ಭಾರತೀಯ ಸೇನೆಯ ಯೋಧ ಲಕ್ಷ್ಮೀಶ ಕಡಮಜಲು ನಿವೃತ್ತಿ-ಮಾ.2ರಂದು ಹುಟ್ಟೂರಲ್ಲಿ ಸಾರ್ವಜನಿಕ ಗೌರವಾರ್ಪಣೆ

0

ಪುತ್ತೂರು:ಭಾರತೀಯ ಸೇನೆಯಲ್ಲಿ ಸುಮಾರು 18 ವರ್ಷಗಳ ಕಾಲ ಭಾರತದ ವಿವಿಧ ರಾಜ್ಯಗಳಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿರುವ ಕೆದಂಬಾಡಿ ಗ್ರಾಮದ ಕಡಮಜಲು ನಿವಾಸಿ ಲಕ್ಷ್ಮೀಶರವರು ಫೆ.28ರಂದು ಸ್ವಯಂ ನಿವೃತ್ತ ಪಡೆದುಕೊಂಡರು.


ಕೆದಂಬಾಡಿ ಗ್ರಾಮದ ಕಡಮಜಲು ನಿವಾಸಿ ಕೇಚು ಪಾಟಾಳಿ ಹಾಗೂ ಸರಸ್ವತಿ ದಂಪತಿ ಪುತ್ರನಾಗಿರುವ ಲಕ್ಷ್ಮೀಶರವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ತಿಂಗಳಾಡಿ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ಕೆಯ್ಯೂರು ಹಾಗೂ ಪದವಿ ಶಿಕ್ಷಣವನ್ನು ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿರುತ್ತಾರೆ.

2007ರ ದಿನಾಂಕ ಸಪ್ಟಂಬರ್‌ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಹೈದರಾಬಾದ್‌ನ ಆರ್ಟಿ ಸೆಂಟರ್ ನಲ್ಲಿ ತರಬೇತಿಯನ್ನು ಮುಗಿಸಿ, ನಂತರ ಜಮ್ಮು ಕಾಶ್ಮೀರದ ಜಮ್ಮು ಸತ್ವರಿ,ಉರಿ ಸೆಕ್ಟರ್, ಪೂಂಚ್, ಉತ್ತರಾಕಾಂಡ್‌ನ ರೈವಾಲ, ಲೇ ಲಡಾಕ್‌ನ ತಾಂಗ್‌ತ್ಸೆ ,ರಾಜಸ್ಥಾನದ ನಸೀರಾಬಾದ್, ಜೈಸಲ್ಮೇರ್ ಹಾಗೂ ಪಶ್ಚಿಮ ಬಂಗಾಳದ ಊಡಲ್ಬರಿ ಮುಂತಾದ ಕಡೆಗಳಲ್ಲಿ ಸೇರಿಂದತೆ ಒಟ್ಟು 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಫೆ.28ಕ್ಕೆ ಸ್ವಯಂ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸುತ್ತಿದ್ದಾರೆ.


ಸೇವೆಯಲ್ಲಿನ ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಭಾರತೀಯ ಸೇನೆಯು ವಿಶೇಷ ಸೇವಾ ಪದಕ, ಹೈ ಆಲ್ಟಿಟ್ಯೂಡ್ ಮೆಡಲ್, ಸೈನ್ಯಸೇವಾ ಪದಕ, 9 ವರ್ಷಗಳ ದೀರ್ಘ ಸೇವಾ ಪದಕ ಹಾಗೂ ಭಾರತೀಯ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಪದಕ ಮುಂತಾದ ಗೌರವಗಳನ್ನು ನೀಡಿ ಪುರಸ್ಕರಿಸಿದೆ. ಪ್ರಸ್ತುತ ಇವರು ತಂದೆ, ತಾಯಿ,ಪತ್ನಿ ಚೈತ್ರ, ಪುತ್ರ ಧೃತಿ ಕೆ., ಪುತ್ರಿ ದ್ರುವಿತ್ ಕೆ., ಸಹೋದರ ಹರೀಶ ಹಾಗೂ ಅತ್ತಿಗೆ ಸುನೀತಾ ಇವರೊಂದಿಗೆ ಕೆದಂಬಾಡಿ ಗ್ರಾಮದ ಕಡಮಜಲಿನಲ್ಲಿ ವಾಸ್ತವ್ಯವಿದ್ದಾರೆ.


ಮಾ.2 ಹುಟ್ಟೂರಲ್ಲಿ ಗೌರವಾರ್ಪಣೆ
ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಲಿರುವ ಯೋಧ ಲಕ್ಷ್ಮೀಶರವರಿಗೆ ಹುಟ್ಟೂರಾದ ಕೆದಂಬಾಡಿ ಗ್ರಾಮದ ಕಡಮಜಲುನಲ್ಲಿರುವ ಅವನ ನಿವಾಸದಲ್ಲಿ ಮಾ.2ರಂದು ಸಂಜೆ ಸಾರ್ವಜನಿಕ ಗೌರವಾರ್ಪಣೆಯು ನಡೆಯಲಿದೆ.

LEAVE A REPLY

Please enter your comment!
Please enter your name here