ಮಾ.12,13 : ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ- ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

0

ನಿಡ್ಪಳ್ಳಿ : ಕರ್ನಪ್ಪಾಡಿ ಪವಿತ್ರ ನೆಲದಲ್ಲಿ ಸುಮಾರು 5 ಶತಮಾನಗಳ ಹಿಂದೆ ಮೂಡಿಬಂದ ಮಾತೆ ದೇಯಿ ಬೈದೆತಿಯ ಅವಳಿ ಪುತ್ರರತ್ನರಾದ ಕೋಟಿ ಚೆನ್ನಯರು ನಡೆದಾಡಿದ ಕರ್ನಪ್ಪಾಡಿ ಗರಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ಕರ್ನಪ್ಪಾಡಿ ನಿಡ್ಪಳ್ಳಿ ಇದರ ವತಿಯಿಂದ  ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ.12 ಮತ್ತು 13 ರಂದು ನಡೆಯಲಿದೆ.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಶಿವಪ್ಪ ಪೂಜಾರಿ ನುಳಿಯಾಲು ಇವರ ಅಧ್ಯಕ್ಷತೆಯಲ್ಲಿ ಕರ್ನಪ್ಪಾಡಿ ಮನೆಯವರು ಹಾಗೂ ಗರಡಿ ಸೇವಾ ಸಮಿತಿ ವತಿಯಿಂದ ನಡೆಯುತ್ತಿದ್ದು ಊರ ಪರವೂರ ಸರ್ವ ಧರ್ಮದ ಭಕ್ತಾದಿಗಳು ಭಾಗವಹಿಸಿ ಪರಸ್ಪರ ಸಹಕಾರ ಮನೋಭಾವದಿಂದ ನಡೆಯುತ್ತಿದ್ದು  ಗ್ರಾಮದ ಜಾತ್ರೋತ್ಸವ ಎಂದೇ ಪ್ರಸಿದ್ಧಿ ಹೊಂದಿದೆ.

ಕಾರ್ಯಕ್ರಮಗಳು;
ಮಾ.12 ರಂದು ಬೆಳಗ್ಗೆ ಗಂಟೆ 10 ರಿಂದ ಗಣಪತಿ ಹೋಮ, ಬ್ರಹ್ಮರ ತಂಬಿಲ ಮತ್ತು ನಾಗ ತಂಬಿಲ ನಡೆಯಲಿದೆ. ಸಂಜೆ ಗಂ 6 ರಿಂದ ಭಜನಾ ಕಾರ್ಯಕ್ರಮ,ರಾತ್ರಿ ಗಂಟೆ 7 ಕ್ಕೆ ಭಂಡಾರ ತೆಗೆದು ಕೊಡಮಂತಾಯ ದೈವದ ನೇಮ ನಡೆಯಲಿರುವುದು.

ಮಾ.13 ರಂದು ಸಂಜೆ ಗಂಟೆ 5 ಕ್ಕೆ ಹೋಮ, ಗಂಟೆ 6 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ.‌ರಾತ್ರಿ ಗಂಟೆ 8 ಕ್ಕೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ  10 ಕ್ಕೆ ಬೈದರುಗಳ ಗರಡಿ ಇಳಿಯುವುದು.ರಾತ್ರಿ ಗಂಟೆ 2 ಕ್ಕೆ ಕಿನ್ನಿದಾರು ಗರಡಿ ಇಳಿಯುವುದು. ಪ್ರಾತಃಕಾಲ ಗಂಟೆ 4 ಕ್ಕೆ ದರ್ಶನ ಪಾತ್ರಿಗಳ ಸೇಟ್, ಬೈದರುಗಳ ಸೇಟ್. ಮಾ 14 ರಂದು ಬೆಳಗ್ಗೆ ಗಂಟೆ 6 ಕ್ಕೆ ಪ್ರಸಾದ ವಿತರಣೆ ನಡೆಯಲಿದೆ

ಭಕ್ತಾಭಿಮಾನಿಗಳು ಈ ಶುಭ ಕಾರ್ಯದಲ್ಲಿ ಭಾಗವಹಿಸಿ, ಗಂಧಪ್ರಸಾದ  ಸ್ವೀಕರಿಸಿ, ಶ್ರೀ ದೈವ-ದೇವರ ಕೃಪೆಗೆ ಪಾತ್ರರಾಗುವಂತೆ  ಸೇವಾ ಸಮಿತಿ ಅಧ್ಯಕ್ಷ ಎನ್.ಶಿವಪ್ಪ ಪೂಜಾರಿ ನುಳಿಯಾಲು ಮತ್ತು ಸಮಿತಿ ಸದಸ್ಯರು ಹಾಗೂ ಕರ್ನಪ್ಪಾಡಿ ಮನೆಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here