
ಆಲಂಕಾರು:ಶ್ರೀ ಮಹಾಕಾಳಿ ಅಮ್ಮನವರು, ರಕ್ತೇಶ್ವರಿ,ವರ್ಣರ ಪಂಜುರ್ಲಿ,ಶಿರಾಡಿ,ಗುಳಿಗ ದೈವಗಳ ದೇವಸ್ಥಾನ ಕುಂಡಡ್ಕ ರಾಮಕುಂಜದಲ್ಲಿ ಮಾ.2 ಮತ್ತು 3ರಂದು ಪ್ರತಿಷ್ಠಾ ವಾರ್ಷಿಕ ಮತ್ತು ನೇಮೋತ್ಸವ ನಡೆಯಲಿದೆ.
ಮಾ.2ರಂದು ಬೆಳಿಗ್ಗೆ ಶ್ರೀ ಮಹಾಕಾಳಿ, ರಕ್ತೇಶ್ವರಿ, ವರ್ಣರ ಪಂಜುರ್ಲಿ, ಶಿರಾಡಿ, ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆದು ಸಂಜೆ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಗೋಕುಲನಗರ, ಶ್ರೀ ದೇವಿ ಭಜನಾ ಮಂಡಳಿ ವರ್ನಡ್ಕ, ಶ್ರೀ ದೇವಿ ಭಜನಾ ತಂಡ ವರ್ನಡ್ಕ ರವರಿಂದ ಭಜನೆ ನಡೆದು ಶ್ರೀ ಮಹಾಕಾಳಿ, ರಕ್ತೇಶ್ವರಿ, ವರ್ಣರ ಪಂಜುರ್ಲಿ, ಶಿರಾಡಿ, ಗುಳಿಗ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆದು ಶ್ರೀ ಮಹಾಕಾಳಿ, ರಕ್ತೇಶ್ವರಿ, ವರ್ಣರ ಪಂಜುರ್ಲಿ ದೈವಗಳ ನೇಮೊತ್ಸವ ನಡೆಯಲಿದೆ.
ಮಾ.3ರಂದು ಬೆಳಿಗ್ಗೆ ಶ್ರೀ ಶಿರಾಡಿ, ಗುಳಿಗ ದೈವಗಳ ನೇಮೊತ್ಸವ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಗವದ್ಬಕ್ತರಾದ ತಾವೆಲ್ಲರೂ ಆಗಮಿಸಿ ಶ್ರೀ ಮಹಾಕಾಳಿ ಅಮ್ಮ ಮತ್ತು ಪರಿವಾರ ದೈವಗಳ ಪ್ರಸಾದ ಸ್ವೀಕರಿಸುವಂತೆ ಆಡಳಿತ ಸಮಿತಿ, ಉತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಗೌರವ ಸಲಹೆಗಾರರು, ಎಲ್ಲಾ ಸಮಿತಿಯ ಸಂಚಾಲಕರು, ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.