ʼಸಮಾಜಮುಖಿ ಚಿಂತನೆ ನನಸು ಮಾಡಿದ ಮಹಾನ್ ವ್ಯಕ್ತಿʼ -ಕೊರುವೈಲು ಶಂಕರ ನಾೖಕ್‌ ಶ್ರದ್ದಾಂಜಲಿಯಲ್ಲಿ ಬಾಲಕೃಷ್ಣ ನಾೖಕ್‌

0

ಪುತ್ತೂರು: ಅದೆಷ್ಟೋ ಯುವಕ ಮಂಡಲಗಳಿಗೆ ಪ್ರೋತ್ಸಾಹ ನೀಡಿ ತನ್ನ ನಿವೃತ್ತಿಯ ನಂತರವೂ ಯುವಕರಂತೆ ಓಡಾಡಿ ಎಲ್ಲರೊಂದಿಗೆ ಒಡನಾಡಿಯಾಗಿ ಸಮಾಜಮುಖಿ ಚಿಂತನೆಯನ್ನು ನನಸು ಮಾಡಲು ಶ್ರಮಿಸಿದ ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ ಕೊರುವೈಲು ಶಂಕರ್ ನಾೖಕ್‌ ಅವರು ಎಲ್ಲರಿಗೂ ಮಾದರಿ ಎಂದು ಅವರ ಭಾವ ಬಾಲಕೃಷ್ಣ ನಾೖಕ್‌ ಅವರು ಹೇಳಿದರು.


ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿರದಲ್ಲಿ ಫೆ. 27ರಂದು ನಡೆದ ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯಾಗಿದ್ದ ಕೊರುವೈಲು ಶಂಕರ್ ನಾೖಕ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮ ಸಲ್ಲಿಸಿದರು. ಆರಂಭದಲ್ಲಿ ಶಂಕರ್ ನಾೖಕ್‌ ಅವರ ಪುತ್ರ ಗಿರೀಶ್ ಕುಮಾರ್ ತಂದೆಯವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿದರು. ಶಂಕರ್ ನಾೖಕ್‌ ಅವರು ಪಟೇಲ್ ಮನೆತನದವರು.1976ರಲ್ಲಿ ಅವರು ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ಶಿವಮೊಗ್ಗ, ಕೆ.ಆರ್‌ನಗರ, ಮಡಿಕೇರಿ, ಪುತ್ತೂರಿನಲ್ಲಿ ಉತ್ತಮ ಸಮಾಜಮುಖಿ ಕಾರ್ಯದೊಂದಿಗೆ ಹಲವಾರು ಯುವಕ ಮಂಡಲದ ಬೆಳವಣಿಗೆಗೆ ಕಾರಣಕರ್ತರಾದರು. ನಿವೃತ್ತಿಯ ನಂತರವೂ ಯುವಕರಂತೆ ಓಡಾಡಿ ಎಲ್ಲರೊಂದಿಗೆ ಒಡನಾಡಿಯಾಗಿದ್ದರು. ಸಮಾಜಮುಖಿ ಚಿಂತನೆಯನ್ನು ನನಸು ಮಾಡಲು ಪರಿವಾರ ಕ್ರೆಡಿಟ್ ಕೋ ಒಪರೇಟಿವ್ ಸೊಸೈಟಿಯ ಮುಖ್ಯಪ್ರವರ್ತಕರಾಗಿ ಸೇವೆ ಸಲ್ಲಿಸಿದರು. ಸವಣೂರು ಶಿಲ್ಪಿ ಕೆ.ಸೀತಾರಾಮ ರೈ ಅವರ ಆದರ್ಶ ವಿವಿದೊದ್ದೇಶ ಸಹಕಾರಿ ಸಂಘದಲ್ಲೂ 10 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಹಾಲು ಉತ್ಪಾದಕರ ಸಹಕಾರ ಸಂಘದಲ್ಲೂ ಸಕ್ರಿಯರಾಗಿದ್ದ ಅವರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯಲ್ಲೂ ಸಕ್ರಿಯರಾಗಿರುವ ಮೂಲಕ ಎಲ್ಲರೊಂದಿಗೂ ಸ್ನೇಹಮಯಿಯಾಗಿದ್ದರು ಎಂದರು.


ಸವಣೂರು ಯುವಕ ಮಂಡಲಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಕಾರಣಕರ್ತರಾದವರು:
ಶಂಕರ್ ನಾೖಕ್‌ ಅವರ ಭಾವ ಸುದರ್ಶನ್ ನಾೖಕ್‌ ಕಂಪ ಅವರು ಮಾತನಾಡಿ, ಅವರು ತನ್ನ ಅಧಿಕಾರವದಿಯಲ್ಲಿ ಯುವಕರೊಂದಿಗೆ ಯುವಕರಾಗಿ ಸೇರಿಕೊಂಡು ಹಲವಾರು ಯುವಜನಮೇಳವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸವಣೂರು ಯುವಕಮಂಡಲಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಸಿಗಲು ಇವರು ಕಾರಣಕರ್ತರಾಗಿದ್ದರು ಎಂದು ಹೇಳಿದರು.
ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕ ರತ್ನಾಕರ ನಾೖಕ್‌ ಅವರು ಮಾತನಾಡಿ ನಾನು ಶಂಕರ್ ನಾೖಕ್‌ ಅವರೊಂದಿಗೆ ಸುಮಾರು 50 ವರ್ಷದಿಂದ ಒಡನಾಟದಲ್ಲಿದ್ದೆ. ಸೊಸೈಟಿಯ ಸ್ಥಾಪನೆಗೆ ಮುಖ್ಯ ಕಾರಣಕರ್ತರಾದ ಸಮಾಜದ ಎಳ್ಗೆಗಾಗಿ ಶ್ರಮಿಸುತ್ತಿದ್ದರು. ನಮ್ಮ ಸಮಾಜಕ್ಕೊಂದು ಕಲ್ಯಾಣ ಮಂಟಪ ಆಗಬೇಕೆಂದು 2 ಎಕ್ರೆ ಜಾಗ ಖರೀದಿಸಲು ಅವರೇ ಕಾರಣಕರ್ತರಾದರು.


