ಬೆಟ್ಟಂಪಾಡಿ ಕಾಲೇಜಿನಲ್ಲಿ ಎಚ್‌ಐವಿ ಜಾಗೃತಿ, ರಕ್ತದಾನ ಮಹತ್ವ ತರಬೇತಿ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಹಾಗೂ ರೆಡ್ ರಿಬ್ಬನ್ ಕ್ಲಬ್ ಇದರ ಸಹಯೋಗದೊಂದಿಗೆ ಎಚ್ಐವಿ /ಏಡ್ಸ್ ಹಾಗೂ ರಕ್ತದಾನದ ಮಹತ್ವದ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದ ಮುಖ್ಯ ಅತಿಥಿ ತಾರನಾಥ ಡಿ, ಕೌನ್ಸಿಲರ್ ,ಗೌರ್ನಮೆಂಟ್ ಹಾಸ್ಪಿಟಲ್ ಪುತ್ತೂರು ಇವರು ಎಚ್ಐವಿ /ಏಡ್ಸ್ ರೋಗಲಕ್ಷಣಗಳು ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ರಕ್ತದಾನದ ಮಹತ್ವವನ್ನು ತಿಳಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.


ಕಾರ್ಯಕ್ರಮದ ನಂತರ ಕಾಲೇಜಿನಿಂದ ರೆಂಜ ಪೇಟೆಯವರೆಗೆ ಹೆಚ್ಐವಿ /ಏಡ್ಸ್ ಹಾಗೂ ರಕ್ತದಾನದ ಮಹತ್ವದ ಬಗ್ಗೆ ಘೋಷವಾಕ್ಯಗಳ ಜೊತೆ, ಸಾಮೂಹಿಕ ಜಾಗೃತಿಯನ್ನು ಮೂಡಿಸಲು ಕಿರು ಬೀದಿ ನಾಟಕವನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಯೋಜನಾಧಿಕಾರಿಗಳಾದ ಡಾ. ಯೋಗೀಶ್ ಎಲ್ ಎನ್, ಡಾ ಲಾಯ್ಡ್ ವಿಕ್ಕಿ ಡಿಸೋಜಾ, ಘಟಕ ನಾಯಕರಾದ ಮನಿಶ್, ಮಮತಾ ಕೆ. ಸುಚಿತ ಹಾಗೂ ಸ್ವಯಂಸೇವಕರು ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕಿ ಮಮತಾ ಸ್ವಾಗತಿಸಿ, ವಂದಿಸಿದರು. ಸ್ವಯಂಸೇವಕಿ ಅಶ್ವಿನಿ ನಿರೂಪಿಸಿದರು.

LEAVE A REPLY

Please enter your comment!
Please enter your name here