ಬೇರಿಕೆಯಲ್ಲಿ ಗುಡ್ಡ ಅಗ್ನಿಗಾಹುತಿ

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಬೇರಿಕೆ ಎಂಬಲ್ಲಿರುವ ಪೊಲೀಸ್ ಕ್ವಾಟ್ರಸ್ ಹಿಂದುಗಡೆಯ ಗುಡ್ಡಕ್ಕೆ ಫೆ.28ರಂದು ಬೆಂಕಿ ಬಿದ್ದಿದ್ದು, ಸುಮಾರು ಅರ್ಧ ಎಕರೆಯಷ್ಟು ಗುಡ್ಡ ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು, ಮರ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.


ಇಲ್ಲಿರುವ ವಿದ್ಯುತ್ ಪರಿವರ್ತಕದಿಂದ ಬಿದ್ದ ಬೆಂಕಿಯ ಕಿಡಿಯು ಒಣಗಿದ ತರಗೆಲೆಗಳಿಗೆ ತಾಗಿ ಹೊತ್ತಿ ಉರಿದು ಗುಡ್ಡವನ್ನು ಆಹುತಿ ಪಡೆದಿದೆ. ಬಳಿಕ ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿತು. ಪೊಲೀಸ್ ಕ್ವಾಟ್ರಸ್‌ನ ಕಾರು ಷೆಡ್‌ಗಳ ಹಾಗೂ ಮನೆಯೊಂದರ ಸಮೀಪದ ತನಕ ಬೆಂಕಿಯು ಹರಡಿತ್ತು.

LEAVE A REPLY

Please enter your comment!
Please enter your name here