ಜಾನಪದ ವೀರ ಕ್ರೀಡೆ ಕಂಬಳ ರೈತರ ಸ್ವಾಭಿಮಾನದ ಪ್ರತಿಷ್ಠೆ – ವಿನಯ ಕುಮಾರ್ ಸೊರಕೆ
ಕಂಬಳಕ್ಕೆ ಅಕಾಡೆಮಿ ಜಾರಿಗೆ ಅಧಿವೇಶನದಲ್ಲಿ ಪ್ರಸ್ತಾಪ – ಐವನ್ ಡಿಸೋಜ
ಕಂಬಳ ಆರಂಭಿಸುವಾಗಲೇ ನಾನಿದ್ದೆ – ಚಂದ್ರಹಾಸ ಶೆಟ್ಟಿ
ಪುತ್ತೂರು: ಕಂಬಳಕ್ಕೆ ಎಲ್ಲಿಯ ತನಕ ಅಭಿಮಾನಿಗಳು ಇದ್ದಾರೋ ಅಲ್ಲಿಯ ತನಕ ಕಂಬಳ ನಿಲ್ಲುವುದಿಲ್ಲ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವೀರ ಕ್ರೀಡೆ ಯಾವತ್ತೂ ನಿಲ್ಲಿಸುವ ಸಂಗತಿಯೇ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.
ಪುತ್ತೂರಿನಲ್ಲಿ ಮಾ.1ರಂದು ನಡೆದ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುತ್ತೂರಿನಲ್ಲಿ ಚಂದ್ರಹಾಸ ಶೆಟ್ಟಿಯವರ ನೇತೃತ್ವದಲ್ಲಿ ಕಂಬಳ ಬಹಳ ಯಶಸ್ವಿಯಾಗಿ ನಡೆಯುತ್ತಿದೆ. ಕಂಬಳ ಮಾಡುವುದು ಬಹಳ ಕಷ್ಟವಿದೆ. ಬೆಂಗಳೂರಿನಲ್ಲಿ ಒಂದು ವರ್ಷದ ಹಿಂದೆ ಕಂಬಳ ಮಾಡಿದ್ದೆವು. ಈ ವರ್ಷವೂ ಬೆಂಗಳೂರಿನಲ್ಲಿ ಮಾಡುವ ಕುರಿತು ಭಾರಿ ಅಸೆ ಇತ್ತು. ಆದರೆ ಪೇಟಾದವರು ಕೋರ್ಟ್‌ಗೆ ಹೋದ್ದರಿಂದ ಕಂಬಳ ಮಾಡಲು ಆಗಿಲ್ಲ. ಆದರೆ ಒಂದು ವರ್ಷ ಕಂಬಳ ಮಾಡಿ ವಿಶ್ವಕ್ಕೆ ಕಂಬಳವನ್ನು ತೋರಿಸಿದ್ದೇವೆ. ಇವತ್ತೂ ಕೂಡಾ ಜನರು ಕಂಬಳದ ಮೂಲಕ ನಮ್ಮನು ಗುರುತಿಸುತ್ತಾರೆ. ಇದು ನಮಗೆ ಹೆಮ್ಮೆಯಿದೆ. ಎಂ.ಪಿ. ಎಮ್.ಎಲ್‌ಎ ಸಹಿತ ಬೇರೆ ಬೇರೆ ಸ್ಥಾನಗಳಿಗೆ ಹೋದವರು ಎಲ್ಲರು ಒಂದೊಂದು ಕಂಬಳ ಮಾಡಿದವರು. ಬೇಕಾದರೆ ಇತಿಹಾಸ ನೋಡಿ. ಇವತ್ತು ದಿನದಿಂದ ದಿನಕ್ಕೆ ಕಂಬಳದ ಪ್ರೇಮಿಗಳು ಜಾಸ್ತಿಯಾಗಿದ್ದಾರೆ. ಶಿವಮೊಗ್ಗದ ಕಂಬಳಕ್ಕೂ ಪೇಟಾದವರು ಸ್ಟೇ ತಂದಿದ್ದಾರೆ. ಬೆಂಗಳೂರು ಕಂಬಳಕ್ಕೆ ಸ್ಟೇ ಸಿಗಲಿಲ್ಲ. ಮುಂದಿನ ವರ್ಷ ಕಂಬಳ ಮಾಡುತ್ತೇವೆ. ಕಂಬಳಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದರಿಂದ ಪ್ರತಿ ಕಂಬಳಕ್ಕೂ ತಲಾ ರೂ.5ಲಕ್ಷ ಕೊಡುವುದಾಗಿ ತಿಳಿಸಿದ್ದಾರೆ. ಅದು ನಮ್ಮ ಕೈಗೆ ಬರಲಿಲ್ಲ. ಮುಂದಿನ ದಿನ ಅದು ಬರುವಂತೆ ಮಾಡುತ್ತೇವೆ ಎಂದ ಅವರು ಕಂಬಳ ನಿಲ್ಲಿಸಲು ಯಾರು ಎಲ್ಲಿಗೆ ಬೇಕಾದರೂ ಹೋಗಲಿ ಕಂಬಳವನ್ನು ನಿಲ್ಲಿಸಲು ಅವರಿಂದ ಸಾಧ್ಯವಿಲ್ಲ. ನಾವು ಬೆಂಗಳೂರಿನಲ್ಲೂ, ಶಿವಮೊಗ್ಗ, ಚೆನ್ನೈಯಲ್ಲಿ ಮತ್ತು ಮನಸ್ಸು ಮಾಡಿದರೆ ದುಬೈನಲ್ಲೂ ಕಂಬಳ ಮಾಡಲಿದ್ದೇವೆ.ಕಂಬಲ ನಿಲ್ಲುಸುವವರು ಎಷ್ಟೋ ಪ್ರಾಣಿಗಳು ಹೊಟ್ಟೆಗೆ ಇಲ್ಲದೆ ಇದೆ. ಅದಕ್ಕೆ ಆಹಾರ ಕೊಡುವ ಕೆಲಸವನ್ನು ಮಾಡಲಿ. ನೀವು ಏನು ಹಾರಾಟ ಮಾಡಿದರೂ ನಾವು ಕಂಬಳ ನಿಲ್ಲಿಸುವುದಿಲ್ಲ. ಕಂಬಳಕ್ಕೆ ಎಲ್ಲಿಯ ತನಕ ಅಭಿಮಾನಿಗಳು ಇದ್ದಾರೋ ಅಲ್ಲಿಯ ತನಕ ಕಂಬಳ ನಿಲ್ಲಿಸುವುದಿಲ್ಲ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವೀರ ಕ್ರೀಡೆ ಯಾವತ್ತೂ ನಿಲ್ಲಿಸುವ ಸಂಗತಿಯೇ ಇಲ್ಲ ಎಂದು ಹೇಳಿದರು.

ತುಳು ಭಾಷೆಗಾಗಿ ಅಧಿವೇಶನದಲ್ಲಿ ಮತ್ತೆ ಪ್ರಶ್ನಿಸುತ್ತೇನೆ:
ತುಳುವನ್ನು ರಾಜ್ಯದ 2ನೇ ಹೆಚ್ಚುವರಿ ಭಾಷೆ ಆಗಬೇಕೆಂದು ಪ್ರಥಮ ಅಧಿವೇಶನದಲ್ಲಿ ನಾನು ಮಾತನಾಡಿದ್ದೆ. ನಮ್ಮ ಭಾಗದಿಂದ ಹಲವು ಶಾಸಕರು, ಮಂತ್ರಿಗಳು, ಆಗಿ ಹೋಗಿದ್ದರೂ. ತುಳುವಿನ ಹೆಚ್ಚುವರಿ ಭಾಷೆಯ ಬಗ್ಗೆ ಯಾರು ಎತ್ತಿ ಹಿಡಿಯಲಿಲ್ಲ. ಒಂದು ಹಂತಕ್ಕೆ ಇವತ್ತು ಈ ಅಧಿವೇಶನದಲ್ಲಿ ಮತ್ತೆ ಪ್ರಶ್ನೆ ಮಾಡಿ ಮುಂದಿನ ದಿನ ರಾಜ್ಯದ ಹೆಚ್ಚುವರಿ ಭಾಷೆಯಾಗಬೇಕೆಂದು ಪ್ರಯತ್ನ ಮಾಡುತ್ತೇನೆ ಎಂದ ಹೇಳಿದ ಅಶೋಕ್ ಕುಮಾರ್ ರೈ ಅವರು ಮುಂದಿನ ದಿನ ತುಳು ಭವನ ಕೂಡಾ ಆಗಲಿದೆ. ಅದರೊಂದಿಗೆ 15 ಎಕ್ರೆ ಜಾಗವೂ ಸಿಗಲಿದೆ. ಅಲ್ಲಿ ಕಂಬಳವನ್ನೂ ಮಾಡುವ ಕುರಿತು ಹಲವು ಬೇಡಿಕೆ ನಮ್ಮ ಮುಂದಿದೆ ಎಂದರು.
