ಜರ್ಮನ್ ತಂತ್ರಜ್ಞಾನದ ಲೇಸರ್ ಟೆಕ್ನಾಲಜಿ ಚಿಕಿತ್ಸೆ ಇದೀಗ ಹತ್ತೂರ ಒಡೆಯನ ನಾಡಿನಲ್ಲಿ!

0

ಪುತ್ತೂರು: ನಮ್ಮ ದೇಹದ ಸೌಂದರ್ಯಕ್ಕೊಂದು ಮೆರುಗನ್ನು ನೀಡುವ ಮತ್ತು ನಮ್ಮ ವ್ಯಕ್ತಿತ್ವಕ್ಕೊಂದು ಹೊಳಪನ್ನು ನೀಡುವ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಚರ್ಮದ ಪಾಲನೆ ಮತ್ತು ಆರೈಕೆ ಎಂಬುದು ಕೇವಲ ಸೆಲೆಬ್ರಿಟಿಗಳಿಗೆ ಮತ್ತು ಮಾಡೆಲಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಎಂಬ ತಪ್ಪು ಕಲ್ಪನೆಯೊಂದಿದೆ. ಮತ್ತು ನಮ್ಮ ದೇಹದ ಬೇರೆ ಭಾಗಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ನಾವು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಕೊಡುತ್ತಿಲ್ಲವೆಂಬುದೂ ಸಹ ಅಷ್ಟೇ ಸತ್ಯ.
ಆದರೆ, ಇತ್ತೀಚಿನ ದಿನಗಳಲ್ಲಿ ಚರ್ಮದ ಬಗ್ಗೆ ಕಾಳಜಿ ವಹಿಸುವ ಪ್ರವೃತ್ತಿ ಜನರಲ್ಲಿ ಹೆಚ್ಚೆಚ್ಚು ಬೆಳೆಯುತ್ತಿದೆ. ಮತ್ತು ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಾವು ನಿರ್ಲಕ್ಷಿಸಿದಲ್ಲಿ ಅದು ಮುಂದಿನ ದಿನಗಳಲ್ಲಿ ತೀರಾ ಅಪಾಯಕಾರಿಯಾಗಿ ಪರಿಣಮಿಸುವ ಸಂಭವವೂ ಇರುತ್ತದೆ. ಈ ನಿಟ್ಟಿನಲ್ಲಿ ಇದೀಗ ಚರ್ಮದ ಆರೈಕೆಗೆ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳ ಶೀಘ್ರ ನಿವಾರಣೆಗೆ ಲೇಸರ್ ತಂತ್ರಜ್ಞಾನ ಆಧಾರಿತ ಸುಧಾರಿತ ಚಿಕಿತ್ಸಾ ವಿಧಾನ ಪರಿಣಾಮಕಾರಿಯಾಗಿದೆ ಎಂದು ವಿಶ್ವದೆಲ್ಲೆಡೆ ಸಾಬೀತುಗೊಂಡಿದೆ.


