ಪುತ್ತೂರು: ಜೆಸಿಐ ನೆಲ್ಯಾಡಿ ವತಿಯಿಂದ LDMT ಕಾರ್ಯಕ್ರಮವು ಮಾ.3ರಂದು ಅನುಗ್ರಹ ನೆಲ್ಯಾಡಿಯಲ್ಲಿ ಜರುಗಿತು.
ವಲಯ 15 ಪ್ರಾಂತ್ಯ F ಇದರ ವಲಯ ಉಪಾಧ್ಯಕ್ಷ ಜೆಸಿ JFF ಸಂತೋಷ್ ಶೆಟ್ಟಿ LDMTಯ ಕುರಿತು ತರಬೇತಿ ನೀಡಿದರು. ಘಟಕದ ಪೂರ್ವಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಈ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ನೆಲ್ಯಾಡಿ ಜೆಸಿ ಯ ಪೂರ್ವಧ್ಯಕ್ಷ ಜೆಸಿ ಅಬ್ರಹಾಂ ವರ್ಗಿಸ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನೆಲ್ಯಾಡಿ ಜೆಸಿಯ ಘಟಕಾಧ್ಯಕ್ಷ ಜೆಸಿ ಡಾ. ಸುಧಾಕರ್ ಶೆಟ್ಟಿ ಸ್ವಾಗತಿಸಿದರು. ಜೆಸಿ ನವ್ಯ ಪ್ರಸಾದ್ ಅವರ ವಂದಿಸಿದರು.ಜೆಸಿ ಶ್ರೇಯಸ್ ಶೆಟ್ಟಿ ಜೆಸಿವಾಣಿ ವರದಿ ವಾಚಿಸಿದರು. ಜೆಸಿ ರವೀಂದ್ರ ಟಿ ಸಹಕರಿಸಿದರು.