ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿ ಇದರ ೩೨ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವವು ಮಾ.7-8ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಕೆಮ್ಮಿಂಜೆ ಉದಯ ಕುಮಾರ್ ತಂತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಿ, ಚಾಲನೆ ನೀಡಿದರು. ಮಾ.೭ ರಂದು ರಾತ್ರಿ ಭಜನಾ ಕಾರ್ಯಕ್ರಮ ಜರಗಿದ್ದು, ಮಾ.೮ ರಂದು ಬೆಳಿಗ್ಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗ ಮತ್ತು ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ, ಸಾಯಂಕಾಲ ನಂದಿಕೇಶ್ವರ ಭಜನಾ ಮಂದಿರದ ಮಕ್ಕಳಿಂದ ಕುಣಿತ ಭಜನೆ, ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, ರಾತ್ರಿ ಶ್ರೀ ರಕ್ತೇಶ್ವರಿ, ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ನಡಾವಳಿ ಜರಗಿತು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಕೆಮ್ಮಿಂಜೆ ಸುಜಯಕೃಷ್ಣ ತಂತ್ರಿಗಳು, ನವೀನ್ಚಂದ್ರ ನಾೖಕ್, ಅಧ್ಯಕ್ಷ ವರುಣ್ ಕುಮಾರ್ ಜೈನ್, ಉಪಾಧ್ಯಕ್ಷರಾದ ಮನೋಜ್ ಕುಮಾರ್ ಟಿ.ವಿ ಬೆದ್ರಾಳ, ಪದ್ಮನಾಭ ಪೂಜಾರಿ ಕೂಡಮರ, ಕೃಷ್ಣಪ್ಪ ಗೌಡ ಕಂಚಲಗುರಿ, ಗೌರವ ಸಲಹೆಗಾರರಾದ ರಾಜ್ಕುಮಾರ್ ರೈ ಬೆದ್ರಾಳ, ಚಂದ್ರ ಕೂಡಮರ, ಮೋಹನ್ ನಾಯಕ್ ಬೆದ್ರಾಳ, ಬಾಬು ನಾಯ್ಕ ಕೊರಜಿಮಜಲು, ಸುಧಾಕರ ಶೆಟ್ಟಿ ಬೆದ್ರಾಳ, ಉಮೇಶ್ ಆಚಾರ್ಯ, ಶರತ್ಚಂದ್ರ ನಾಕ್ ಬೆದ್ರಾಳ, ಗಂಗಾಧರ ಗೌಡ, ಅನೂಪ್ ಟಿ.ವಿ ಬೆದ್ರಾಳ, ಕೊರಗಪ್ಪ ಕುಲಾಲ್, ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ, ಜೊತೆ ಕಾರ್ಯದರ್ಶಿ ವಸಂತ್ ನಾಯ್ಕ ನೆಕ್ಕರೆ, ಹರೀಶ್ ಕುಲಾಲ್ ಬೆದ್ರಾಳ, ನಾಗೇಶ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಹಾಗೂ ಸದಸ್ಯರು ಮತ್ತು ಊರ ನಾಗರಿಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.