ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ತೆಂಕಪ್ಪಾಡಿ ಕೂಟೇಲು ಮನೆತನದ ನಿವಾಸಿ ಪಾರ್ವತಿ ರಾಮಣ್ಣ ಗೌಡ (76ವ) ಮಾ.13 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪುತ್ರರಾದ ನಾಗರಾಜ, ನವೀನ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಿಇಓ ಸತೀಶ್, ಹರೀಶ್, ಪುತ್ರಿಯರಾದ ರೇಣುಕಾ, ಸವಿತಾ, ಅಳಿಯಂದಿರಾದ ಪ್ರವೀಣ್ ಕುಮಾರ್, ಪ್ರವೀಣ್ ಮತ್ತು ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.