ನೃತ್ಯಾರ್ಪಣ
ಸಭಾಕಾರ್ಯಕ್ರಮ-ಸನ್ಮಾನ
ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ 14ನೇ ವರ್ಷದ ವಾರ್ಷಿಕೋತ್ಸವ-ತುಡರ್ ಹಬ್ಬ ಕಾರ್ಯಕ್ರಮವು ಮಾ.24ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ನೃತ್ಯಾರ್ಪಣ-ಸಾಂಸ್ಕೃತಿಕ ಕಲರವ
ಸಂಜೆ 7 ಗಂಟೆಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ರವರು ಉದ್ಘಾಟಿಸಿದರು. ಬಳಿಕ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಾವು ಶಾಖೆಯ ತುಡರ್ ಕಲಾ ಸಂಘದ ವಿದ್ಯಾರ್ಥಿಗಳಿಂದ “ನೃತ್ಯಾರ್ಪಣ” ಕಾರ್ಯಕ್ರಮ ನಡೆಯಿತು. ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ ಪುತ್ತೂರು, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ಭಟ್ ಸುಳ್ಯ, ಕೊಳಲು ವಾದನದಲ್ಲಿ ಕುಮಾರಿ ಮೇಧಾ ಉಡುಪ ಹಾಗೂ ನಾಟ್ಯ ಶಿಕ್ಷಕಿಯರಾದ ಅಕ್ಷತಾ ಮತ್ತು ಅಪೂರ್ವರವರು ಸಹಕರಿಸಿದರು.
ಸಭಾ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾವು ದಿವ್ಯನಾಥ ಶೆಟ್ಟಿಯವರು ಸಭಾಧ್ಯಕ್ಷತೆ ವಹಿಸಿದ್ದರು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಸನ್ಮಾನ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಹನುಮಗಿರಿ ಗಜಾನನ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ನಾಗಪ್ಪ ಗೌಡ ಬೊಮ್ಮೆಟ್ಟಿ, ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ನ ಮಾಲಕ ಮೋಹನದಾಸ ರೈ, ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಪ್ರಗತಿಪರ ಕೃಷಿಕರು, ಹೈನುಗಾರಿಕೆಯ ಶ್ರೇಷ್ಟ ಸಾಧಕರು, ಹಿರಿಯ ಸಹಕಾರಿಯೂ ಆಗಿರುವ ಮುಂಡಕೊಚ್ಚಿ ನಿವಾಸಿ ದಿವಾಕರ ಪ್ರಭುರವರಿಗೆ ತುಡರ್ ಯುವಕ ಮಂಡಲದಿಂದ ಈ ಬಾರಿಯ ಸನ್ಮಾನ ನೀಡಲಾಯಿತು. ನನ್ಯ ಅಚ್ಚುತ ಮೂಡೆತ್ತಾಯರವರು ಸನ್ಮಾನಿತರಿಗೆ ಶಾಲು ಹೊದಿಸಿ, ಪೇಟ ಇಟ್ಟು, ಏಲಕ್ಕಿ ಹಾರ ಹಾಕಿ, ಫಲಪುಷ್ಫ ಕಾಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಿದರು. ಪೂಜಾಲಕ್ಷ್ಮೀ ಚಾಕೋಟೆಯವರು ಸನ್ಮಾನಪತ್ರ ವಾಚಿಸಿದರು.
ಮನರಂಜಿಸಿದ ತುಳುನಾಟಕ:
ಶರತ್ ಉಚ್ಚಿಲ ನಿರ್ದೇಶನದಲ್ಲಿ ಕಾಪು ರಂಗತರಂಗ ಕಲಾವಿದರಿಂದ ಕುಟ್ಯಣ್ಣನ ಕುಟುಂಬ ಎಂಬ ತುಳು ತೆಲಿಕೆದ ಸಾಂಸಾರಿಕ ನಾಟಕ ಮನರಂಜಿಸಿತು.
ತುಡರ್ ಕಲಾ ಸಂಘದ ಸದಸ್ಯೆ ಕು| ಅನಿಕಾ ಕುಂಜತ್ತಾಯ ಪ್ರಾರ್ಥಿಸಿದರು. ತುಡರ್ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನನ್ಯ ವಂದಿಸಿದರು. ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಪದಾಧಿಕಾರಿಗಳಾದ ರಾಮಣ್ಣ ನಾಯ್ಕ ಆಚಾರಿಮೂಲೆ, ಸಂಕಪ್ಪ ಪೂಜಾರಿ ಚಾಕೋಟೆ, ಲಿಂಗಪ್ಪ ನಾಯ್ಕ ನನ್ಯ, ಶ್ರೀಕುಮಾರ್ ಬಲ್ಯಾಯ, ನಿರಂಜನ ರಾವ್, ಹರ್ಷಿತ್ ಎ.ಆರ್, ರತೀಶ್ ಪಾಟಾಳಿರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಯುವಕ ಮಂಡಲದ ಸದಸ್ಯರುಗಳು ಸಹಕರಿಸಿದರು.