ಬಡಗನ್ನೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತ್ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಅದ್ದೂರಿಯಲ್ಲಿ ವೈಭವದಿಂದ ನಡೆದು ಮಾ.5 ರಂದು ಸಂಪನ್ನಗೊಂಡಿತು.
ಮಾ.5 ರಂದು ಬೆಳಗಿನ ಶುಭ ಮುಹೂರ್ತದಲ್ಲಿ ಕ್ಷೇತ್ರದ ತಂತ್ರಿ ಶಿವಾನಂದ ಶಾಂತಿ ಮೂಡುಬಿದಿರೆ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದು ಕಟ್ಟುಕಟ್ಟಳೆ ಪ್ರಕಾರ ಏರಿದ್ದ ಕೊಡಿಮರದಿಂದ ಕೊಡಿ ಇಳಿಸುವ ಮೂಲಕ ಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಅಂತಿಮ ತೆರೆ ಎಳೆಯುವ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ., ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮೊಕ್ತೇಸರ ಶ್ರೀಧರ ಪೂಜಾರಿ, ಕೋಶಾಧಿಕಾರಿ ಮೋಹನದಾಸ್ ಬಂಗೇರ, ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ಶಶಿಧರ ಕಿನ್ನಿಮಜಲು, ರಾಜೇಂದ್ರ ಚಿಲಿಂಬಿ, ನಾರಾಯಣ ಮಚ್ಚಿನ, ಜಾತ್ರೋತ್ಸವ ಉಡುಪಿ ಜಿಲ್ಲಾ ಸಂಚಾಲಕ ಪ್ರಮಲ್ ಕುಮಾರ್ ಕಾರ್ಕಳ, ರಘುನಾಥ್ ಮಾಬೆನ್ ಉಡುಪಿ, ದ.ಕ ಜಿಲ್ಲಾ ಸಂಚಾಲಕ ರವಿ ಕಕ್ಕೆಪದವು, ಜನಾರ್ಧನ ಪೂಜಾರಿ ಪಡುಮಲೆ, ಗೋವಾ ಸಂಚಾಲಕ ಚಂದ್ರಹಾಸ ಅಮೀನ್, ಗಲ್ಫ್ ರಾಷ್ಟ್ರ ಸಂಚಾಲಕ ಸತೀಶ್ ಪೂಜಾರಿ ಬೆಳಪು ದುಬೈ, ಮಹಿಳಾ ಸಮಿತಿ ಸಂಚಾಲಕ ಸುಜೀತ ವಿ ಬಂಗೇರ ಬೆಳ್ತಂಗಡಿ, ವಿದ್ಯಾ ರಾಕೇಶ್ ಮಂಗಳೂರು, ಬೆಳ್ತಂಗಡಿ ಸಂಚಾಲಕ ನಿತ್ಯಾನಂದ ನಾವರ, ಮಂಗಳೂರು ಸಂಚಾಲಕರಾದ ಹರೀಶ್ ಕೆ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.