ಇದಕ್ಕೆ ಪೂರಕವಾಗಿ ಗ್ರಾಮಾಂತರ ಪ್ರದೇಶದ ಜನರಿಗೂ ಅತ್ಯುತ್ತಮ, ಆಧುನಿಕ ಚರ್ಮದ ಆರೈಕೆ ಸಿಗಬೇಕೆಂಬ ಉದ್ದೆಶವನ್ನಿಟ್ಟುಕೊಂಡು, ಖ್ಯಾತ ಚರ್ಮ ರೋಗ ತಜ್ಞ ಡಾ. ಸಚಿನ್ ಮನೋಹರ್ ಶೆಟ್ಟಿ ಅವರು ಹತ್ತೂರ ಒಡೆಯನ ನೆಲೆವೀಡಾಗಿರುವ ಪುತ್ತೂರಿನ ಬೊಳುವಾರಿನಲ್ಲಿ ಕಳೆದ ಏಳು ವರ್ಷಗಳಿಂದ ‘ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್’ ಎಂಬ ಹೆಸರಿನಲ್ಲಿ ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಊರುಗಳ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುತ್ತಾ ಹೆಸರುವಾಸಿಯಾಗಿದ್ದಾರೆ. ತನ್ನ ಕ್ಲಿನಿಕ್‌ನಲ್ಲಿ ಚರ್ಮದ ಆರೈಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸುವಲ್ಲಿ ಸದಾ ಮುಂದಿರುವ ಸಚಿನ್ ಡಾಕ್ಟ್ರು ಈ ಬಾರಿ ಜರ್ಮನ್ ತಂತ್ರಜ್ಞಾನದ ಹೈ-ಎಂಡ್ ಟೆಕ್ನಾಲಜಿಯ ಲೇಸರ್ ಚಿಕಿತ್ಸೆಯನ್ನು ತಮ್ಮ ಕ್ಲಿನಿಕ್ ನಲ್ಲಿ ಪರಿಚಯಿಸಿದ್ದಾರೆ.


ಪುತ್ತೂರಿನಲ್ಲಿ ಇದೀಗ ಪರಿಚಯಿಸಲಾಗುತ್ತಿದೆ ಲೇಸರ್ ತಂತ್ರಜ್ಞಾನದ ಉತ್ಕೃಷ್ಟತೆ:
ಜರ್ಮನ್ ನಿರ್ಮಿತ ಹೆಚ್.ಎಲ್.ಎಸ್. ಬಯಾಕ್ಸಿಸ್ ನ್ಯಾನೋ ಕ್ಯು-ಸ್ವಿಚ್ಡ್ ಎನ್.ಡಿ. : ಯಾಗ್ ಲೇಸರ್, ಕರಾವಳಿ ಭಾಗದಲ್ಲೇ ಪ್ರಥಮವಾಗಿ ‘ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್’ನಲ್ಲಿ ಪರಿಚಯಿಸಲಾಗುತ್ತಿದ್ದು, ಜರ್ಮನ್ ನಿರ್ಮಿತ ತಂತ್ರಜ್ಞಾನಭರಿತ ಯಂತ್ರದ ಮೂಲಕ ತ್ವಚೆಯ ಉತ್ಕೃಷ್ಟ ಗುಣಮಟ್ಟದ ಆರೈಕೆಯನ್ನು ಇದೀಗ ನೀವು ‘ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್’ ನಲ್ಲಿ ಪಡೆದುಕೊಳ್ಳಬಹುದು. ಅತ್ಯಾಧುನಿಕ ತಂತ್ರಜ್ಞಾನ ಸಹಿತವಾದ ವಿಶೇಷ ಆರೈಕೆ ನಿಮಗೆ ಇಲ್ಲಿ ಲಭ್ಯ.


