ಲೇಖನ: ಸುಜಾತ ರಾಜೇಶ್ ಉಪ್ಪಿನಂಗಡಿ
ಪ್ರಾಣಿ ಪ್ರಿಯರೆಲ್ಲ ನಮ್ಮೊಂದಿಗೆ ಒಂದು ಕ್ಷಣ ಕೈ ಜೋಡಿಸುವಿರಾ?
ನಾವೆಲ್ಲ ಸೇರಿ ಒಂದೊಳ್ಳೆ
ಪುಣ್ಯದ ಕೆಲಸ ಮಾಡೋಣವೇ?
ಈ ವರ್ಷ ಫೆಬ್ರವರಿ ತಿಂಗಳಿನಿಂದಲ್ಲೇ
ಅತಿಯಾದ ಬಿಸಿಲಿನ ತಾಪಮಾನ ಇರುವುದರಿಂದ
ಪ್ರಾಣಿ ಪಕ್ಷಿಗಳು ನೀರಿಲ್ಲದೆ ಬಾಯಾರಿ ಸಾಯುವ ಪರಿಸ್ಥಿತಿ ಬಂದಿದೆ.
ಬೀದಿಯಲ್ಲಿ ಇರುವ ಪ್ರಾಣಿಗಳಿಗೆ ಊಟ ಸಿಗುವುದೇ
ಕಷ್ಟವಿರುವಾಗ ನೀರು ಎಲ್ಲಿಂದ?
ಯಾರಾದ್ರೂ ಹಾಕಿದ ಬಿಸ್ಕೆಟ್ ತಿಂಡಿಗಳಿಂದ ಬದುಕುತ್ತಿರುತ್ತವೆ.
ಮಳೆಗಾಲದ್ದಲ್ಲಾದರೆ ಎಲ್ಲಾದರೂ ನಿಂತ ನೀರಾದರು ಸಿಗಬಹುದು.
ಸುಡು ಬಿಸಿಲಲ್ಲಿ ಎಲ್ಲಿ ಸಿಗಲು ಸಾಧ್ಯ?
ಮೈಸೂರು, ಬೆಂಗಳೂರು, ಕಡೆಯಲ್ಲಿ ಬೀದಿ ಬದಿಯಲ್ಲಿ ಸಿಮೆಂಟ್ ಪಾಟ್ ಇಟ್ಟಿರುತ್ತಾರೆ
ನಮ್ಮ ಊರಲ್ಲಿ ಇಂತಹ ವ್ಯವಸ್ಥೆ ಎಲ್ಲಿಯೂ ಕಾಣ ಸಿಗುವುದಿಲ್ಲ.
ನಾವೆಲ್ಲರೂ ಸೇರಿ ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಯಾಕೆ ಮಾಡಬಾರದು.
ಈ ಕೆಲಸ ಓಬ್ಬಳಿಂದ ನಡೆಸಲು ಸಾಧ್ಯವಿಲ್ಲ. ನಾವೆಲ್ಲ
ಒಟ್ಟಾಗಿ ಒಂದೊಳ್ಳೆ ಪುಣ್ಯದ ಕೆಲಸ ಮಾಡೋಣ
ಪ್ರಾಣಿ ಪ್ರಿಯರೆಲ್ಲ ಬನ್ನಿ ಆದಷ್ಟು ಬೇಗ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡೋಣ ಎಂದು ನನ್ನ ಕಳಕಳಿಯ ವಿನಂತಿ.
Sujatha Rajesh uppinangady
:9945780922