ಬಡಗನ್ನೂರು: ಅರಿಯಡ್ಕ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಮತ್ತು ಸಹಪರಿವಾರ ದೈವಗಳ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ವಾಸುದೇವ ತಂತ್ರಿವರ್ಯರ ನೇತೃತ್ವದಲ್ಲಿ ಮಾ.16ರಂದು ಸಂಪನ್ನಗೊಂಡಿತ್ತು.
ಭಾನುವಾರ ಬೆಳಿಗ್ಗೆ ಬ್ರಹ್ಮಕಲಶೋತ್ಸವ, ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 10-56ರಿಂದ 12-03ರ ಮಧ್ಯದಲ್ಲಿ ಒದಗುವ ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ಅಮ್ಮನವರ ಹಾಗೂ ಸಹಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೇವಿ ಭಜನಾ ತಂಡ ಕಲ್ಲಡ್ಕ ಇವರಿಂದ ‘ಭಜನಾ ಸೇವೆ, ಶ್ರೀ ಅಮ್ಮನವರ ಭಂಡಾರ ತೆಗೆದು ಮಾರಿಕಳಕ್ಕೆ ತರುವುದು,ಅನ್ನಸಂತರ್ಪಣೆ ನಡೆಯಿತು.
ಗೌರವಾಧ್ಯಕ್ಷರಾದ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕಿಶೋರ್ ಶೆಟ್ಟಿ ಅರಿಯಡ್ಕ, ಗೌರವ ಸಲಹೆಗಾರ ಶ್ರೀರಾಮ್ ಪಕ್ಕಳ ಅರಿಯಡ್ಕ, ತಿಮ್ಮಪ್ಪ ರೈ ಪಾಪೆಮಜಲು, ನಾರಾಯಣ ರೈ ಮಡ್ಡಂಗಳ, ಅಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಅರಿಯಡ್ಕ, ಕೋಶಾಧಿಕಾರಿ ಶರತ್ ಕುಮಾರ್, ಜೊತೆ ಕಾರ್ಯದರ್ಶಿ ಗಿರೀಶ್ ಜಾರತ್ತಾರು, ಪ್ರಧಾನ ಅರ್ಚಕ ನಾರಾಯಣ ಜಾರತ್ತಾರು, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕ, ಕಿಶೋರ್ ಶೆಟ್ಟಿ, ಸುರೇಶ್ ನಾಯ್ಕ ಸಂದೀಪ್ ಅರಿಯಡ್ಕ, ತಿಲಕ್ ರೈ ಕುತ್ಯಾಡಿ, ಬಾಬು ರೈ ಪಯಂದೂರು, ನಾರಾಯಣ ನಾಯ್ಕ್, ಮೋಹನ್ ದಾಸ್ ರೈ ಕುಂಬ್ರ, ರಂಜನ್ ರೈ, ಗಿರೀಶ್, ನಾರಾಯಣ, ಅಮೈ ಚಂದ್ರಹಾಸ್ ಶೆಟ್ಟಿ, ಸತೀಶ್ ಚಂದ್ರ ರೈ ಅರಿಯಡ್ಕ, ಚಂದ್ರಶೇಖರ್ ರೈ, ಶಾರದಾ ಸಿ ರೈ, ಚಿರಾಗ್ ರೈ ಬೆದ್ರಮಾರು, ವಿವೇಕ್ ಸದಾಶಿವ ಮಣಿಯಾಣಿ, ಪೂವಪ್ಪ ರೈ ಪನಕ್ಕಳ, ಅಂಗಪ್ಪ ಗೌಡ ಎರ್ಕ, ರಾಘವ ಪೂಜಾರಿ ಮಡ್ಯಂಗಳ, ಗುರುವಪ್ಪ ಹಾರತ್ತಾರು, ವಿಶ್ವನಾಥ ರೈ ಮಧು ನಿಲಯ, ಕೂಂತರ ಹಾರತ್ತಾರು, ನಾರಾಯಣ ಗೌಡ ಪಟಕಾನ, ದಿನೇಶ್ ಕುಮಾರ್ ಮಡ್ಯಂಗಳ, ಅಶೋಕ್ ಬೊಳ್ಳಾಡಿ, ಸುಂದರ ಎಸ್. ಶೇಖಮಲೆ, ಶಿವಪ್ಪ ಎಸ್. ಶೇಖಮಲೆ, ಹರಿಪ್ರಸಾದ್ ಶೇಖಮಲೆ, ಉಮೇಶ್ ಗೌಡ ಸುರುಳಿಮೂಳೆ, ವಿಶ್ವನಾಥ ರೈ ಎರಮೆ, ಗಣೇಶ್ ರೈ ಪಾಲ್ಗುಣಿ, ಪ್ರಮೋದ್ ರೈ ಪಣಿಕ್ಕಳ, ಸತೀಶ್ ಕರ್ಕೇರ ಮಡ್ಯಂಗಳ, ಗಣೇಶ್ ಶೇಖಮಲೆ, ಉಮೇಶ್ ಯು.ಎಸ್. ಶೇಖಮಲೆ, ಗಣೇಶ್ ರೈ ಹಾರತ್ತಾರು, ಸಚಿನ್ ಮಡ್ಯಂಗಳ ಸದಾಶಿವ ರೈ ಎರಮೆ, ಲೋಕೇಶ್ ರೈ ಪಯಂದೂರು, ಸಾವಿರಾರು ಭಕ್ತರು ಪಾಲ್ಗೊಂಡರು.ಉಪಾಧ್ಯಕ್ಷ ಹರೀಶ್ ರೈ ಜಾರತ್ತಾರು ಸ್ವಾಗತಿಸಿದರು ವಂದಿಸಿದರು.

ಇಂದು ಮಾ.17ರಂದು ಬೆಳಿಗ್ಗೆ ಗಂಟೆ 4-30ಕ್ಕೆ ಅಮ್ಮನವರನ್ನು ಗುಂಡದಲ್ಲಿ ಪ್ರತಿಷ್ಠಾಪಿಸುವುದು, ಅಮ್ಮನವರ ದೂತರಿಗೆ ಬಲಿ ನೀಡುವುದು,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ,ಸಂಜೆ ಶ್ರೀ ಅಮ್ಮನವರ ಭಂಡಾರವನ್ನು ಗುಡಿಗೆ ಕೊಂಡೊಯ್ದು ಪ್ರತಿಷ್ಠಾಪಿಸುವುದು.