ಪುತ್ತೂರು: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಕಲ್ಪಣೆ ಇದರ ಆಶ್ರಯದಲ್ಲಿ 43ನೇ ವರ್ಷದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ನೇಮೋತ್ಸವ ಮಾ.22ಮತ್ತು 23ರಂದು ನಡೆಯಿತು.
ಮಾ.22ರಂದು ಬೆಳಿಗ್ಗೆ ಸ್ಥಳಶುದ್ದಿ, ಗಣಪತಿಹೋಮ ನಡೆಯಿತು. ಸಂಜೆ ಶ್ರೀ ಆದಿನಾಗಬ್ರಹ್ಮ ದೇವರ ಪೂಜೆ ನಡೆಯಿತು. ನಂತರ ಶ್ರೀ ಸುಬ್ರಹ್ಮಣ್ಯೇಶ್ವರ ಕುಣಿತ ಭಜನಾ ಮಂಡಳಿ ಸರ್ವೆ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕಲ್ಕಾರು ಸರ್ವೆ ಇವರಿಂದ ಕುಣಿತ ಭಜನೆ ನಡೆಯಿತು. ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯುವುದು ನಡೆಯಿತು. ಭಜನಾ ಕಾರ್ಯಕ್ರಮವನ್ನು ಸುರೇಶ್ ಕುಮಾರ್ ಸೊರಕೆ ಉದ್ಘಾಟಿಸಿದರು. ರಾತ್ರಿ ಗಂಟೆ 9ರ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ನಂತರ ಮೊಗೇರ್ಕಳ ಗರಡಿ ಇಳಿಯುವುದು, ಮೊಗೇರ್ಕಳ ಮೀಸೆ ಒಪ್ಪಿಸುವುದು, ಕಿನ್ನಿಮಾಣಿ ದೈವ ಗರಡಿ ಇಳಿಯುವುದು ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಮಾ.23ರಂದು ಕೊರಗತನಿಯ ದೈವದ ನೇಮ, ಗುಳಿಗ ದೈವದ ನೇಮ ನಡೆಯಿತು. ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಕಲ್ಪಣೆ ಇದರ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.