ಜಾನಪದ ವೀರ ಕ್ರೀಡೆ ಕಂಬಳ ರೈತರ ಸ್ವಾಭಿಮಾನದ ಪ್ರತಿಷ್ಠೆ:
ನಗರಾಭಿವೃದ್ಧಿ ಇಲಾಖೆಯ ಮಾಜಿ ಸಚಿವ ಕಂಬಳ ಸಮಿತಿ ಗೌರವಾಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ಒಂದು ಕಾಲದಲ್ಲಿ ನಿಂತು ಹೋಗಿದ್ದ ಕಂಬಳವನ್ನು ಜಯಂತ್ ರೈ ಅವರ ನೇತೃತ್ವದಲ್ಲಿ ಆರಂಭಿಸಲಾಯಿತು. ಆಗ ಯುವಕರ ತಂಡ ಕರೆಯನ್ನು ನಿರ್ಮಾಣ ಮಾಡಿದ್ದರು. ಇವತ್ತು ಕೆಲವರು ನಮ್ಮೊಂದಿಗೆ ಇಲ್ಲ. ಆದರೆ ಜಾನಪದ ವೀರ ಕ್ರೀಡೆ ಕಂಬಳ ಇವತ್ತು ರೈತರ ಸ್ವಾಭಿಮಾನದ ಪ್ರತಿಷ್ಠೆ ಆಗಿದೆ. ಮುತ್ತಪ್ಪ ರೈಯವರು ಕಂಬಳಕ್ಕೆ ದೊಡ್ಡ ಶಕ್ತಿ ಕೊಟ್ಟರು. ಇವತ್ತು ಅದೇ ರೀತಿ ಚಂದ್ರಹಾಸ ಶೆಟ್ಟಿಯವರು ಜವಾಬ್ದಾರಿ ತೆಗೆದುಕೊಂಡು ಉತ್ತಮ ಚಾಲನೆ ನೀಡಿದ್ದಾರೆ. ಪುತ್ತೂರು ಕಂಬಳಕ್ಕೆ ಪ್ರಸಿದ್ಧಿ ಇದೆ. ಶಕುಂತಳಾ ಶೆಟ್ಟಿ ಶಾಸಕರಾದ ಬಳಿಕ ಮತ್ತೆ ಕಂಬಳಕ್ಕೆ ಉತ್ತಮ ಸಹಕಾರ ಸಿಕ್ಕಿದೆ. ದಿ.ಸುಧಾಕರ್ ಶೆಟ್ಟಿಯವರು ಸಂಚಾಲಕತ್ವ ವಹಿಸಿದ್ದರು. ಇವತ್ತು ಪುತ್ತೂರು ಶಾಸಕ ಅಶೋಕ್ ರೈ ಅವರಿಂದ ಪುತ್ತೂರು ಮತ್ತು ಉಪ್ಪಿನಂಗಡಿ ಕಂಬಳ ಬಹಳ ಯಶಸ್ವಿಯಾಗಿ ನಡೆಯತ್ತಾ ಬರುತ್ತಿದೆ. ಇವತ್ತು ಕೂಡ ಪಕ್ಷಾತೀತವಾಗಿ ನಡೆಯುತ್ತಿದೆ. ಪುತ್ತೂರು ಮತ್ತು ಉಪ್ಪಿನಂಗಡಿ ಕಂಬಳ ಸೇರಿ ಬೆಂಗಳೂರು ಕಂಬಳವಾಯಿತು. ಜನಪದ ವೀರ ಕ್ರೀಡೆಯನ್ನು ಮುಖ್ಯಮಂತ್ರಿಗಳಿಗೆ ತೋರಿಸಿಕೊಡುವ ಕೆಲಸ ಆಯಿತು. ಇದರ ಪ್ರತಿಫಲವಾಗಿ ದಕ್ಷಿಣ ಕನ್ನಡ ಉಡುಪಿಯಲ್ಲಿ ನಡೆಯುವ ಪ್ರತಿ ಕಂಬಳಕ್ಕೂ ಸರಕಾರ ಕಡ್ಡಾಯವಾಗಿ ರೂ.5ಲಕ್ಷ ನೀಡುವ ಕುರಿತು ತೀರ್ಮಾಣ ಮಾಡಿದೆ ಎಂದರು.
