ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್‌ ರೈ, ಸುಂದರ್‌ ರೈರವರಿಗೆ ಸನ್ಮಾನ – ಕೃಷಿ ವಿಚಾರ ಸಂವಾದ

0

ಪುತ್ತೂರು: 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೋಹನ ರೈ ನರಿಮೊಗರು ಮತ್ತು ಚಿತ್ರನಟ ಸುಂದರ ರೈ ಮಂದಾರರವರಿಗೆ ಹೃದಯಸ್ಪರ್ಶಿ ಸನ್ಮಾನ ಸಮಾರಂಭ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನ.9ರಂದು ನಡೆಯಿತು.


ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ. ಜಯರಾಮ ರೈ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕರೂ, ಚಿನ್ನದ ಪದಕ ವಿಜೇತ ಕೃಷಿಕರೂ ಆಗಿರುವ ಕಡಮಜಲು ಸುಭಾಸ್‌ ರೈಯವರು ಸ್ವಾಗತಿಸಿ, ಕಾರ್ಯಕ್ರಮದ ಕುರಿತಾಗಿ ಪ್ರಸ್ತಾವನೆಗೈದರು. ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವುದು ನಮ್ಮ ಸಂತೋಷ ದ್ವಿಗುಣಗೊಳಿಸುತ್ತದೆ.ಮತ್ತು ಕೃಷಿ ಕ್ಷೇತ್ರದ ಮಣ್ಣಿನ ಮೌಲ್ಯವರ್ಧನೆಯಾಗುತ್ತದೆʼ ಎಂದರು.  

ಸಮಾಜ ಸೇವೆ, ಸಹಕಾರಿ ಕ್ಷೇತ್ರ ಮೂಲಕ ಮೋಹನ್‌ ರೈ ಗುರುತಿಸಿಕೊಂಡಿರುವುದಕ್ಕೆ ಪ್ರಶಸ್ತಿ ಸಂದಿದೆ ಎಂದರು.
ನಿವೃತ್ತ ಪ್ರಾಂಶುಪಾಲ, ಸಾಹಿತಿ ಬಿ.ವಿ. ಸೂರ್ಯನಾರಾಯಣ ಎಲಿಯರವರು ಶುಭಾಶಂಸನೆಗೈದು ʻರಂಗಕಲೆ ಮತ್ತು ಸಿನಿಮಾರಂಗದಲ್ಲಿ ಜನರ ಮೆಚ್ಚುಗೆ ಗಳಿಸಿ ʻರಂಗ್‌ದ ರಾಜೆʼ ʻತೆಲಿಕೆದ ಬಿರ್ಸೆʼ ಪ್ರಶಂಸೆಗೆ ಪಾತ್ರರಾಗಿರುವ ಸುಂದರ ರೈ ಮಂದಾರರವರ ಜೀವನ ಅದ್ಭುತ ಯಶಸ್ಸಿ ಕಾಣಲೆಂದುʼ ಶುಭ ಹಾರೈಸಿದರು.
ಪ್ರಶಸ್ತಿ ಪುರಸ್ಕೃತರನ್ನು ಅಕ್ಷಯ ಗ್ರೂಪ್‌ ಸಂಸ್ಥೆ ಮ್ಹಾಲಕ ಜಯಂತ ನಡುಬೈಲು ದಂಪತಿ ಸನ್ಮಾನಿಸಿ ಗೌರವಿಸಿದರು.


ಜಯಂತ ನಡುಬೈಲು ದಾಂಪತ್ಯ ರಜತ ಸಂಭ್ರಮ
ಇದೇ ವೇಳೆ ಜಯಂತ ನಡುಬೈಲು ದಂಪತಿಯ ದಾಂಪತ್ಯ ಜೀವನದ ರಜತ ಸಂಭ್ರಮವನ್ನು ಇಲ್ಲಿ ಆಚರಿಸಲಾಯಿತು. ನಡುಬೈಲು ದಂಪತಿ ಹೂ ಹಾರವನ್ನು ಬದಲಾಯಿಸಿ ವೈವಾಹಿಕ ಸಂಭ್ರಮ ನೆನಪಿಸಿಕೊಂಡರು. ಕಡಮಜಲು ಸುಭಾಸ್‌ ರೈ ಮತ್ತು ಪ್ರೀತಿ ಎಸ್.‌ ರೈ ದಂಪತಿ ವಧು ವರರಿಗೆ ಹೂ ಹಾರ ನೀಡಿ ಆಶಿರ್ವದಿಸಿದರು.


ಕೃಷಿ ಸಂವಾದ
ಇದೇ ಕಾರ್ಯಕ್ರಮದಲ್ಲಿ ವಿಯೆಟ್ನಾಂ, ಮಲೇಷ್ಯಾ ಕೃಷಿ ಅಧ್ಯಯನ ಪ್ರವಾಸ ಮಾಡಿ ಬಂದ ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್‌ ರೈ ಕೋರಂಗರವರು ವಿಯೆಟ್ನಾಂ ಕೃಷಿ ಪದ್ದತಿ, ಅಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಧ್ಯಯನ ವಿಚಾರವನ್ನು ಕೃಷಿಕರೊಂದಿಗೆ ಹಂಚಿಕೊಂಡು ಸಂವಾದ ನಡೆಸಿದರು.


ಬಂಟರ ಸಂಘದ ಮಹಿಳಾ ಘಟಕ ಅಧ್ಯಕ್ಷೆ ಗೀತಾ ಮೋಹನ್‌ ರೈ, ಕಲಾವತಿ ಜಯಂತ ನಡುಬೈಲು, ಮಲ್ಲಿಕಾ ಸುಂದರ ರೈ ಮಂದಾರ, ರಾಜೀವ ರೈ ಕೋರಂಗ, ಹಾಲು ಉತ್ಪಾದಕರಾದ ಯಶೋಧರ ಚೌಟ ಪಯಂದೂರು, ಸದಾಶಿವ ರೈ ದಂಪತಿ, ಬಾಲಕೃಷ್ಣ ಚೌಟ, ಕೋರಂಗ ಕರುಣಾಕರ ರೈ, ದಿನಕರ ರೈ ಮಾಣಿಪ್ಪಾಡಿ, ಪ್ರವೀಣ ರೈ, ಪ್ರೀತಿ ಎಸ್.‌ ರೈಯವರ ಸಹೋದರ ನಿತ್ಯಾನಂತ ಆಳ್ವ ದಂಪತಿ ಮತ್ತಿತರರು ಉಪಸ್ಥಿತರಿದ್ದರು. ಸನ್ಮಾನಿತರಿಗೆ ಮತ್ತು ನಡುಬೈಲು ದಂಪತಿಗೆ ಶುಭ ಹಾರೈಕೆ ಮಾಡಿದರು.

LEAVE A REPLY

Please enter your comment!
Please enter your name here