ಪುತ್ತೂರು: ಶಿವಮೊಗ್ಗದ ಜೆಎನ್‌ಎನ್‌ಸಿಇಯಲ್ಲಿ ಮಾರ್ಚ್ 15ರಿಂದ 18 ರವರೆಗೆ ನಡೆದ ವಿಟಿಯು 26ನೇ ಅಂತರ-ಕಾಲೇಜು ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗ 20 ಕಿ.ಮೀ. ರೇಸ್‌ವಾಕ್ ಸ್ಪರ್ಧೆಯಲ್ಲಿ ಮಂಗಳೂರು ಅಡ್ಯಾರು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ, ಪುತ್ತೂರಿನ ಉರ್ಲಾಂಡಿ ನಿವಾಸಿ ಪ್ರವೀತ್ ಅವರು ಬೆಳ್ಳಿಪದಕ ಪಡೆದಿದ್ದಾರೆ.
ಸಹ್ಯಾದ್ರಿ ಅಥ್ಲೆಟಿಕ್ ತಂಡವು 104 ಅಂಕಗಳೊಂದಿಗೆ 8ನೇ ಬಾರಿಗೆ ಹೊರಹೊಮ್ಮಿದ ಒಟ್ಟಾರೆ ಚಾಂಪಿಯನ್‌ಗಳನ್ನು ಗೆದ್ದುಕೊಂಡಿತು. ಉರ್ಲಾಂಡಿ ನಿವಾಸಿಯಾಗಿರುವ ಪ್ರವೀತ್ ದಿ. ರಾಮಕೃಷ್ಣ (ಕಿರಣ್ ಟೈಲರ್)ರವರ ಮೊಮ್ಮಗ.