ಕಂಬಳಕ್ಕೆ ಅಕಾಡೆಮಿ ಜಾರಿಗೆ ಅಧಿವೇಶನದಲ್ಲಿ ಪ್ರಸ್ತಾಪ:
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಾತನಾಡಿ, ಪುತ್ತೂರು ಕಂಬಳಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಇದು ರೈತರ ಪಾಲಿನ ಸೌಭಾಗ್ಯ. ಕಂಬಳ ಆಗಬೇಕು.ಆಗಬಾರದು, ನಿಲ್ಲಿಸಬೇಕು. ನಿಲ್ಲಿಸಬಾರದು ಎಂಬ ವಾದ ವಿವಾದದ ನಡುವೆ ಕಂಬಳ ರಾಷ್ಟ್ರಮಟ್ಟದಲ್ಲಿ ಆಯಿತು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಒಂದೇ ದಿನದಲ್ಲಿ ಕಾನೂನು ಮಂಡನೆ ಮಾಡಿ ಗವರ್ನರ್ ಸಹಿ ಮಾಡಿ ನೇರ ಸುಪ್ರಿಂ ಕೋರ್ಟ್‌ಗೆ ಕಳುಹಿಸುವ ಕೆಲಸ ಮಾಡಿದ್ದರು. ಇಡಿ ಕರ್ನಾಟಕ ರಾಜ್ಯ ಕಂಬಳ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಕಂಬಳಕ್ಕೆ ತಲಾ ರೂ.5 ಲಕ್ಷ ದೇಣಿಗೆ ಕೊಡುವ ಕಾರ್ಯಕ್ರಮ ಕರ್ನಾಟಕ ಸರಕಾರದಿಂದ ಆಗಿದೆ. ಕಂಬಳ ರಾಜ್ಯದ ಯಶಸ್ವಿ ಜನಪದ ಕ್ರೀಡೆ. ಈ ಕ್ರೀಡೆ ನಡೆಸುವ ಜನರಿಗೂ, ಭಾಗವಹಿಸುವ ತೀರ್ಪುಗಾರರಿಗೆ, ಕೋಣಗಳಿಗೂ, ಓಟಗಾರರಿಗೂ ಗೌರವ ಸಿಗಬೇಕು. ಹಾಗೆ ಆಗಬೇಕಾದರೆ ರಾಜ್ಯದಲ್ಲಿ ಕಂಬಳ ಅಕಾಡೆಮಿ ಜಾರಿಗೆ ಬರಬೇಕು. ಮುಂದಿನ ಅಧಿವೇಶನದಲ್ಲಿ ಕಂಬಳಕ್ಕೆ ಸ್ಥಾನ ಮಾನ ಕೊಡಬೇಕು ಮತ್ತು ಕಂಬಳ ಅಕಾಡೆಮಿ ಮಾಡಿ ಕಂಬಳದ ಕ್ರೀಡೆಯ ಬಗ್ಗೆ ಸಮಗ್ರ ಚಿಂತನೆ, ಪ್ರೋತ್ಸಾಹ ಸಿಗುವ ನಿಟ್ಟಿನಲ್ಲಿ ಒಂದು ವಿಚಾರ ಮಾಡಲು ಸರಕಾರಕ್ಕೆ ಮನವಿ ಮಾಡಿದ್ದೇನೆ. ಕಂಬಳದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮಾಡಲಿದ್ದೇನೆ ಎಂದು ಹೇಳಿದರು.