ಈ ಅತ್ಯಾಧುನಿಕ ಯಂತ್ರದ ಬಗ್ಗೆ:
ಬಯಾಕ್ಸಿಸ್ ಮೆಡಿಕಲ್ ಲೇಸರ್ ಟೆಕ್ನಾಲಜಿ ಮೆಷಿನ್ ಕ್ಯು.ಎಸ್. ಇದನ್ನು ಶಾರ್ಟಾಗಿ ಬಯಾಕ್ಸಿಸ್ ಕ್ಯು.ಎಸ್. (ನ್ಯಾನೋ) ಎಂದು ಕರೆಯಲಾಗುತ್ತದೆ. ಎಲ್ಲಾ ವಿಧದ ಚರ್ಮಗಳ (ತ್ವಚೆ) ಚಿಕಿತ್ಸೆ ಹಾಗೂ ಸೌಂದರ್ಯ ಚಿಕಿತ್ಸೆಯಲ್ಲಿ ಉತ್ಕೃಷ್ಟ ಫಲಿತಾಂಶವನ್ನು ನೀಡಲಿರುವ ಜರ್ಮನ್ ತಯಾರಿತ ಈ ಯಂತ್ರವು ಇದೀಗ ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರಪ್ರಥಮವಾಗಿ ಹತ್ತೂರ ಒಡೆಯನ ನಾಡಿನಲ್ಲಿ ಪರಿಚಯಿಸಲ್ಪಡುತ್ತಿದೆ. ಕಳೆದ ಹಲವಾರು ದಶಕಗಳಿಂದ ವಿಶ್ವಾದ್ಯಂತ ಕೋಟ್ಯಂತರ ಜನರ ಚರ್ಮದ ಸಮಸ್ಯೆಗಳಿಗೆ ಮತ್ತು ತ್ವಚೆಯ ಸೌಂದರ್ಯೀಕರಣದಲ್ಲಿ ಉತ್ತಮ ಫಲಿತಾಂಶವನ್ನು ನೀಡಿರುವ ಈ ಬಯಾಕ್ಸಿಸ್ ಕ್ಯು.ಎಸ್. (ನ್ಯಾನೋ) ಲೇಸರ್ ತಂತ್ರಜ್ಞಾನ ಆಧಾರಿತ ಯಂತ್ರವು ಇದೀಗ ಅಭಿವೃದ್ಧಿ ಪಥದಲ್ಲಿರುವ ಪುತ್ತೂರು ನಗರದ ವೈದ್ಯಕೀಯ ಹೆಮ್ಮೆಯಾಗಿ ‘ಪುತ್ತೂರು ಸ್ಕಿನ್ ಕ್ಲಿನಿಕ್ ಲೇಸರ್ ಸೆಂಟರ್’ನಲ್ಲಿ ಪರಿಚಯಿಸಲ್ಪಡುತ್ತಿದೆ.


ಅತ್ಯಾಧುನಿಕ ಯಂತ್ರದ ಟೆಕ್ನಿಕಲ್ ಹೈಲೈಟ್ಸ್:
-ಚಿಕಿತ್ಸೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಕ್ಯು-ಸ್ವಿಚ್ಡ್ ಎನ್.ಡಿ.: ಯಾಗ್ ಲೇಸರ್ ಸಿಸ್ಟಮ್ ವಿಭಿನ್ನ ವೇವ್ ಲೆಂಗ್ತ್ ಗಳಲ್ಲಿ ಪಲ್ಸ್ ಜನರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
-ಈ ಯಂತ್ರದಲ್ಲಿರುವ 532 ನ್ಯಾನೋ ಮೀಟರ್ (ಗ್ರೀನ್) ಮತ್ತು 1064 ನ್ಯಾನೋ ಮೀಟರ್ (ಇನ್ಫ್ರಾ- ರೆಡ್) ತರಂಗಾಂತರವು (Wave length) ಮೇಲ್ಮೈ ಚರ್ಮದ ವಿವಿಧ ಪದರದಲ್ಲಿರುವ ಕಪ್ಪು ಕಲೆಗಳನ್ನು ಹಾಗೂ ಹಚ್ಚೆ ಬಣ್ಣಗಳನ್ನು ನಿಖರವಾಗಿ ಗುರುತಿಸಿ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
-ಎಲ್ಲಾ ಮಾದರಿಯ ಟ್ಯಾಟೂ ಲೈನ್‌ಗಳು, ಶಾಶ್ವತ ಮೇಕಪ್ ಕಲೆಗಳು ಅಥವಾ ಚರ್ಮದಲ್ಲಿರುವ ಅತ್ಯಂತ ಸಣ್ಣ ಗಾಯದ ಅಥವಾ ಇನ್ಯಾವುದೇ ಕಲೆಗಳನ್ನೂ ಸಹ ನಿಖರವಾಗಿ ಗುರುತಿಸಿ ತೆಗೆಯಬಹುದಾಗಿರುತ್ತದೆ.
-ಈ ಯಂತ್ರದಲ್ಲಿರುವ ಇನ್ನೊಂದು ಅತ್ಯಾಧುನಿಕ ಫೀಚರ್ ಅಂದರೆ ರೋಗಿಯೊಬ್ಬರಿಗೆ ಒಮ್ಮೆ ನೀಡಿದ ಚಿಕಿತ್ಸೆಯ ಸಂಪೂರ್ಣ ಮಾಹಿತಿಗಳನ್ನು ಕೇವಲ ಒಂದು ಟಚ್ ಮೂಲಕ ಸೇವ್ ಮಾಡಿಟ್ಟುಕೊಳ್ಳಬಹುದು. ಈ ಮೂಲಕ ಮಿಸ್ ಟ್ರೀಟ್ಮೆಂಟ್ ನ ಅಪಾಯಗಳು ಇರುವುದಿಲ್ಲ.
-ಈ ಅತ್ಯಾಧುನಿಕ ಯಂತ್ರದಲ್ಲಿ ಅತ್ಯುನ್ನತ ಕಾರ್ಯಶೈಲಿ (ಪರ್‌ಫಾರ್ಮೆನ್ಸ್) ಮತ್ತು ಸುರಕ್ಷತಾ ಫೀಚರ್ (ಸೇಫ್ಟಿ ಫೀಚರ್)ಗಳಿವೆ.


