ಪುತ್ತೂರು : ಭಾರತ್ ಸ್ಕೌಟ್ ಮತ್ತು ಗೈಡ್ಸ್ ದ. ಕ ಜಿಲ್ಲಾ ಸಂಸ್ಥೆ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಮಂಗಳೂರು ವತಿಯಿಂದ ಮಾ. 2 ರಂದು ತೃತೀಯ ಸೋಪಾನ ನಿಪುಣ ಪ್ರಶಸ್ತಿ ಪ್ರದಾನ ಸಮಾರಂಭ ಬಲ್ಮಠ ವೃತ್ತದ ಕಲೆಕ್ಟರ್ಸ್ ಗೇಟ್ ನಲ್ಲರುವ ಜಿಲ್ಲಾಧಿಕಾರಿ ನಿವಾಸದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ ಇ ಪುತ್ತೂರು ಇಲ್ಲಿನ ಗೈಡ್ಸ್ ವಿದ್ಯಾರ್ಥಿನಿ ಮಂದಿರಾ ಕಜೆ ಅವರು ಜಿಲ್ಲಾಧಿಕಾರಿ ದ. ಕ, ಜಿಲ್ಲೆಯ ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಮುಲ್ಲೈ ಮುಗಿಲನ್ ಇವರಿಂದ ತೃತೀಯ ಸೋಪಾನ ಪ್ರಶಸ್ತಿ ಯನ್ನು ಸ್ವೀಕರಿಸಿದರು.
ಈಕೆಗೆ ಅಂಬಿಕಾ ವಿದ್ಯಾಲಯದ ಸ್ಕೌಟ್ ಶಿಕ್ಷಕ ಸತೀಶ್ ಇರ್ದೆ ಹಾಗೂ ಗೈಡ್ಸ್ ಶಿಕ್ಷಕಿ ಚಂದ್ರಕಲಾ ಇವರು ಮಾರ್ಗದರ್ಶನ ನೀಡಿದ್ದರು.