ಕಂಬಳ ಆರಂಭಿಸುವಾಗಲೇ ನಾನಿದ್ದೆ:
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ 31 ವರ್ಷದ ಹಿಂದೆ ಪುತ್ತೂರಿನಲ್ಲಿ ಕಂಬಳವು ಕೀರ್ತಿಶೇಷ ಆತ್ಮೀಯ ಮಿತ್ರ ಜಯಂತ್ ರೈ, ಕೋಡಿಂಬಾಡಿ ದಿವಾಕರ ರೈ, ಸುಂದರೇಶ್, ಲೂಯಿಸ್, ಆರಿಗರು ಕೆಲವು ಜನ ಸೇರಿ ಕಂಬಳ ಆರಂಭಿಸಿದ್ದರು. 10ನೇ ವರ್ಷದ ಬಳಿಕ ದಿ.ಮುತ್ತಪ್ಪ ರೈ ಅವರು ಇದರ ಜವಾಬ್ದಾರಿ ಪಡೆದರು. ಆಗ ಕಂಬಳದ ಚಿತ್ರಣವೇ ಬದಲಾಗಿ ಭಾರಿ ವಿಜ್ರಂಭಣೆಯಿಂದ ನಡೆಯಿತು. ಜಯಂತ್ ರೈ, ವಿನಯಣ್ಣರವರು ಕಂಬಳ ಆರಂಭಿಸುವಾಗ ನಾನಿದ್ದೆ. ಆಗ ನಾನು ಬೆಂಗಳೂರಿನಲ್ಲಿ ಬ್ಯಾಂಕ್‌ನಲ್ಲಿದ್ದೆ. ಆ ಬಳಿಕ 17 ವರ್ಷ ಈ ಕಂಬಳದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದೇನೆ. ದೇವರ ಆಶೀರ್ವಾದದಿಂದ ಕಂಬಳ ಯಶಸ್ವಿಯಾಗಿ ನಡೆಯುತ್ತಿದೆ. ಶಾಸಕ ಅಶೋಕ್ ರೈ ಮತ್ತು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಪೂರ್ಣ ಸಹಕಾರ ನೀಡಿದ್ದಾರೆ ಎಂದರು.
ಚಲನಚಿತ್ರ ನಟರಿಂದ ಶುಭ ಹಾರೈಕೆ
ಝಿ ಕನ್ನಡ ದಾರವಾಹಿ ಸೀತಾರಾಮ ಇದರ ನಾಯಕ ನಟ ಗಗನ್ ಚಿನ್ನಪ್ಪ ಮತ್ತು ಚಲನ ಚಿತ್ರ ನಟಿ ವಜ್ರಕಾಯ ಸಿನಿಮ ಖ್ಯಾತಿಯ ತಾರುಣ್ಯ ರಾಮ್ ಅವರು ತುಳುವಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾನತ್ತೂರು ನಾಲ್ವರ್ ದೈವಸ್ಥಾನದಿಂದ ಪ್ರಸಾದ ವಿತರಣೆ
ಪ್ರತಿ ವರ್ಷದಂತೆ ಕಾನತೂರು ನಾಲ್ವರ್ ದೈವಸ್ಥಾನದಿಂದ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ. ಕೆ.ಪಿ.ಗೋಪಿನಾಥನ್ ನಾಯರ್ ಅವರು ಸಭೆಯಲ್ಲಿ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರಿಗೆ ದೈವಸ್ಥಾನದ ಪ್ರಸಾದ ನೀಡಿದರು.