ನಾನು ಉದ್ಯೋಗದಲ್ಲಿನ ಸಾಧನೆಗೆ ಶಂಕರ್ ನಾೖಕ್‌ ಕಾರಣ:
ಶಂಕರ್ ನಾೖಕ್‌ ಅವರ ಒಡನಾಡಿ ಮತ್ತು ಅವರ ಜೊತೆ ಉದ್ಯೋಗ ಮಾಡಿದ ಹಿರಿಯರಾದ ಕೃಷ್ಣರಾಜ್ ಭಟ್ಕಳ ಅವರು ಕಾರ್ಯಕ್ರಮದ ನಿರೂಪಕರ ಮೂಲಕ ನಾನು ಉದ್ಯೋಗದಲ್ಲಿನ ಸಾಧನೆಗೆ ಶಂಕರ್ ನಾೖಕ್‌ ಕಾರಣ ಎಂದು ಸಭೆಗೆ ತಿಳಿಸಿದರು. ದಾಮೋದರ ಪಾಟಾಲಿ ಕಾರ್ಯಕ್ರಮ ನಿರೂಪಿಸಿದರು.


ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಂಕರ್ ನಾೖಕ್‌ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು. ಬಳಿಕ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ಆಗಮಿಸಿದವರು ಶಂಕರ್ ನಾೖಕ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.

ಈ ಸಂದರ್ಭ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕೊಳ್ತಿಗೆ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ವೆಂಕಟ್ರಮಣ ಗೌಡ, ಶಿವಪ್ರಸಾದ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಪ್ರಮೋದ್ ಕೆ ಎಸ್, ಸಿಟಿ ಡಯಾಗ್ನೋಸ್ಟಿಕ್‌ನ ಆಡಳಿತ ಮಂಡಳಿ ನಿದೇಶಕ ಪ್ರವೀಣ್, ಪಿಡಬ್ಲ್ಯೂಡಿ ಕ್ಲಾಸ್ ೧ ಗುತ್ತಿಗೆದಾರ ಸತೀಶ್ ಕುಮಾರ್, ಸಂತೋಷ್ ಕುಮಾರ್ ಎ, ಸುಧೀರ್ ಎಂಟರ್‌ಪ್ರೈಸಸ್‌ನ ಮಾಲಕ ಉದಯ್, ಎಲ್ಯಣ್ಣ ಗೌಡ, ರೋಟರಿ ಕ್ಲಬ್‌ನ ಅಶ್ರಫ್, ಸದಾಶಿವ ನಾೖಕ್‌, ಬಾಲಕೃಷ್ಣ ಕೊಳತ್ತಾಯ, ಡಾ.ರಾಜೇಶ್ ಬೆಜ್ಜಂಗಳ, ಸಂತೋಷ್ ಶೆಟ್ಟಿ, ಪ್ರವೀಣ್ ನಾೖಕ್‌ ಕೆಮ್ಮಾಯಿ, ಗಣೇಶ್ ಶೆಟ್ಟಿ, ನಿತಿನ್ ಪಕ್ಕಳ, ಕವನ್ ನಾೖಕ್‌, ಸಂಕಪ್ಪ ರೈ, ಚಿಕ್ಕಪ್ಪ ನಾೖಕ್‌, ಆದರ್ಶ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ಜಾಲಾಡಿ, ದುರ್ಗಾ ಮೊಟಾರ್ಸ್ ಮಂಗಳೂರು ಇದರ ಮ್ಯಾನೆಜಿಂಗ್ ಪಾಲುದಾರರಾದ ಚಂದ್ರಕುಮಾರ್ ಮತ್ತು ಪಾಟ್ನರ್ ಉದಯ ಕುಮಾರ್, ರಾಕೇಶ್ ರೈ ಕೆಡಂಜಿ, ಉಮಾಶಂಕರ್ ಸಹಿತ ಹಲವಾರು ಮಂದಿ ಆಗಮಿಸಿ ಪುಷ್ಪಾರ್ಚಣೆ ಮಾಡಿದರು. ಶಂಕರ್ ನಾೖಕ್‌ ಅವರ ಪತ್ನಿ ಸರೋಜ, ಪುತ್ರ ಗಿರೀಶ್ ಕೆ.ಎಸ್, ಪುತ್ರಿ ರಂಜಿತಾ ಬಿ.ಆರ್, ಸೊಸೆ ಸವಿತಾ ಕೆ.ಎಸ್, ಅಳಿಯ ಮತ್ತು ಸಂಬಂಧಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here