ಪುತ್ತೂರು: ತಾಲೂಕು ಯುವ ಬಂಟರ ಸಂಘದ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಮಿತಿ ಹಾಗೂ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ಸಹಕಾರಿ ಧುರೀಣ ದಿ| ಎ.ಜೀವನ್ ಭಂಡಾರಿ ಸಿದ್ಯಾಳ ಸ್ಮರಣಾರ್ಥ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪುತ್ತೂರ್ದ ಬಂಟ ಜವನೆರೆ ಗೊಬ್ಬು (ಬಂಟ್ಸ್ ಪ್ರೀಮಿಯರ್ ಲೀಗ್-೨೦೨೫) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ಫೆ.೨೩ರಂದು ಸಂಜೆ ನಡೆಯಿತು.
ಕ್ರೀಡೆಯಿಂದ ಸಂಘಟನೆ- ನಳಿನ್ಕುಮಾರ್:
ಮುಖ್ಯ ಅತಿಥಿಯಾಗಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ರವರು ಮಾತನಾಡಿ, ಕ್ರೀಡೆಯಿಂದ ಸಮಾಜದ ಸಂಘಟನೆಯನ್ನು ಬಲಿಷ್ಟಗೊಳಿಸಲು ಸಾಧ್ಯವಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ. ಯುವ ಬಂಟರ ಸಂಘದ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಒಗ್ಗೂಡಿಸಿ ದೊಡ್ಡ ಮಟ್ಟದ ಕ್ರೀಡಾಕೂಟ ಸಂಘಟಿಸಿದ ಹರ್ಷಕುಮಾರ್ ರೈ ಮಾಡಾವುರವರನ್ನು ಅಭಿನಂದಿಸುವುದಾಗಿ ಹೇಳಿ, ಯುವ ಬಂಟರು ಮುಂದೆಯೂ ಸಮಾಜಮುಖಿ ಕೆಲಸವನ್ನು ನಿರಂತರವಾಗಿ ಮಾಡಬೇಕು ಎಂದು ಹೇಳಿದರು.
ಹರ್ಷ ರೈ ನೇತೃತ್ವದಲ್ಲಿ ಯಶಸ್ವಿ ಕಾರ್ಯಕ್ರಮ-ಹೇಮನಾಥ ಶೆಟ್ಟಿ:
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಬಂಟರಿಗೆ ನಾಯಕತ್ವ ವಹಿಸಿಕೊಳ್ಳಲು ಯುವ ಬಂಟರ ಸಂಘ ವೇದಿಕೆಯಾಗಲಿದೆ. ಯುವ ಬಂಟರು ಒಗ್ಗೂಡಿ ಸಮಾಜಮುಖಿ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದರು. ಬಂಟ ಯುವಕರು ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು, ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟವು ಹರ್ಷಕುಮಾರ್ ರೈ ಮಾಡಾವುರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲರೂ ಪೂರ್ಣ ಸಹಕಾರ ನೀಡಿದ್ದಾರೆ- ಹರ್ಷಕುಮಾರ್ ರೈ:
ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿ, ಮಾತನಾಡಿ ಯುವ ಬಂಟರ ಸಂಘದ ಸಾರಥ್ಯದಲ್ಲಿ ದಿ| ಎ.ಜೀವನ್ ಭಂಡಾರಿಯವರ ಸ್ಮರಣಾರ್ಥ ಎರಡು ದಿನ ನಡೆದ ಕ್ರಿಕೆಟ್ ಪಂದ್ಯಾಟಕ್ಕೆ ಎಲ್ಲರೂ ಪೂರ್ಣ ಸಹಕಾರವನ್ನು ನೀಡಿ ಯಶಸ್ವಿಗೊಳಿಸಿದ್ದಾರೆ. ಕಳೆದ ಒಂದು ವಾರದಿಂದ ದಯಾನಂದ ರೈ ಕೋರ್ಮಂಡ ಹಾಗೂ ಕಾರ್ತಿಕ್ ರೈ ಬೆಳಿಯೂರುಕಟ್ಟೆರವರು ಕ್ರೀಡಾಕೂಟದ ಯಶಸ್ವಿಗೆ ಅವಿರತವಾಗಿ ಶ್ರಮ ಪಟ್ಟಿದ್ದಾರೆ ಎಂದು ಹೇಳಿ ಅವರನ್ನು ಅಭಿನಂದಿಸಿದರು.
ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ರವರು ವಿಜೇತರಿಗೆ ಬಹುಮಾನ ವಿತರಿಸಿದರು. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ಉದ್ಯಮಿಗಳಾದ ಶಿವಪ್ರಸಾದ್ ಶೆಟ್ಟಿ ಕಿನಾರ, ಎಂ.ಆರ್.ಜಯಕುಮಾರ್ ರೈ, ಶಿವರಾಮ ಆಳ್ವ ಬಳ್ಳಮಜಲು, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಮನು ಎಂ. ರೈ ನರಿಮೊಗರು, ಪುತ್ತೂರು ಅಕ್ರಮ-ಸಕ್ರಮ ಸಮಿತಿ ಸದಸ್ಯೆ ರೂಪರೇಖಾ ಆಳ್ವ, ಬಂಟರ ಸಂಘದ ನಿರ್ದೇಶಕಿ ಹರಿಣಾಕ್ಷಿ ಜೆ.ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು, ಪ್ರಧಾನ ಕಾರ್ಯದರ್ಶಿ ಕುಸುi ಪಿ.ಶೆಟ್ಟಿ, ತಾಲೂಕು ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಮಾಜಿ ಸೈನಿಕರಾದ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದೇರ್ಲ ಅಮ್ಮಣ್ಣ ರೈ ಪಾಪೆಮಜಲು, ಪುತ್ತೂರು ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ರೈ ಬಲ್ನಾಡು, ಬಂಟರ ಸಂಘದ ವಿಶೇಷ ಆಹ್ವಾನಿತರಾದ ತಿಲಕ್ ರೈ ಕುತ್ಯಾಡಿ, ನಯನಾ ರೈ ನೆಲ್ಲಿಕಟ್ಟೆ, ಮಲ್ಲಿಕಾ ಜೆ. ರೈ, ಸ್ವರ್ಣಲತಾ ಜೆ. ರೈ, ಜಯಂತಿ ಎಂ. ರೈ ಮಾಡಾವು, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡ ಉಪಸ್ಥಿತರಿದ್ದರು.
ಸನ್ಮಾನ;
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಗೌರವಾರ್ಪಣೆ;
ಕ್ರೀಡಾಕೂಟದ ಮುಖ್ಯ ಕಾರ್ಯನಿರ್ವಹಣಾಽಕಾರಿ ದಯಾನಂದ ರೈ ಕೊರ್ಮಂಡ, ಕ್ರೀಡಾಕೂಟದ ಸಂಚಾಲಕ ಕಾರ್ತಿಕ್ ರೈ ಬೆಳಿಯೂರುಕಟ್ಟೆ, ಸುದ್ದಿ ಬಿಡುಗಡೆ ವರದಿಗಾರ ಉಮಾಪ್ರಸಾದ್ ರೈ ನಡುಬೈಲು, ಛಾಯಾಗ್ರಾಹಕ ನವೀನ್ ಪಂಜಳ, ದೃಶ್ಯ ಮಾಧ್ಯಮದ ಶ್ರೇಯಾಸ್ರವರಿಗೆ ಗೌರವಾರ್ಪಣೆ ಮಾಡಲಾಯಿತು.
ಕ್ರೀಡಾಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ರೈ ಕೊರ್ಮಂಡ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೈ ಸೊರಕೆ, ಕೋಶಾಧಿಕಾರಿ ಶಿವಶ್ರೀರಂಜನ್ ರೈ ದೇರ್ಲ, ಕ್ರೀಡಾ ಸಂಚಾಲಕ ಕಾರ್ತಿಕ್ ರೈ ಬೆಳಿಯೂರುಕಟ್ಟೆ, ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಶುಭ ರೈ ಸಹಕರಿಸಿದರು.
ಪ್ರಥಮ-ಕುಂಟೋಡಿ ಸ್ಟ್ರೈಕರ್ಸ್ ಕಡಬ
ದ್ವಿತೀಯ- ಬಂಟ್ಸ್ ಇಲೆವೆನ್ ಪಾಪೆಮಜಲು
ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ.೭೫ ಸಾವಿರ ಹಾಗೂ ಟ್ರೋಫಿಯನ್ನು ಕುಂಟೋಡಿ ಸ್ಟ್ರೈಕರ್ಸ್ ಕಡಬ ತಂಡ ಪಡೆದುಕೊಂಡಿತು. ದ್ವಿತೀಯ ಬಹುಮಾನ ರೂ.೫೦ ಸಾವಿರ ಹಾಗೂ ಟ್ರೋಫಿಯನ್ನು ಬಂಟ್ಸ್ ಇಲೆವೆನ್ ಪಾಪೆಮಜಲು ತಂಡ ಪಡೆದುಕೊಂಡಿತು. ಪಂದ್ಯಾಟದಲ್ಲಿ ಒಟ್ಟು ೮ ತಂಡಗಳು ಭಾಗವಹಿಸಿದ್ದವು. -.೨೨ ಹಾಗೂ ೨೩ರಂದು ಪಂದ್ಯಾಟ ನಡೆಯಿತು.
ಕ್ರೀಡಾ ಪ್ರೀತಿಯನ್ನು
ಇಮ್ಮಡಿಗೊಳಿಸಿದ ಕ್ರೀಡಾಕೂಟ
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಯುವ ಬಂಟರ ಸಂಘದ ವತಿಯಿಂದ ಎರಡು ದಿನ ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಕಾರ್ಯಕ್ರಮದಲ್ಲಿ ಸಹಕರಿಸಿದ ಕ್ರೀಡಾಪಟುಗಳಿಗೆ, ತೀರ್ಪುಗಾರರಿಗೆ, ಪಂದ್ಯಾಟದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದ ಯುವ ಬಂಟರ ಸಂಘದವರಿಗೆ, ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ವಂದನೆಗಳು.
-ಹರ್ಷಕುಮಾರ್ ರೈ ಮಾಡಾವು ಅಧ್ಯಕ್ಷರು
ತಾಲೂಕು ಯುವ ಬಂಟರ ಸಂಘ ಪುತ್ತೂರು