ಶಕುಂತಳಾ ಶೆಟ್ಟಿಯವರ ಹುಟ್ಟು ಹಬ್ಬ ಆಚರಣೆ:
ಇದೇ ಸಂದರ್ಭ ಕಂಬಳ ಸಮಿತಿಯಿಂದ ಶಕುಂತಳಾ ಶೆಟ್ಟಿಯವರ ಹುಟ್ಟು ಹಬ್ಬವನ್ನು ವೇದಿಕೆಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ್ ಶೆಟ್ಟಿ, ಜನಂಪ್ರಿಯ ಪೌಂಡೇಶನ್‌ನ ಅಧ್ಯಕ್ಷ ವಿಟ್ಲದ ಡಾ. ಅಬ್ದುಲ್ ಬಶೀರ್, ಬ್ಯಾಂಕ್ ಆಫ್ ಬರೋಡದ ರೀಜಿನಲ್ ಮ್ಯಾನೇಜರ್ ದೇವಿಪ್ರಸಾದ್ ಶೆಟ್ಟಿಯವರು ಶುಭ ಹಾರೈಸಿದರು. ಅಖಿಲ ಭಾರತ ಇಂಟಕ್ ಕಾರ್ಯದರ್ಶಿ ರಾಕೇಶ್ ಮಲ್ಲಿ, ಭರತ್ ಕುಮಾರ್ ಆರಿಗ, ಸಂತೋಷ್ ಕುಮಾರ್ ರೈ ಇಳಂತಾಜೆ, ಕಂಬಳದ ಪ್ರಧಾನ ತೀರ್ಪುಗಾರ ಕೆ ಗುಣಪಾಲ ಕಡಂಬ ಮೂಡಬಿದ್ರೆ, ಬೂಡಿಯಾರ್ ರಾಧಾಕೃಷ್ಣ ರೈ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಅಭಿಲಾಷ್, ಜಿ.ಪಂ ಮಾಜಿ ಸದಸ್ಯ ಪಿ.ಪಿ ವರ್ಗೀಸ್, ತುಳುಕೂಟ ಬೆಂಗಳೂರು ಇದರ ಅಧ್ಯಕ್ಷ ಸುಂದರರಾಜ್ ರೈ, ಲೋಕೇಶ್ ಶೆಟ್ಟಿ, ಉದ್ಯಮಿ ಸುಜೀರ್ ಶೆಟ್ಟಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಉದ್ಯಮಿ ಉಮೇಶ್ ನಾಡಾಜೆ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಉದ್ಯಮಿ ಉದಯ ಶೆಟ್ಟಿ, ಉದ್ಯಮಿ ಜಯಕುಮಾರ್ ನಾಯರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ಈಶ್ವರ ಬೇಡೆಕರ್, ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಉದ್ಯಮಿ ಶಿವರಾಮ್ ಆಳ್ವ, ರೋಶನ್ ರೈ ಬನ್ನೂರು, ವಿದ್ಯಾಮಾತ ಪೌಂಡೇಶನ್‌ನ ಅಧ್ಯಕ್ಷ ಭಾಗೈಶ್ ರೈ, ಜಿಲ್ಲಾ ಕಂಬಳ ಸಮಿತಿ ಮಾಜಿ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ, ಉದ್ಯಮಿ ರವಿ ಕಕ್ಕೆಪದವು, ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ಸುರೇಂದ್ರ ಐ ಬಳ್ಳಮಜಲು, ನಿವೃತ್ತ ಪ್ರಾಂಶುಪಾಲ ವಿಠಲ ರೈ, ಪ್ರಗತಿಪರ ಕೃಷಿಕ ಹಾಜಿ ಹುಸೇನ್, ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಉಪಾಧ್ಯಕ್ಷ ಎ.ಕೆ.