ದೈವಗಳಿಗೆ ತಂಬಿಲ ಸೇವೆ, ಭಜನಾ ಕಾರ‍್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.
ಸಂಜೆ ಪುಣ್ಚಪ್ಪಾಡಿ ತಳಮನೆಯಿಂದ ಶ್ರೀ ಧರ್ಮರಸು ಉಳ್ಳಾಕುಲು ,ಪಿಲಿಭೂತ,ಕುಕ್ಕಳದ ಪಂಜುರ್ಲಿ ದೈವಗಳ ಭಂಡಾರ ಕುದ್ರೋಳಿಮಾಡ ಸಾನಿಧ್ಯಕ್ಕೆ ಆಗಮಿಸಿತು. ಸಂಜೆ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು. ಫೆ.23ರಂದು ಶ್ರೀ ಧರ್ಮರಸು ಉಳ್ಳಾಕುಲು ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಪುಣ್ಚಪ್ಪಾಡಿ ಕುದ್ರೋಳಿಮಾಡ ಶ್ರೀ ಧರ್ಮರಸು ಉಳ್ಳಾಕುಲು, ಪಿಲಿಭೂತ, ಕುಕ್ಕಳದ ಪಂಜುರ್ಲಿ ದೈವಸ್ಥಾನದ ನೇಮೋತ್ಸವ ಸಮಿತಿಯ ಅಧ್ಯಕ್ಷ ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಗೌರವಾಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ, ದೈವಸ್ಥಾನದ ಸ್ಥಳದಾನಿ ದಯಾನಂದ ನಾಯಕ್ ಬೆಂಗಳೂರು, ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಜಯರಾಮ ರೈ ತೋಟದಡ್ಕ ಹಾಗೂ ನೇಮೋತ್ಸವ ಸಮಿತಿ, ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳು, ಊರ-ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.