ಪುತ್ತೂರು: ಇನ್ ಸ್ಟಾಗ್ರಾಂನಲ್ಲಿ ಬಂದ ಜಾಹೀರಾತಿಗೆ ಮಾರು ಹೋಗಿ ಟ್ರೇಡಿಂಗ್ ಇನ್ವೆಸ್ಟಮೆಂಟ್ ಮಾಡಲು ಹೋಗಿ ಬನ್ನೂರು ನಿವಾಸಿ ಯುವತಿಯೋರ್ವರು 4.90 ಲಕ್ಷ ರೂ.ಕಳೆದುಕೊಂಡಿರುವ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ Work from home ಮಾಡುತ್ತಿದ್ದಾರೆ. 01-03-2025 ರಂದು Instagram Reels ನಲ್ಲಿ Investment ಮಾಡಿದರೆ ಲಾಭಾಂಶ ಸಿಗುವ ಬಗ್ಗೆ ಬಂದ ಜಾಹೀರಾತು ನೋಡಿ, Instagram ಖಾತೆಯಿಂದ Investment TASK ಮಾಡಲು UPI ID ಗೆ ರೂ.10,000 ಕಳುಹಿಸಲು ತಿಳಿಸಿದ್ದಕ್ಕೆ ಫೋನ್ ಪೇ ಮೂಲಕ ಕಳುಹಿಸಿರುತ್ತಾರೆ. Investment Trading ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನೀಡಿದ್ದ ಮೊಬೈಲ್ ನಂಬ್ರಕ್ಕೆ ವಾಟ್ಸಪ್ ಮುಖಾಂತರ ಮೆಸೇಜ್ ಮಾಡಿದ್ದು, ಸದ್ರಿಯವರು Trading Investment ಬಗ್ಗೆ ರೂ.10,000 ಪಾಕಿದರೆ ರೂ.2,00,000 ಗಳಿಸಬಹುದು ಎಂದು ತಿಳಿಸಿದ್ದಕ್ಕೆ ಹಣ ಹಾಕಿದ್ದಾರೆ. ನಂತರ ಸದ್ರಿ ಹಣ ವಿದ್ ಡ್ರಾ ಮಾಡಲು Trading Wallet Activation Deposit, GST Deposit ಹಾಗೂ ಇನ್ನಿತರ ಚಾರ್ಜ್ಗಳಿಗೆ ಹಣ ಹಾಕಲು ತಿಳಿಸಿದ್ದಕ್ಕೆ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ 4,90,997 ರೂ.ವರ್ಗಾವಣೆ ಮಾಡಿದ್ದು, ನಂತರ ಯುವತಿಯ ಬ್ಯಾಂಕ್ ಖಾತೆಗೆ ಯಾವುದೇ ಹಣ ವಾಪಾಸ್ ಹಾಕದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಂಗಳೂರು ಸಿಐಎನ್ ಅಪರಾಧ ಪೊಲೀಸು ಠಾಣೆಯಲ್ಲಿ ಆ.13/2025 ಕಲಂ: 66(ಆ) IT Act ಮತ್ತು ಕಲಂ: 318(2), 318(4) BNS Act ರಂತೆ ಪ್ರಕರಣ ದಾಖಲಾಗಿದೆ.