ಜಯರಾಮ ರೈ, ಬೂಡಿಯಾರ್ ಪುರುಷೋತ್ತಮ ರೈ, ಸೋಹಂ ರಿನಿವೇಟರ್ ಎನರ್ಜಿ ಸಿಸ್ಟಮ್ ಬೆಂಗಳೂರು ಇದರ ಜನಲರ್ ಮೆನೇಜರ್ ಹರೀಶ್ ಶೆಟ್ಟಿ, ಉದ್ಯಮಿ ಪ್ರವೀಣ್ ಶೆಟ್ಟಿ ಅಳಕೆಮಜಲು, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಬಶೀರ್ ಅನಿಲಕೋಡಿ, ಮೌರೀಸ್ ಮಸ್ಕರೇನ್ಹಸ್, ಪ್ರೋ ಕಬಡ್ಡಿ ಆಟಗಾರ ಸಚಿನ್ ಸುವರ್ಣ, ಬ್ಯಾಂಕ್ ಬರೋಡದ ಉದ್ಯೋಗಿ ಅವಿನಾಶ್ ಚೌಟ, ಸಂದಿಪ್ ಶೆಟ್ಟ ಅರಿಯಡ್ಕ, ಪ್ರವೀಣ್ ಶೆಟ್ಟಿ, ಸುಧೀರ್ ಶೆಟ್ಟಿ ತೆಂಕಿಲ, ರವಿ ಹಿರೇಮಟ್, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಡಾ. ರವಿನಾರಾಯಣ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಸುಳ್ಯದ ಉದ್ಯಮಿ ವಿಜಯ ಕುಮಾರ್ ರೈ, ಸತೀಶ್ ಭಂಡಾರಿ ಕುಳತ್ತಬೆಟ್ಟು, ಸಹಿತ ಹಲವಾರು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಕೊನೆಯಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಕಂಬಳ ಸಮಿತಿ ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ಅವರು ಕಾರ್ಯಕ್ರಮ ನಿರೂಪಿಸಿದರು.
1 ಎಕ್ರೆ ಜಾಗ ಮಾತ್ರ ಸಿಕ್ಕಿದೆ. ಇನ್ನೂ 14 ಎಕ್ರೆ ಇದೆ:
ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 35 ಎಕ್ರೆ ಜಾಗವಿದೆ. ಆದರೆ ದೇವಸ್ಥಾನದ ಪರಿದಿಯಲ್ಲಿ 15 ಎಕ್ರೆ ಜಾಗ ಮಾತ್ರವಿದೆ. ಉಳಿದ ಜಾಗ ಬೇರೆ ಬೇರೆಯವರ ಕೈಯಲ್ಲಿತ್ತು. ಇತ್ತೀಚೆಗೆ ದೇವಸ್ಥಾನದ ಅಭಿವೃದ್ಧಿಗೆ ಕೆಲವು ಮನೆಯವರೊಂದಿಗೆ ಮಾತನಾಡಿ ತೆರವು ಮಾಡಿ ಆಯಿತು. ಆದರೆ ಎರಡು ಮನೆಯಲ್ಲಿ ಒಂದು ಮನೆಯ ಮೇಲೆ ಮರ ಬಿದ್ದು ಹೋಯಿತು. ಇನ್ನೊಂದು ಮನೆಯನ್ನು ಯಾರೋ ಭಕ್ತರು ತೆರವು ಮಾಡಿದರು. ಈಗ ಅಲ್ಲಿ ನಮಗೆ 1 ಎಕ್ರೆ ಜಾಗ ಮಾತ್ರ ಸಿಕ್ಕಿದೆ. ಇನ್ನೂ 14 ಎಕ್ರೆ ಜಾಗ ಇದೆ. ಹಾಗಾಗಿ ದಯಮಾಡಿ ದೇವರ ಜಾಗವನ್ನು ದೇವರಿಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿದರು. ನಾವೇನು ದಬ್ಬಾಳಿಕೆ ಮಾಡುವುದಿಲ್ಲ. ನಾವು ಅವರ ಕಾಲು ಹಿಡಿಯಲು ಸಿದ್ದರಿದ್ದೇವೆ. ಅವರಿಗೆ ಏನು ಇಲ್ಲದಿದ್ದರೆ ಅವರಿಗೆ ನೆರವು ಮಾಡಲು ಸಿದ್ದರಿದ್ದೇವೆ. ಮೊನ್ನೆ ಖಾಲಿ ಮಾಡಿದ ಮನೆಗಳಿಗೆ ರೂ. 25ಲಕ್ಷವನ್ನು ನಾನು ಮತ್ತು ಈಶ್ವರ ಭಟ್ ಅವರು ಸ್ವಂತ ಕೈಯಲ್ಲಿ ಕೊಟ್ಟಿದ್ದೇವೆ. 