ಪಾಣಾಜೆ : ಇಲ್ಲಿನ ಪುಳಿತ್ತಡಿ ಶಟ್ಲ್ ಬ್ಯಾಡ್ಮಿಂಟನ್ ಟೀಮ್ ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಮಾ. 15 ರಂದು ಆರ್ಲಪದವು ಶ್ರೀ ಪೂಮಾಣಿ, ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದ ವಠಾರದಲ್ಲಿ ಜರಗಿತು.
ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಉದ್ಘಾಟಿಸಿ ಶುಭ ಹಾರೈಸಿದರು. ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು ಸಭಾಧ್ಯಕ್ಷತೆ ವಹಿಸಿದ್ದರು. ಕೆಎಂಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಉಮೇಶ್ ಬಲ್ಯಾಯ ಕೊಂದಲಡ್ಕ, ಬಾಬು ರೈ ಕೋಟೆ, ಸದಾನಂದ ಭರಣ್ಯ, ಸದಾಶಿವ ರೈ ಸೂರಂಬೈಲು, ಹರೀಶ್ ಕಡಮ್ಮಾಜೆ, ದಯಾನಂದ ತೂಂಬಡ್ಕ, ಪ್ರೇಮ್‌ರಾಜ್ ಆರ್ಲಪದವು, ಸುಜಿತ್ ಕಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಶ್ರೀಪ್ರಸಾದ್ ಪಾಣಾಜೆ ಸ್ವಾಗತಿಸಿದರು. ಪಂದ್ಯಾಕೂಟದ ಪ್ರಧಾನ ಆಯೋಜಕ ಕೀರ್ತಿರಾಜ್ ಉಡ್ಡಂಗಳ ಹಾಗೂ ಪುಳಿತ್ತಡಿ ಶಟ್ಲ್ ಬ್ಯಾಡ್ಮಿಂಟನ್ ಟೀಮ್ ಸದಸ್ಯರು ಉಪಸ್ಥಿತರಿದ್ದರು.

ಪಂದ್ಯಾಟ ಫಲಿತಾಂಶ
ಪ್ರಥಮ ಬಹುಮಾನವಾಗಿ ರೂ. 5025 ಮತ್ತು ಟ್ರೋಫಿಯನ್ನು ಕೊಹ್ಲಿ ಫೊಲೋವರ್ಸ್ ಆರ್ಲಪದವು, ದ್ವಿತೀಯ ರೂ. 3025 ಮತ್ತು ಟ್ರೋಫಿಯನ್ನು ಷಣ್ಮುಖ ಆರ್ಲಪದವು, ತೃತೀಯ ರೂ. 1025 ಮತ್ತು ಟ್ರೋಫಿಯನ್ನು ವಿಖ್ಯಾತ್ ಮತ್ತು ಕೌಶಿಕ್ ಹಾಗೂ ಚತುರ್ಥ ರೂ. 1025 ಮತ್ತು ಟ್ರೋಫಿಯನ್ನು ನ್ಯೂಟನ್ ಮತ್ತು ನಿಕೇತನ್ ಪಡೆದುಕೊಂಡರು.