ಕಾಣಿಯೂರು: ಕಾಣಿಯೂರು ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ರೋಹಿಣಿ ಅವರು ತಾಯಿ, ಹಾಗೂ ಮಹಿಳೆಯ ಸ್ಥಾನಮಾನ, ಸಮಾಜದಲ್ಲಿ ಮಹಿಳೆಯ ಜವಾಬ್ದಾರಿ, ಅನುಭವಿಸುತ್ತಿರುವ ನೋವುಗಳ ಕುರಿತು ಮಾತನಾಡಿದರು. ಕೊರೋನ ಎನ್ನುವ ಮಹಾಮಾರಿಯ ಸಂದರ್ಭದಲ್ಲಿ ವೀರ ಸೇನಾನಿಗಳ ರೀತಿಯಲ್ಲಿ ಸಮಾಜ ಸೇವೆ ಮಾಡಿದ ಆಶಾಕಾರ್ಯಕರ್ತೆಯರಾದ ಕುಸುಮಾ, ತಾರಾವತಿ, ಕುಸುಮಾ, ಪಂಚಾಯತ್ ಗ್ರಂಥಪಾಲಾಕಿ ಪಾರ್ವತಿ, ಉದ್ಯೋಗ ಖಾತರಿ ಯೋಜನೆಯ ಉದ್ಯೋಗಿ ಸುಪ್ರಿಯಾ ಅವರನ್ನು ಗೌರವಿಸಲಾಯಿತು. ಶಾಲಾ ಶಿಕ್ಷಕಿಯರಾದ ದೇವಕಿ ಪಿ, ಸುಜಯ, ಭಾರತಿ, ಶೇರಿನಾ ಬೇಗಂ, ವೀಕ್ಷಿತಾ, ದಿವ್ಯ, ಚೈತನ್ಯ ಮತ್ತು ನಯನ ಪ್ರಭು ರವರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಶಿಕ್ಷಕಿಯರನ್ನು ಹೂ ಮತ್ತು ಶಾಲಿನೊಂದಿಗೆ ಗೌರವಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಬಾಲಕೃಷ್ಣ ಕೆ ಕಾರ್ಯಕ್ರಮ ನಿರೂಪಿಸಿದರು.