75 ಕೋಟಿಯ ಮಾಸ್ಟರ್ ಪ್ಲಾನ್ ಮಾಡಿದ್ದೇವೆ. ಅದೆ ರೀತಿ ಮುಂದೆ ಅಭಿವೃದ್ಧಿ ಕಾರ್ಯ ಆಗಬೇಕು. ಮುಂದೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಬರುವ ಭಕ್ತರಲ್ಲಿ ಅರ್ಧದಷ್ಟು ಜನರು ಇಲ್ಲಿಗೆ ಮತ್ತು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಬಂದರೆ ಈ ಭಾಗ ಅಭಿವೃದ್ಧಿಯಾಗುತ್ತದೆ ಎಂದ ಅಶೋಕ್ ಕುಮಾರ್ ರೈ ಅವರು ಉಪ್ಪಿನಂಗಡಿ ಸಂಗಮ ಕ್ಷೇತ್ರ ಅಭಿವೃದ್ಧಿಯಾದರೆ ಮುಂದೆ ಕುಂಭಮೇಳದಂತೆ ಇಲ್ಲಿಯೂ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತದೆ ಎಂದರು. ಮುಂದಿನ ದಿನ ಪುತ್ತೂರಿಗೆ ಮೆಡಿಕಲ್ ಕಾಲೇಜಿಗೂ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದರು.
7 ಮಂದಿ ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಆರ್.ಬಿ.ಐ ಉತ್ತರ ವಲಯದ ಮಾಜಿ ನಿರ್ದೇಶಕ ಡಾ. ಅಗರಿ ನವೀನ್ ಭಂಡಾರಿ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ರೇ ವಿಜಯ ಹಾರ್ವಿನ್, ಸಾಲೆತ್ತೂರಿನ ಹೆಚ್.ಪಿ.ಆರ್ ಸನರ್ಸಿಂಗ್ ಕಾಲೇಜಿನ ಸಂಸ್ಥಾಪಕ ಹರಿಪ್ರಸಾದ್ ರೈ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿನ್ಸೆಂಟ್ ಪೆರ್ನಾಂಡಿಸ್, ಕೃಷಿ ತಜ್ಞ ಸುರೇಶ್ ಬಲ್ನಾಡು, ಸಾಲೆತ್ತೂರು ಕಂಬಳಕೋಡಿ ಮಹಮ್ಮದ್ ಕುಂಞಿ, ಸಮಾಜಮುಖಿ ಸೇವೆ ಮಾಡಿ ಕಂಬಳಕ್ಕೆ ಶಿಸ್ತಿನ ಚೌಕಟ್ಡು ಹಾಕಿಕೊಟ್ಟ ಬೆಳ್ಳಿಪ್ಪಾಡಿ ಮಂಜಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಂಬಳ ಸಮಿತಿ ಸಂಚಾಲಕ ವಸಂತ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಯೋಗೀಶ್ ಸಾಮಾನಿ, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್, ಜಯಪ್ರಕಾಶ್ ಬದಿನಾರು, ವಿಕ್ರಂ ಶೆಟ್ಟಿಯವರು, ಜೋಕಿಂ ಡಿಸೋಜ ಸನ್ಮಾನ ಪತ್ರ ವಾಚಿಸಿದರು.
ಸುದ್ದಿ ಯುಟ್ಯೂಬ್ ಚಾನೆಲ್ ನಿಂದ ನೇರಪ್ರಸಾರ
ಸುದ್ದಿ ಯುಟ್ಯೂಬ್ ಚಾನೆಲ್‌ನಲ್ಲಿ ಕಂಬಳದ ನೇರಪ್ರಸಾರ ಮಾಡಲಾಗಿತ್ತು. ಲಕ್ಷಾಂತರ ಮಂದಿ ನೇರಪ್ರಸಾರವನ್ನು ವೀಕ್ಷಣೆ ಮಾಡಿದರು.