ಚರ್ಮದ ಯಾವೆಲ್ಲಾ ಸಮಸ್ಯೆಗಳಿಗೆ ಪ್ರಯೋಜನಕಾರಿ:
ಚರ್ಮದಲ್ಲಿ ಕಾಣಿಸಿಕೊಳ್ಳುವ ಎಲ್ಲಾ ವಿಧದ ಪಿಗ್ಮೆಂಟ್ ಸಮಸ್ಯೆಗಳಿಗೆ ನಿಮಿಷದೊಳಗೆ ಸಂಪೂರ್ಣ ಪರಿಣಾಮಕಾರಿ ಚಿಕಿತ್ಸೆ.ಕರ್ವಾಂಗ ಸಮಸ್ಯೆಗಳಿಗೆ ಈ ತಂತ್ರಜ್ಞಾನದಿಂದ ಶಾಶ್ವತ ಪರಿಹಾರ, ಹುಟ್ಟಿನಿಂದಲೇ ದೇಹದಲ್ಲಿರುವ ಮಚ್ಚೆಗಳ ನಿವಾರಣೆಗಾಗಿ, ದೇಹ ಬಣ್ಣವನ್ನು ಶೈನಿಂಗ್ (ಬಿಳುಪು) ಮಾಡಲು, ಅರ್ಲಿ ಏಜಿಂಗ್ ಅಥವಾ ಯೌವ್ವನದಲ್ಲಿ ಚರ್ಮವನ್ನು ಕಾಡುವ ಮುದಿತನದ ನಿವಾರಣೆಗಾಗಿ, ಕಾರ್ಬನ್ ಫಿಲ್ಲಿಂಗ್ ಸೌಂದರ್ಯವರ್ಧನೆಗಾಗಿ

ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್‌ನಲ್ಲಿ ಲಭ್ಯವಿರುವ ಸೇವೆಗಳು
*ದೇಹದಲ್ಲಿನ ಕೂದಲಿನ ಶಾಶ್ವತ ನಿವಾರಣೆಗಾಗಿ ‘ಟ್ರಿಪಲ್ ವೇವ್ ಲೆಂಗ್ತ್ ಡಿಯೋಡ್ ಲೇಸರ್
*ದೇಹದಲ್ಲಿರುವ ಬಿಳಿ ಮಚ್ಚೆಗಳ (ಚರ್ಮ ಬಿಳುಪಾಗುವಿಕೆ), ಸೋರ ಮತ್ತು ಚರ್ಮದ ಉರಿಯೂತ ನಿವಾರಣೆಗಾಗಿ ೩೦೮ಎನ್.ಎಂ. ಎಕ್ಸೈಮರ್ ಲೇಸರ್.
*ರೇಡಿಯೋ ಫ್ರೀಕ್ವೇನ್ಸಿ ಎಬ್ಲೇಷನ್
*ಕೆಮಿಕಲ್ ಪೀಲಿಂಗ್
*ಕೂದಲು ಸಂಬಂಽ ಚಿಕಿತ್ಸೆಗಳು
*ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ (PP)ಥೆರಪಿ
*ಮೈಕ್ರೋ ನೀಡ್ಲಿಂಗ್ ಮತ್ತು ಮೆಸೋಥೆರಪಿ
*ಚರ್ಮದಲ್ಲಿ ಕಾಣಿಸಿಕೊಳ್ಳುವ ಬಿಳಿ ಮಚ್ಚೆಗಳ ನಿವಾರಣಾ ಶಸಚಿಕಿತ್ಸೆ
*ವಿವಿಧ ರೀತಿಯ ಚರ್ಮದ ಸಮಸ್ಯೆಗಳ ನಿವಾರಣಾ ಸಂಬಂಧಿತ ಚಿಕಿತ್ಸೆಗಳು

ಲೇಸರ್ ಚಿಕಿತ್ಸೆ ಅಪಾಯಕಾರಿಯಲ್ಲ. ಯಾಕೆಂದರೆ..?
ಲೇಸರ್ ಬೆಳಕು ಚರ್ಮದ ಮೂಲಕ ಹಾದುಹೋಗುವುದಿಲ್ಲ. ಅದರ ಶಕ್ತಿಯು ಚರ್ಮದ ಮೇಲಿನ ಪದರಗಳಿಗೆ ಸೀಮಿತವಾಗಿದೆ. ಅಲ್ಲದೆ, ಇದು ಚರ್ಮದ ಎಲ್ಲಾ ಜೀವಕೋಶಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಮ್ಮ ದೇಹದಲ್ಲಿನ ಪ್ರತಿಯೊಂದು ಜೀವಕೋಶವು ವಿಭಿನ್ನವಾಗಿದೆ ಮತ್ತು ನಮ್ಮ ಚರ್ಮದಲ್ಲೇ ವಿವಿಧ ರೀತಿಯ ಜೀವಕೋಶಗಳಿವೆ. ನಮ್ಮ ಚರ್ಮದ ಪ್ರತಿಯೊಂದು ಜೀವಕೋಶವು ಬೆಳಕಿನ ಒಂದು ನಿರ್ದಿಷ್ಟ ತರಂಗಾಂತರವನ್ನು (Wave length) ಹೀರಿಕೊಳ್ಳುತ್ತದೆ. ಈ ಲೇಸರ್ ತಂತ್ರಜ್ಞಾನವು ಎಷ್ಟು ಉತ್ಕೃಷ್ಟವಾಗಿದೆ ಎಂದರೆ ಅದು ಬೆಳಕಿನ ತರಂಗಾಂತರವನ್ನು ಹೀರಿಕೊಳ್ಳುವ ನಿರ್ದಿಷ್ಟ ಕೋಶಗಳನ್ನು ಗುರಿಯಾಗಿಸುತ್ತದೆ. ಲೇಸರ್, ಕ್ಷ-ಕಿರಣ ಮತ್ತು ವಿಕಿರಣ ಕಿರಣಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಆದ್ದರಿಂದ ಲೇಸರ್ ಚಿಕಿತ್ಸೆಯಲ್ಲಿ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳು ಅಥವಾ ಹಾನಿ ಇಲ್ಲ.
ಡಾ. ಸಚಿನ್ ಮನೋಹರ್ ಶೆಟ್ಟಿ, ಚರ್ಮರೋಗ ತಜ್ಞರು, ‘ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್’
ಹೆಚ್ಚಿನ ಮಾಹಿತಿಗಾಗಿ 8296296888 ಗೆ ಕರೆ ಅಥವಾ ವಾಟ್ಸ್ಯಾಪ್ ಮಾಡಿ

LEAVE A REPLY

Please enter your comment!
Please enter your name here