
ಪುತ್ತೂರು: ಈಶ್ವರಮಂಗಲ ಬೆಳ್ಳಿಚಡವು ಬಳಿ ಕಾರು ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಕಾರು ಚಾಲಕ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಕಾರು ಚಾಲಕ ಬೆಳ್ಳಾರೆ ಕಳಂಜ ನಿವಾಸಿ ಹ್ಯಾರೀಸ್ ಗಾಯಗೊಂಡವರು. ಅವರು ಚಲಾಯಿಸುತ್ತಿದ್ದ ಕಾರು ಮತ್ತು ಪುತ್ತೂರಿಗೆ ಸುಲೈಮಾನ್ ಎಂಬವರು ಚಲಾಯಿಸುತ್ತಿದ್ದ ಬಸ್ ನಡುವೆ ಈಶ್ವರಮಂಗಲ ಬೆಳ್ಳಿಚಡವು ಬಳಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಬಸಕ್ಕೆ ಕಾರು ಮತ್ತು ಬಸ್ಗೆ ಹಾನಿಯಾಗಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.