ನೆಲ್ಯಾಡಿ: ’ಆಮಂತ್ರಣ’ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕಡಬ ತಾಲೂಕು ಅಧ್ಯಕ್ಷರಾಗಿ ನೆಲ್ಯಾಡಿ ಸಂತಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ.ಕುಂಡಡ್ಕ ನೇಮಕಗೊಂಡದ್ದಾರೆ.
ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ರಾಜ್ಯ ಸದಸ್ಯರು ಹಾಗೂ ಪ್ರಮುಖರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ರಾಜ್ಯ ಸದಸ್ಯರಾದ ಹೆಜ್ಜೆ ನಯನಾಡು, ಅಶಾ ಅಡೂರು, ಉಮಾಸುನಿಲ್ ಹಾಸನ, ದ.ಕ.ಜಿಲ್ಲಾಧ್ಯಕ್ಷ ನಿರೀಕ್ಷಿತ ಮಂಗಳೂರು, ಉಪಾಧ್ಯಕ್ಷ ವಿಂದ್ಯಾ ಎಸ್.ರೈ ಕಡೆಶೀವಾಲಯ, ನಿರ್ದೇಶಕರಾದ ಚೇತನ್ ಕುಮಾರ್ ಅಮೈ, ಬಂಟ್ವಾಳ ತಾಲೂಕು ಅಧ್ಯಕ್ಷ ರಶ್ಮಿತಾ ಎಸ್. ಯೋಗಿವೆಟ್ಟು, ಬೆಳ್ತಂಗಡಿ ತಾಲೂಕು ಅಧ್ಯಕ್ಷ ವಿದ್ಯಾಶ್ರೀ ಅಡೂರು ಉಪಸ್ಥಿತರಿದ್ದರು. ವಿಶ್ವನಾಥ ಶೆಟ್ಟಿಯವರು ಉಪನ್ಯಾಸ ವೃತ್ತಿಯೊಂದಿಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.