ಪುತ್ತೂರು: ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮವು ಮಾ.22ರಂದು ಅನುರಾಗ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೆಂಕಿಲದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಅವರು ವಹಿಸಿ ಮಾತನಾಡುತ್ತಾ ಸಂಘದ ಚಟುವಟಿಕೆಗಳ ಬಗ್ಗೆ ಪ್ರಶಂಸಿಸಿ, ಶುಭ ಹಾರೈಸಿದರು.
ಸುದಾಮ ಕೆದಿಲಾಯ, ಸುಬ್ರಹ್ಮಣ್ಯ ಶರ್ಮ, ಕವಿತಾ ಅಡೂರು, ವಿ.ಬಿ.ಅರ್ತಿಕಜೆ, ಭಾಗ್ಯಲಕ್ಷ್ಮಿ ಅರ್ತಿಕಜೆ, ಶಂಕರಿ ಎಂ. ಎಸ್ ಭಟ್, ಹೈಮಾವತಿ ಭಟ್, ತುಳಸೀದಾಸ ಪಿಲಿಂಜ ಮುಂತಾದವರು ತಮ್ಮ ನಗೆ ಚಟಾಕಿಗಳಿಂದ ಸಭಿಕರನ್ನು ರಂಜಿಸಿದರು.
ಸಂಘದ ಅಧ್ಯಕ್ಷರಾದ ಸತ್ಯೇಶ್ ಕೆದಿಲಾಯರು ಸರ್ವರನ್ನೂ ಸ್ವಾಗತಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಪರಿಚಯಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಶಂಕರಿ ಎಂ. ಎಸ್ ಭಟ್ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಶರ್ಮರು ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.