ನಾಳೆ(ಮಾ.25): ಉಪ್ಪಿನಂಗಡಿಯಲ್ಲಿ ಗಯಾಪದ ರಂಗ ಸಂಭ್ರಮ-ಕಲಾ ಪೋಷಕರಿಗೆ ಗೌರವಾರ್ಪಣೆ-ಅಭಿನಂದನೆ-ಸನ್ಮಾನ

0

ಪುತ್ತೂರು: ಗಯಾಪದ ಕಲಾವಿದೆರ್ ಉಬಾರ್ ವತಿಯಿಂದ ಗಯಾಪದ ರಂಗ ಸಂಭ್ರಮ, ಕಲಾ ಪೋಷಕರಿಗೆ ಗೌರವಾರ್ಪಣೆ, ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ಮಾ.25ರಂದು ರಾತ್ರಿ 7ರಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಳಿಕಾಂಬ ವೇದಿಕೆಯಲ್ಲಿ ನಡಯಲಿದೆ.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್‌ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ, ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಉಪ್ಪಿನಂಗಡಿ ವೇದಶಂಕರ ನಗರದ ಶ್ರೀರಾಮ ಶಾಲೆಯ ಸಂಚಾಲಕ ಯು.ಜಿ.ರಾಧ ಶಾಂತಿನಗರ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಉಬಾರ್ ಗಯಾಪದ ಕಲಾವಿದೆರ್ ತಂಡದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಪೆರುವಾಯಿ ನಿರಾಲ, ಸಂಚಾಲಕ ಕಿಶೋರ್ ಕುಮಾರ್ ಜೋಗಿ ಮತ್ತು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ ಭಾಗವಹಿಸಲಿದ್ದಾರೆ. ನಾಟಕ ರಚನೆಗಾರರೂ ನಿರ್ದೇಶಕರೂ ಕಲಾವಿದರೂ ಉದ್ಯಮಿಗಳೂ ಆಗಿರುವ ಕಲಾ ತಪಸ್ವಿ ರವಿಶಂಕರ ಶಾಸ್ತ್ರಿ ಮಣಿಲ ಅವರಿಗೆ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯಲಿದ್ದು ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಸಚಿನ್ ಬೇಕ್ ಮತ್ತು ಐಸ್‌ಕ್ರೀಂ ಮಾಲಕ ಸಚಿನ್, ಪ್ರತಾಪ್, ಲತಾ ಮತ್ತು ಮಕ್ಕಳು ಪೆರಿಯಡ್ಕ, ಪೆರಿಯಡ್ಕದ ಶ್ರೀದೇವಿ ಇಂಜಿನಿಯರಿಂಗ್ ಮಾಲಕ ಸದಾಶಿವ ಬಂಗೇರ, ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆಯ ಅಧ್ಯಕ್ಷ ಸುನಿಲ್ ಅನಾವು, ಹರಿ ಜುವೆಲ್ಲರ್ಸ್‌ನ ಗಣೇಶ್ ಭಟ್, ಉದ್ಯಮಿ ನಾಗೇಶ್ ಪ್ರಭು, ಕೆಮ್ಮಾಯಿ ರಂಗನಾಥ ಟ್ರೇಡರ್ಸ್‌ನ ಯೋಗೀಶ್, ಬನ್ನೆಂಗಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗುಣಕರ ಅಗ್ನಾಡಿ, ಉಪ್ಪಿನಂಗಡಿ ಸುವ್ಯ ಕ್ರೀಂ ಪಾರ್ಲರ್‌ನ ಯು. ಯತೀಶ್ ಶೆಟ್ಟಿ, ಮಲ್ಲಿಕಾ ಹೋಟೆಲ್ ಮತ್ತು ಕ್ಯಾಟರಿಂಗ್ ಮಾಲಕ ಜಯರಾಮ ಶೆಟ್ಟಿ ಹಾಗೂ ಪೆರ್ನೆ ಎಸ್‌ಎಸ್ ಕನ್‌ಸ್ಟ್ರಕ್ಷನ್ಸ್‌ನ ನವೀನ್ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಉಬಾರ್ ಗಯಾಪದ ಕಲಾವಿದರಿಂದ ನಾಗಮಾಣಿಕ್ಯ ನಾಟಕ
ರಾತ್ರಿ 8.30ರಿಂದ ಗಯಾಪದ ಕಲಾವಿದೆರ್ ಉಬಾರ್ ತಂಡದಿಂದ ತುಳುಭೂಮಿಯಲ್ಲಿ ಸಂಚಲನ ಮೂಡಿಸಿದ ಅದ್ದೂರಿ ರಂಗವಿನ್ಯಾಸದ ರೋಚಕ ಸನ್ನಿವೇಶಗಳಿಂದ ಕೂಡಿದ ತುಳು ಚಾರಿತ್ರಿಕೆ ಪೌರಾಣಿಕ ನಾಟಕ ನಾಗಮಾಣಿಕ್ಯ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here