ಪುತ್ತೂರು: ಚೈತ್ರಾ ರಮೇಶ್ ,ಸಾಯಿನಕ್ಷತ್ರ ಮಜಿಕೋಡಿ ಹಾಗೂ ಮನೆಯವರ ವತಿಯಿಂದ ಸೇವಾರೂಪವಾಗಿ ಪ್ರಾಯೋಜಿಸಲ್ಪಟ್ಟ ವಿಶೇಷ ಕಲಾಕಾರ್ಯಕ್ರಮ ನಡೆಯಿತು.ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜಾರ್ಚನೆ ಸಲ್ಲಿಸಲಾಯಿತು.
ಶಾಂತಾಕುಮಾರಿ ದೇಲಂಪಾಡಿ, ಪೂರ್ಣಿಮ ಬನಾರಿ , ಪೂಜಾ ಸಿ.ಎಚ್, ಗುರುತ್ವಿಕ್, ಸಚಿತ್, ಹನ್ವಿತ್, ಅತಿಥಿ, ಶ್ರೀವಾಣಿ, ಮನ್ವಿತ, ಸ್ವಾತಿ, ಹನಿ, ಲಕ್ಷ, ಶ್ರವಿ, ಧೃತಿ, ರಕ್ಷ ಮತ್ತು ಈಶ್ವರಿ ಪ್ರಕೃತಿ “ಭಗವದ್ಗೀತೆ” ಪಾರಾಯಣ ನಡೆಸಿದರು.

ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ನಾರಾಯಣ ದೇಲಂಪಾಡಿ ಅವರ ಅರ್ಥಸಾಹಿತ್ಯವನ್ನೊಳಗೊಂಡ “ ಮಾರಣಾಧ್ವರ “ ಯಕ್ಷಗಾನ ತಾಳಮದ್ದಳೆಯು ಯಂ. ರಮಾನಂದ ರೈ ದೇಲಂಪಾಡಿ ಅವರ ನಿರ್ದೇಶನದಲ್ಲಿ ರಾಮನಾಯ್ಕ ದೇಲಂಪಾಡಿ ಅವರ ಸಹಕಾರದೊಂದಿಗೆ ಹಿರಿಯ ಮಹಿಳಾ ಸದಸ್ಯರರಿಂದ ಪ್ರಸ್ತುತಗೊಳಿಸಿದರು.
ಭಾಗವತಿಕೆಯಲ್ಲಿ ನಿತೀಶ್ ಕುಮಾರ್ ಎಂಕಣ್ಣಮೂಲೆ,ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ,ಸಾಯಿ ನಕ್ಷತ್ರ ಪೆರಾಜೆ ಅವರು ಕಾಣಿಸಿಕೊಂಡರು. ಚೆಂಡೆಮದ್ದಳೆ ವಾದನದಲ್ಲಿ ಶ್ರೀಧರ ಆಚಾರ್ಯ ಈಶ್ವರಮಂಗಲ,ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಬಿ.ಎಚ್. ಕೃಷ್ಣಪ್ರಸಾದ ಬೆಳ್ಳಿಪ್ಪಾಡಿ , ಸದಾನಂದ ಮಯ್ಯಾಳ ಮತ್ತು ನಾರಾಯಣ ಪಾಟಾಳಿ ಮಯ್ಯಾಳ ಅವರು ಸಹಕರಿಸಿದರು. ಚಕ್ರತಾಳ ನುಡಿಸುವಿಕೆಯಲ್ಲಿ ಮಾಸ್ಟರ್ ಶ್ರೀದೇವ್ ಈಶ್ವರಮಂಗಲ ತನ್ನ ಕೈಚಳಕ ಮೂಡಿಸಿದರು.
ಅರ್ಥಧಾರಿಗಳಾಗಿ ಸರಿತಾ ರಮಾನಂದ ರೈ ದೇಲಂಪಾಡಿ, ಪವಿತ್ರಾ ದಿವಾಕರ ಗೌಡ ಮುದಿಯಾರು, ಪ್ರೇಮ ಮನೋಹರ ಬಂದ್ಯಡ್ಕ, ಜಲಜಾಕ್ಷಿ ಸತೀಶ್ ರೈ ಬೆಳ್ಳಿಪ್ಪಾಡಿ, ಸುಮಲತಾ ಉದಯಕುಮಾರ್ ದೇಲಂಪಾಡಿ, ಸುಜಾತ ಮೋಹನದಾಸ್ ರೈ ದೇಲಂಪಾಡಿ, ಕುಸುಮ ಜಯಪ್ರಕಾಶ ಕುತ್ತಿಮುಂಡ. ಶೀಲಾ ಹೇಮನಾಥ ಕೇದಗಡಿ, ಶಾಂತಾಕುಮಾರಿ ದೇಲಂಪಾಡಿ ಅವರು ತಾಳಮದ್ದಳೆಯಲ್ಲಿ ಪಾಲ್ಗೊಂಡರು.
ಪೂಜಾ ಸಿ.ಎಚ್ ಸ್ವಾಗತಿಸಿದರು. ನಂದಕಿಶೋರ ಬನಾರಿ ವಂದಿಸಿದರು.